ವಿದ್ಯುತ್ ಬಿಲ್ ಬಾಕಿ ಇದ್ದರೂ ಸಿಗಲಿದೆ ಗೃಹಜ್ಯೋತಿ ಪ್ರಯೋಜನ..!
ಬೆಂಗಳೂರು: ಸರಕಾರದ ಗೃಹಜ್ಯೋತಿ ವಿದ್ಯುತ್ ಬಿಲ್ ಬಾಕಿ ಇದ್ದರವರಿಗೂ ಕೂಡ ಈ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಇಂಧನ ಇಲಾಖೆ ವಿಶೇಷ ಪ್ರಕಟಣೆಯಲ್ಲಿ ತಿಳಿಸಿದೆ. 200 ಯೂನಿಟ್ ಮೀರದೆ, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಎಲ್ಲಾ ಗ್ರಾಹಕರಿಗೆ ಗೃಹ ಜ್ಯೋತಿ ಯೋಜನೆ ಪ್ರಯೋಜನ ಸಿಗಲಿದೆ. ಹಿಂದಿನ ಬಾಕಿಯನ್ನು ಸೆಪ್ಟೆಂಬರ್ 30ರ ಒಳಗೆ ಪಾವತಿಸಬೇಕು. ಮೂರು ತಿಂಗಳು ಕಾಲಾವಕಾಶ ಇದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಈ ತಿಂಗಳ ಜುಲೈ 25ರೊಳಗೆ ಯೋಜನೆಗೆ ನೋಂದಾಯಿಸಿಕೊಂಡರೆ ಆಗಸ್ಟ್ ತಿಂಗಳ ಬಿಲ್‌ನಲ್ಲಿ […]
ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ನ ಮೂವರು ಪ್ರಮಾಣವಚನ ಸ್ವೀಕಾರ
ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ನ್ ನ ಮೂವರು ಶಾಸಕರು ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ನಡೆದ ವಿಧಾನಸೌಧದ ಸಮ್ಮೇಳನ ಸಭಾಂಗಣದ ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಎನ್.ಎಸ್.ಭೋಸರಾಜು ಅವರು ಭಗವಂತನ ಹೆಸರಿನ ಮೇಲೆ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ನೂತನ ಶಾಸಕರುಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು […]
ಒರಿಸ್ಸಾ ರಾಜ್ಯಪಾಲರನ್ನು ಭೇಟಿಯಾದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ
ಉಡುಪಿ: ಪುತ್ತಿಗೆ ಮಠದ ಪರ್ಯಾಯ ಪೂರ್ವಭಾವಿಯಾಗಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸುಶೀಂದ್ರತೀರ್ಥ ಸ್ವಾಮೀಜಿ ದೇಶದ ವಿವಿಧ ಧಾರ್ಮಿಕ ಹಾಗೂ ತೀರ್ಥಕ್ಷೇತ್ರಗಳ ಸಂಚಾರ ಕೈಗೊಂಡಿದ್ದಾರೆ. ಅದರಂತೆ ಒರಿಸ್ಸಾ ರಾಜ್ಯದ ಸಂಚಾರದಲ್ಲಿರುವ ಪುತ್ತಿಗೆ ಉಭಯ ಶ್ರೀಪಾದರು, ಇಂದು ಒರಿಸ್ಸಾ ರಾಜ್ಯಪಾಲ ಗಣೇಶಿ ಲಾಲ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರನ್ನು ತಮ್ಮ ಚತುರ್ಥ ಪರ್ಯಾಯಕ್ಕೆ ಆಹ್ವಾನಿಸಿದರು.
ಕಟೀಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ದೇವಿಯ ಸನ್ನಿಧಾನದಲ್ಲಿ ವಿಶೇಷ ಯಕ್ಷಗಾನ “ತಾಳ ಮದ್ದಳೆ ಕಛ್ ದೇವಯಾನಿ”
ಮಂಗಳೂರು: ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಟೀಲ್ ದೇವಿಯ ಸನ್ನಿಧಾನದಲ್ಲಿ ಶನಿವಾರ ವಿಶೇಷ ಯಕ್ಷಗಾನ “ತಾಳ ಮದ್ದಳೆ ಕಛ್ ದೇವಯಾನಿ” ಪ್ರಸಂಗ ಜರಗಿತು. ವೇದಿಕೆಯಲ್ಲಿಯಕ್ಷಗಾನದ ಹಿರಿಯ ಕಲಾವಿದ 92 ವರ್ಷದ ಡಾ. ಕೂಳೂರು ರಾಮಚಂದ್ರ ರಾವ್, ಕಟೀಲ್ ದೇವಳದ ವೇ.ಮೂ. ಹರಿ ನಾರಾಯಣ ದಾಸ ಅಸ್ರಣ್ಣ, ಸು. ವಿಶ್ವೇಶ್ವರ ಭಟ್, ಪಾಶುಪತಿ ಶಾಸ್ತ್ರೀ, ಭಾಗವತಿಕೆಯಲ್ಲಿ ಕಟೀಲ್ ಮೇಳದ ದೇವಿ ಪ್ರಸಾದ ಆಳ್ವ, ಮದ್ದಳೆ: ಯೋಗೀಶ ಆಚಾರ್ಯ, ಚಂಡೆ: ದೇವಿಪ್ರಸಾದ ಕಟೀಲ್ ಸಹಕರಿಸಿದರು.
ಪ್ರಧಾನಿ ಮೋದಿ ನಿವಾಸಕ್ಕೆ ಪೊಲೀಸ್ ಬಂದೋಬಸ್ತ: ಮನೆ ಮೇಲೆ ಡ್ರೋನ್ ಹಾರಾಟ ಶಂಕೆ
ನವದೆಹಲಿ: ಇಂದು ಬೆಳಗ್ಗೆ ಡ್ರೋನ್ ರೀತಿಯ ವಸ್ತು ಹಾರಿದ ಬಗ್ಗೆ ಮಾಹಿತಿ ಬಂದಿದೆ. ಸೋಮವಾರ ಬೆಳಗ್ಗೆ ಡ್ರೋನ್ನಂತೆ ಹಾರುವ ವಸ್ತುವೊಂದು ನಿಷೇಧಿತ ವಲಯವಾಗಿರುವ ದೆಹಲಿಯ ಪ್ರಧಾನಿ ನಿವಾಸದ ಮೇಲೆ ಹಾರಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ನವದೆಹಲಿಯ ನಿವಾಸದ ಮೇಲೆ ಮತ್ತು ಸುತ್ತಲೂ ಯಾವುದೇ ವಸ್ತುವಿನ ಹಾರಾಟವನ್ನು ನಿಷೇಧಿಸಲಾಗಿದೆ. ಆದಾಗ್ಯೂ ಇಂದು ಬೆಳಗ್ಗೆ ಡ್ರೋನ್ ರೀತಿಯ ವಸ್ತು ಹಾರಿದ ಬಗ್ಗೆ ಮಾಹಿತಿ ಬಂದಿದೆ. “ಪ್ರಧಾನಿ ನಿವಾಸದ ಮೇಲೆ ಹಾರುವ ವಸ್ತುವಿಗೆ ಸಂಬಂಧಿಸಿದಂತೆ ಭದ್ರತಾ […]