ಭಾರತದ ಆರ್ಥಿಕತೆ ಏರುಗತಿ : ಜಿಎಸ್​ಟಿ ಸಂಗ್ರಹ ಶೇ 12ರಷ್ಟು ಹೆಚ್ಚಳ

ನವದೆಹಲಿ : ಜಿಎಸ್​ಟಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇಕಡಾ 12 ರಷ್ಟು ಹೆಚ್ಚಾಗಿದೆ. ಜಿಎಸ್‌ಟಿ ತೆರಿಗೆ ನೀತಿಯನ್ನು ಭಾರತದಲ್ಲಿ ಆರು ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.ಭಾರತೀಯ ಆರ್ಥಿಕತೆಯು ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಅಂಕಿ – ಅಂಶಗಳಿಂದ ತಿಳಿದು ಬರುತ್ತಿದೆ. ಜೂನ್ 2023 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು 1,61,497 ಕೋಟಿ ರೂಪಾಯಿಗಳಾಗಿರುವುದು ಇದಕ್ಕೆ ಒಂದು ಸಾಕ್ಷಿಯಾಗಿದೆ.ಭಾರತದ ಜಿಎಸ್​ಟಿ ಸಂಗ್ರಹಣೆಗಳು ಅತ್ಯುತ್ತಮವಾಗಿದ್ದು, ದೇಶದ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿರುವುದನ್ನು ಸೂಚಿಸುತ್ತಿದೆ. ಹಲವು ಸಾಮಾನ್ಯ ಬಳಕೆಯ […]

ಮುಂಗಡ​ ಉಡುಗೊರೆ ನೀಡಿದ ಫ್ಯಾನ್ಸ್ ಕ್ಯಾಪ್ಟನ್ ಕೂಲ್​ ಧೋನಿ ಹುಟ್ಟುಹಬ್ಬಕ್ಕೆ ಹೈದರಾಬಾದ್​ನಲ್ಲಿ ​52 ಅಡಿ ಕಟೌಟ್

ಈ ವಿಶೇಷ ದಿನದಂದು ಧೋನಿಗೆ 42 ವರ್ಷ ತುಂಬಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಗೆ ಗುಡ್​ ಬೈ ಹೇಳಿರುವ ಮಹಿ ಐಪಿಎಲ್​​​ ನಲ್ಲಿ ಮಾತ್ರ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಭಾರತ ದೇಶವಲ್ಲದೇ ಇಡೀ ವಿಶ್ವದ ಕ್ರಿಕೆಟ್ ಲೋಕದ ಪ್ರೇಮಿಗಳ ಹೃದಯವನ್ನು ಆಳಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಳೆ ಜುಲೈ 7 ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.ಎಂಎಸ್ ಧೋನಿ ಹುಟ್ಟಹಬ್ಬಕ್ಕೂ ಮೊದಲೇ ಅಭಿಮಾನಿಗಳು ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ಹೌದು, ಧೋನಿ […]

14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ 400 ಕೋಟಿ ರೂಪಾಯಿ ವೆಚ್ಚ

‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವು ಆರಂಭದಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಯಕ್ಷನ್ ದೃಶ್ಯಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ 25 ಮಿಲಿಯನ್​ಗೂ ಹೆಚ್ಚು ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಾಲಿನ ಹೈ ವೋಲ್ಟೆಜ್ ಚಿತ್ರ ಸಲಾರ್ […]

61.41 ಲಕ್ಷದಷ್ಟು ಮಾನವ ದಿನ ಸೃಜನೆಯೊಂದಿಗೆ ದಾಖಲೆ, ರಾಜ್ಯಕ್ಕೆ ಬೆಳಗಾವಿ ಜಿಲ್ಲೆ ಫಸ್ಟ್. ನರೇಗಾ ಕೂಲಿಕಾರರಿಗೆ ಕೆಲಸ

ಬೆಳಗಾವಿ: ಜಿಲ್ಲೆಗೆ 2023-24ನೇ ಸಾಲಿಗೆ 1.40 ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಮಾನವ ದಿನ ಸೃಜನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಾನವ ದಿನ ಸೃಜನೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಈ ಸಾಲಿನ ಆರ್ಥಿಕ ವರ್ಷದ ಕೇವಲ ಮೂರು ತಿಂಗಳಲ್ಲಿ 61.41 ಲಕ್ಷದಷ್ಟು […]

ಪಡುಬಿದ್ರೆ: ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಸೊರಕೆ

ಪಡುಬಿದ್ರೆ: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪಡುಬಿದ್ರಿ ಬೀಚ್‌ ನ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಇಲಾಖೆ ಅಭಿಯಂತರರನ್ನು ಕರೆಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.