ಮುಖ್ಯಮಂತ್ರಿ ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ: ಎಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸೋಮವಾರದಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಕಚೇರಿಯ ಸಿಬ್ಬಂದಿಗಳು ಶಾಸಕರ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಯಾವುದೇ ಕೆಲಸ ಮಾಡಲು 30 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಬಗ್ಗೆ ಸುಳಿವು ನೀಡಿದ ಅವರು ಈ ಸರ್ಕಾರದಲ್ಲಿ ವರ್ಗಾವಣೆ ಸಿಂಡಿಕೇಟ್ ಶುರುವಾಗಿದೆ. ಒಂದೊಂದು ಇಲಾಖೆಯಲ್ಲಿ ಒಂದೊಂದು ಸಿಂಡಿಕೇಟ್ ಇರುತ್ತದೆ. ಯಾರನ್ನು […]

ಬುಡಕಟ್ಟು ಜನಾಂಗದವರನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲು ಚರ್ಚಿಸಿದ ಸಂಸದೀಯ ಸಮಿತಿ; ಯುಸಿಸಿ ಅಗತ್ಯವಿಲ್ಲ ಎಂದ ಕಾಂಗ್ರೆಸ್ ಮತ್ತು ಡಿ.ಎಂ.ಕೆ

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವಿಷಯವನ್ನು ಹೊಸದಾಗಿ ಪರಿಶೀಲಿಸಬೇಕು ಎಂದು ಸಂಸದೀಯ ಸಮಿತಿಯ ಮುಂದೆ ಭಾರತೀಯ ಕಾನೂನು ಆಯೋಗವು ಸೋಮವಾರ ವಿಷಯವನ್ನು ಪ್ರಸ್ತಾಪಿಸಿದೆ. ಯುಸಿಸಿ “ಈ ಹಂತದಲ್ಲಿ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ” ಎಂದು 2018 ರಲ್ಲಿ ಆಯೋಗ ಅಭಿಪ್ರಾಯ ಪಟ್ಟಿದೆ. ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸೇರಿದಂತೆ ಕೆಲವು ವಿರೋಧ ಪಕ್ಷಗಳು ಯುಸಿಸಿ ಅನುಷ್ಠಾನವನ್ನು ಬೆಂಬಲಿಸುತ್ತಿಲ್ಲ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಕಾನೂನು […]

ಮಂಗಳೂರು: ಶ್ವಾನ ಪ್ರೇಮಿ ರಜನಿ ಶೆಟ್ಟಿ ಮೇಲೆ ಹಲ್ಲೆ; ದೂರು ದಾಖಲು

ಮಂಗಳೂರು: ನಗರದ ಬಲಾಳ್ ಬಾಗ್‌ನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಬಹು ಚರ್ಚಿತ ಹೆಸರು. ಪ್ರಾಣಿಗಳ ರಕ್ಷಣೆ ಮತ್ತು ಪೋಷಣೆಯಲ್ಲಿ ಇವರದ್ದು ಎತ್ತಿದ ಕೈ. ತಮ್ಮ ಈ ನಿಸ್ವಾರ್ಥ ಸೇವೆಗಾಗಿ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನೂ ಇವರು ಪಡೆದಿದ್ದಾರೆ. ಸೋಮವಾರದಂದು ರಜನಿ ಶೆಟ್ಟಿ ಅವರ ನೆರೆ ಮನೆಯವರು ಅವರ ಮೇಲೆ ದಾಳಿ ಮಾಡಿದ್ದು, ಆಕೆ ಮೇಲೆ ಕಲ್ಲೆಸಿದಿದ್ದಾರೆ. ಅದೃಷ್ಟವಶಾತ್ ರಜನಿ ಅವರು ಕಲ್ಲೇಟಿನಿಂದ ಗಾಯಗೊಳ್ಳುವುದು ತಪ್ಪಿದ್ದು, ಕೈಗೆ ಸಣ್ಣ ಏಟಾಗಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮದ ಜೊತೆ […]

ಮಿಲಾಗ್ರೆಸ್ ಟೋಸ್ಟ್‌ಮಾಸ್ಟರ್ಸ್‌ನ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಂಗಳೂರು: ಮಿಲಾಗ್ರೆಸ್ ಟೋಸ್ಟ್‌ಮಾಸ್ಟರ್ಸ್‌ನ ಹೊಸ ಪದಾಧಿಕಾರಿಗಳ 2023-24ರ ಪದಗ್ರಹಣ ಸಮಾರಂಭ ಅಧ್ಯಕ್ಷ ಟಿಎಂ ಫ್ರಾನ್ಸಿಸ್ ರೆಗೊ ನೇತೃತ್ವದಲ್ಲಿ ಭಾನುವಾರ ಜುಲೈ 2 ರಂದು ಮಿಲಾಗ್ರೆಸ್ ಚರ್ಚ್ ಕಾಂಪೌಂಡ್‌ನ ಮೋನಿಕಾ ಹಾಲ್‌ನಲ್ಲಿ ಮಾಡಲಾಯಿತು. ಸಮಾರಂಭವು “ಅನುಭವವನ್ನು ಅನ್ವೇಷಿಸಿ ಆನಂದಿಸಿ” ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಮೈಕೆಲ್ ಸಂತಮೇಯರ್ ಆಗಮಿಸಿ ಮಾತನಾಡಿ, “ಅನುಭವವನ್ನು ಅನ್ವೇಷಿಸಿ ಆನಂದಿಸಿ” ವಿಷಯದ ಬಗ್ಗೆ ತಿಳುವಳಿಕೆ ನೀಡಿದರು. ಭಾಷೆಯ ಸ್ವೀಕಾರವು ನಮ್ಮನ್ನು ವಿಶ್ವ ಮಾನವನನ್ನಾಗಿ ಮಾಡುತ್ತದೆ. […]

ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲಾ, ಕಾಲೇಜುಗಳಿಗೆ ಇಂದು ರಜೆ

ದಕ್ಷಿಣ ಕನ್ನಡ : ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ. ಉಳಿದ ತಾಲೂಕಿನಲ್ಲಿ ಮಳೆ ಪರಿಸ್ಥಿತಿ ನೋಡಿ ರಜೆ ನೀಡಲು ಸೂಚಿಸಲಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇಂದು ರಜೆ ಘೋಷಿಸಲಾಗಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜುಲೈ 4ರಂದು ಮಂಗಳೂರು, ಮೂಲ್ಕಿ, ಉಲ್ಲಾಳ, […]