ದಕ್ಷಿಣ ಕನ್ನಡದಲ್ಲಿ ವರ್ಷಕ್ಕೆ ಟನ್ ಗಟ್ಟಲೆ ಇಳುವರಿ ಪಡೆದು ವಿದೇಶಿ ಹಣ್ಣಗಳನ್ನು ಬೆಳೆಯುವ ಬೆಳೆಗಾರ
ಮಂಗಳೂರು : ಮೂಲತಃ ಬೆಂಗಳೂರಿನ ಪೀಣ್ಯ ನಿವಾಸಿಯಾಗಿರುವ ಲಕ್ಷ್ಮಣ್ ಹನ್ನೆರಡು ವರ್ಷಗಳ ಹಿಂದೆ ಕೃಷಿ ಮಾಡಲೆಂದೇ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಮನಸು ಮಾಡಿದರೆ, ಬೆಂಗಳೂರಿನಲ್ಲಿ ಉದ್ಯಮ ನಡೆಸಿ ಹೆಚ್ಚು ಹಣ ಸಂಪಾದಿಸಬಹುದಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕೃಷಿ ಮಾಡಿದರೆ ಹೇಗೆ ಎಂದುಕೊಂಡು ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ತಟದಲ್ಲಿರುವ ತೆಕ್ಕಾರು ಎನ್ನುವ ಹಳ್ಳಿಯಲ್ಲಿ ಸುಮಾರು 40 ಎಕರೆ ಜಾಗವನ್ನು ಖರೀದಿಸಿ ಕೃಷಿಯ ಕಸಿಗೆ ಇಳಿದಿದ್ದರು. ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣನ್ನು ಕರ್ನಾಟಕದಲ್ಲಿ ತಿನ್ನುವ […]
ಮಂಗಳೂರಿನ ಪಂಪ್‌ವೆಲ್ ಫ್ಲೈಓವರ್ ಅಂಡರ್‌ಪಾಸ್ ತೀವ್ರ ಮಳೆಯಿಂದ ಜಲಾವೃತ
ಮಂಗಳೂರು ನಗರದ ಹಲವೆಡೆ ಮಳೆ ನೀರಿನ ಕಾರಣ ಜನಜೀವನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಪಂಪ್‌ವೆಲ್ ಫ್ಲೈಓವರ್‌ನ ಅಂಡರ್ ಪಾಸ್ ಜಲಾವೃತವಾಗಿ ಟಾಟಾ ಸುಮೋ ನೀರಿನಲ್ಲಿ ಸಿಲುಕಿದೆ ಕಳೆದ ಕೆಲ ದಿನಗಳಿಂದ ಮಂಗಳೂರಲ್ಲಿ ಸುರಿಯುತ್ತಿರುವ ಮಳೆ ತೀವ್ರಗೊಂಡಿದೆ. ಪಂಪ್ ವೆಲ್ ಫ್ಲೈಓವರ್ ನ ಅಂಡರ್ ಪಾಸ್ ಸಹಿತ ಸುತ್ತಮುತ್ತಲಿನ ಜಾಗಗಳಲ್ಲೆಲ್ಲಾ ಸೋಮವಾರ ನೀರು ತುಂಬಿ ವಾಹನ ಸವಾರರು ಪರದಾಡಬೇಕಾಯಿತು. ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು,ಪರಿಣಾಮ ಈ ರೀತಿಯಾಗಿದೆ
ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಭರತನಾಟ್ಯ ತರಬೇತಿ ಉದ್ಘಾಟನೆ
ಹೆಬ್ರಿ: ತಮ್ಮಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದಾಗ ಮಾತ್ರ ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ.ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 9 ವಷ೯ಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಲಾಪ್ರಕಾರಗಳನ್ನು ತರಬೇತಿ ನೀಡುವುದರ ಜತೆಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡುತ್ತಿದೆ. ಪೋಷಕರು ತಮ್ಮಮಕ್ಕಳನ್ನು ಇಂತಹ ತರಗತಿಗಳಿಗೆ ಸೇರಿಸುವುದರ ಮೂಲಕ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಿ ಎಂದು ಜೇಸಿಐ ಹೆಬ್ರಿ ಇದರ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು. ಅವರು ಜು.2 ರಂದು ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ […]
ರಕ್ತದಲ್ಲಿ ಕೊಲೆಸ್ಟ್ರಾಲ್ ಕುರಿತು ಡಾ|| ಉರಾಳ್ಸ್ ಕಾರ್ಡಿಯಾಕ್ ನಿಂದ ಸಂಪೂರ್ಣ ಪರಿಹಾರ
ಇವರು ನೆನ್ನೆವರೆಗೂ ಚೆನ್ನಾಗಿದ್ದರು. ಏನಾಯೋ ಗೊತ್ತಿಲ್ಲ. ಇಂದು ಹಾರ್ಟ್ ಆಟ್ಯಾಕ್ ಆಗಿ ಹೋಗಿಬಿಟ್ಟರು ಮೊನ್ನೆಯೊಬ್ಬರು ನಮ್ಮ ಸಂಬಂಧಿಕರು, ತುಂಬಾನೇ ಒಳ್ಳೆಯ ವ್ಯಕ್ತಿ ಯಾರ ಸಹವಾಸಕ್ಕೂ ಹೋದವರಲ್ಲ. ಮನೆಯಲ್ಲಿ ಟಿವಿ ನೋಡುತ್ತ ಕುಳಿತ್ತಿದ್ದರಂತೆ, ಅಲ್ಲಿಯೇ ಹಾರ್ಟ್ ಅಟ್ಯಾಕ್ ಆಯ್ತಂತೆ ಕುಳಿತಲ್ಲಿ ಪ್ರಾಣ ಬಿಟ್ಟರಂತೆ ಇಂತಹ ಮಾತುಗಳು ನಮ್ಮ ಸುತ್ತಮುತ್ತಲಿನ ಜನರು ಹೇಳುತ್ತಿರುವುದು, ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಕೆಟ್ಟ ಕೊಲೆಸ್ಟ್ರಾಲ್ ತುಂಬಾನೇ ಡೇಂಜರ್, ಯಾಕೆಂದ್ರೆ ಇದರ ಲಕ್ಷಣಗಳು ಕೆಲವೊಮ್ಮೆ ಗೋಚರಿಸದೇ ಇರಬಹುದು. ಒಂದು ವೇಳೆ ಈ ಕಾಯಿಲೆಯನ್ನು ನಿರ್ಲಕ್ಷ […]
ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ 2022-23 ಸಾಲಿನ ಕ್ರೀಡಾ ವಾರ್ಷಿಕೋತ್ಸವ
ಬ್ರಹ್ಮಾವರ : “ಕ್ರೀಡೆಗಳಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ,ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು” ಎಂಬ ಉದ್ದೇಶದೊಂದಿಗೆ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಬ್ರಹ್ಮಾವರದ ಸರಕಾರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಜರುಗಿತು. ಕ್ರೀಡೋತ್ಸವಕ್ಕೆ ಅತಿಥಿಗಳಾಗಿ ಶ್ರೀ ಮೊಹಮ್ಮದ್ ಆಸಿಫ್ ಜನರಲ್ ಮ್ಯಾನೇಜರ್ ಟವೆಲ್ ಪ್ರಾಜೆಕ್ಟ್ಕಕಂಪೆನಿ ಮಸ್ಕತ್, ಶ್ರೀಮತಿ ಫಾಝಿಯ ಹಾಗೂ ಬಿ ಟಿ ನಾಯಕ್ ನಿವೃತ್ತ ಉಪಪ್ರಾಂಶುಪಾಲರು ಸರಕಾರಿ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ, ಉಪ ಪ್ರಾಂಶುಪಾಲರು ಶ್ರೀಮತಿ […]