ಹಿಂದೂ ಮಹಾಸಾಗರದಲ್ಲಿರುವ ದೈತ್ಯ “ಗುರುತ್ವಾಕರ್ಷಣೆಯ ರಂಧ್ರ” ರಚನೆಗೆ ಕಾರಣ ಹುಡುಕಿದ ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳು!!

ಬೆಂಗಳೂರು: ಭೂಮಿಯ ಗುರುತ್ವಾಕರ್ಷಣೆಯು ಹಿಂದೂ ಮಹಾಸಾಗರದ ಮಧ್ಯದಲ್ಲೆಲ್ಲೋ ದುರ್ಬಲವಾಗಿದೆ. ಇದಕ್ಕೆ ಕಾರಣ ಇಲ್ಲಿ ಇರುವ ದೈತ್ಯ ” ಗುರುತ್ವಾಕರ್ಷಣ ರಂಧ್ರ” . ಭಾರತೀಯ ವಿಜ್ಞಾನಿಗಳ ತಂಡವು ಹಿಂದೂ ಮಹಾಸಾಗರದಲ್ಲಿ ಮೂರು ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿರುವ ದೈತ್ಯ “ಗುರುತ್ವಾಕರ್ಷಣೆಯ ರಂಧ್ರ” ಕ್ಕೆ ಕಾರಣವೇನು ಎಂದು ಗುರುತಿಸಿದೆ. ಇಂಡಿಯನ್ ಓಷನ್ ಜಿಯೋಯ್ಡ್ ಲೋ (IOGL) ಎಂದು ಕರೆಯಲ್ಪಡುವ ಈ ಗುರುತ್ವಾಕರ್ಷಣೆಯ ರಂಧ್ರವು ಭೂಮಿಯ ಪ್ರಮುಖ ಗುರುತ್ವಾಕರ್ಷಣೆಯ ಅಸಂಗತತೆಯಾಗಿದೆ. ಇಲ್ಲಿ ಗುರುತ್ವಾಕರ್ಷಣೆಯು ಸರಾಸರಿಗಿಂತ ಕಡಿಮೆಯಾಗಿದೆ, ಹೀಗಾಗಿ ಸಮುದ್ರ ಮಟ್ಟವು […]

ಕೋಟ: ಭಾರೀ ಮಳೆಗೆ ಆಯತಪ್ಪಿ ಸ್ಕೂಟರ್ ಸಮೇತ ಕೆರೆಗೆ ಬಿದ್ದು ವ್ಯಕ್ತಿ ಸಾವು

ಕೋಟ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸ್ಕೂಟರ್ ಸವಾರರೊಬ್ಬರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಸ್ಥಳಿಯ ನಿವಾಸಿ ದಿವಾಕರ್ ಶೆಟ್ಟಿ( 65) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ತಮ್ಮ ಸ್ಕೂಟರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಮನೆ ಸಮೀಪದ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದಾರೆ. ಸುಮಾರು 15- 20 ಅಡಿ ಆಳದ ಕೆರೆಗೆ […]

ತ್ರಿಶಾ ಸಂಸ್ಥೆಯಲ್ಲಿ ಗುರು ಪೌರ್ಣಮಿ ಆಚರಣೆ

ಕಟಪಾಡಿ: ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು. ಸರಿಯಾದ ಗುರುವಿನ ಮಾರ್ಗದರ್ಶನದಿಂದ ಮಾತ್ರ ವಿದ್ಯಾರ್ಥಿಯ ಬದುಕು ಯಶಸ್ಸಿನತ್ತ ಸಾಗಲು ಸಾಧ್ಯ ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು. ಅವರು ಮಂಗಳವಾರದಂದು ತ್ರಿಶಾ ಸಂಸ್ಥೆಯಲ್ಲಿ ನಡೆದ ಗುರು ಪೂರ್ಣಿಮೆ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುಗಳ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಕಾಲೇಜಿನ ಪ್ರಾಧ್ಯಾಪಕರುಗಳ ಮೇಲೆ ಪುಷ್ಪ ವೃಷ್ಠಿ ಮಾಡಿ ಪ್ರಾಧ್ಯಾಪಕರ ಕಾಲು ತೊಳೆದು ಉಡುಗೊರೆ ನೀಡುವ […]

ಇಂದು ICAI CA 2023 ಅಂತಿಮ ಮತ್ತು ಮಧ್ಯಂತರ ಫಲಿತಾಂಶ ಘೋಷಣೆ ಸಾಧ್ಯತೆ

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸುವ CA ಅಂತಿಮ ಮತ್ತು ಮಧ್ಯಂತರ ಫಲಿತಾಂಶವನ್ನು ಇಂದು ಘೋಷಿಸಲಾಗುವುದು. ICAI CA 2023 ರ ಫಲಿತಾಂಶಗಳನ್ನು ಹೊರತರುವ ಅಧಿಕೃತ ಪ್ರಕಟಣೆ ಪ್ರಕಾರ, ಮೇ 2023 ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಮತ್ತು ಮಧ್ಯಂತರ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 5, 2023 ರಂದು ಬುಧವಾರ ಪ್ರಕಟಿಸುವ ಸಾಧ್ಯತೆಯಿದೆ ಮತ್ತು ಅಭ್ಯರ್ಥಿಗಳು icai.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದು. ಸಿಎ ಇಂಟರ್ ಮತ್ತು ಅಂತಿಮ ಪರೀಕ್ಷೆಯನ್ನು […]

ಮಣಿಪಾಲ: ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಉಚಿತ ಔಷಧೀಯ ಸಸ್ಯಗಳ ವಿತರಣಾ ಕಾರ್ಯಕ್ರಮ

ಮಣಿಪಾಲ: ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಪ್ರತಿ ವರ್ಷದಂತೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಸೋಮವಾರದಂದು ಆಸಕ್ತರಿಗೆ ಆಯ್ದ ಔಷಧೀಯ ಸಸ್ಯಗಳಾದ ಪಲಾಶ, ದಾಲ್ಚಿನಿ, ಕಹಿಬೇವು, ಮಾವು, ಪುನರ್ಪುಳಿ, ಲಕ್ಮೀತರು, ರಕ್ತಚಂದನ, ನೆಲ್ಲಿ, ಸೀತಾಫಲ, ಬಿಲ್ವ, ಹುಣಸೆ, ಬೇಂಗ (ಹೊನ್ನೆ) ಮತ್ತು ಇತರ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರಾಂಶುಪಾಲರಾದ ಡಾ.ಸತ್ಯನಾರಾಯಣ ಬಿ, ಗಿಡ ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ದ್ರವ್ಯಗುಣ ವಿಭಾಗದ […]