ಗೋಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ: ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್
ಬೆಂಗಳೂರು: ಗೋಹತ್ಯೆ ನಿಷೇಧಿಸುವ ಕಾನೂನನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕರ್ನಾಟಕ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಬುಧವಾರ ವಿಧಾನ ಪರಿಷತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕರ್ನಾಟಕ ಜಾನುವಾರು ವಧೆ ತಡೆ ಮತ್ತು ಸಂರಕ್ಷಣೆ ಕಾಯಿದೆ, 2020 ಅನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ವೆಂಕಟೇಶ್, ಇನ್ನೂ ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ವೆಂಕಟೇಶ್ ಅವರ ಹೇಳಿಕೆಯ ಹೊರತಾಗಿಯೂ, ಬಿಜೆಪಿ […]
ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ: ಜುಲೈ 13 ರಂದು ಉಡಾವಣೆ ಸಾಧ್ಯತೆ; ಆಗಸ್ಟ್ ನಲ್ಲಿ ಚಂದನ ದಕ್ಷಿಣ ಧ್ರುವದ ಮೇಲೆ ಪಾದಾರ್ಪಣೆ!!
ಶ್ರೀಹರಿಕೋಟಾ: ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ GSLV ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರಯಾನ 3 ಮಿಷನ್ ಪ್ರಸ್ತುತ ಜುಲೈ 13 ರಂದು 9:00 UT (ಭಾರತದ ಪ್ರಮಾಣಿತ ಸಮಯ ಮಧ್ಯಾಹ್ನ 2:30) ಕ್ಕೆ ಉಡಾವಣೆಗೊಳ್ಳುವ ಸಾಧ್ಯತೆ ಇದೆ. ಜುಲೈ 19 ರವರೆಗಿನ ಬಫರ್ ಸಮಯವನ್ನು ನಿಗದಿಪಡಿಸಲಾಗಿದೆ. ಇಂದು ಮುಂಜಾನೆ, SDSC-SHAR ನಲ್ಲಿ, LVM3 M4 ವಾಹನವು ಚಂದ್ರಯಾನ-3 ನೊಂದಿಗೆ ಉಡಾವಣಾ ಪ್ಯಾಡ್‌ಗೆ ತನ್ನ ಚಲನೆಯನ್ನು ಪ್ರಾರಂಭಿಸಿದೆ. pic.twitter.com/7V6nHsxE5V — ISRO […]
ಜು.18 ರಿಂದ ಆ. 17ರ ತನಕ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಹೋರಾತ್ರಿ ಭಜನಾ ಮಹೋತ್ಸವ
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರಾವಣ ಪುರುಷೋತ್ತಮ ಅಧಿಕ ಮಾಸ ಅಹೋರಾತ್ರಿ ಭಜನಾ ಮಹೋತ್ಸವವು ಜು.18 ರಿಂದ ಆ. 17ರ ತನಕ ನಿರಂತರ ನಡೆಯಲಿದೆ. ಊರ-ಪರವೂರ ಭಜನಾ ಮಂಡಳಿಗಳುಒಂದು ತಿಂಗಳ ಕಾಲ ಅಹೋರಾತ್ರಿ ಭಜನೆ ಸೇವೆ ನೀಡಲಿದೆ. ಅಲ್ಲದೆ, ಪ್ರತೀ ಆದಿತ್ಯವಾರ ಸಂಜೆ ನಗರ ಭಜನೆ ಹಮ್ಮಿಕೊಳ್ಳಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಗೆ ಜು. 31 ಕೊನೆ ದಿನ
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ, ರೈತರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ, ವಿಮಾ ಮೊತ್ತ ಪ್ರತಿ ಹೆ.ಗೆ 63,750 ರೂ.ಗೆ ವಿಮಾ ಕಂತಿನ ದರ ಪ್ರತಿ ಹೆ.ಗೆ 1275 (2%) ರೂ.ಗಳಂತೆ ಜುಲೈ 31 ರ ಒಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಬ್ಯಾಂಕ್ […]
ಮಕ್ಕಳ ರಕ್ಷಣಾ ಘಟಕದಲ್ಲಿ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರ ಹುದ್ದೆ ಖಾಲಿ
ಉಡುಪಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತೆರವಿರುವ ಲೀಗಲ್ ಕಂ ಪ್ರೋಭೇಷನ್ ಆಫೀಸರ್ ಹಾಗೂ ಲೆಕ್ಕಿಗರು ತಲಾ 1 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಹೊಂದಿರುವ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸರ್ಕಾರಿ, ಎನ್.ಜಿ.ಓ ಹಾಗೂ ಕಾನೂನು ವಿಷಯಗಳೊಂದಿಗೆ ಕನಿಷ್ಟ 2 ವರ್ಷಗಳ ಕೆಲಸ ಮಾಡಿದ ಅನುಭವ ಮತ್ತು ಮಹಿಳೆಯರ ಹಾಗೂ ಮಕ್ಕಳ ಹಕ್ಕು ಮತ್ತು ರಕ್ಷಣೆ ಸಮಸ್ಯೆಗಳ ಕುರಿತು […]