ಡಿಜಿ ಲಾಕರ್ನಲ್ಲಿ ದ್ವಿತೀಯ ಪಿಯುಸಿ ಪಾಸ್ ಔಟ್ ಆದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಲಭ್ಯ
ಬೆಂಗಳೂರು : ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಅಂಕಪಟ್ಟಿಯನ್ನ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 5,24,128 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. 2023ರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಜೂನ್ 26 ರಿಂದಲೇ ಡಿಜಿ ಲಾಕರ್ಗೆ ಅಪ್ಲೋಡ್ಗೆ ಮಾಡಲಾಗಿದೆ. ಹಾಗಾಗಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎನ್ಎಡಿ ಡಿಜಿಲಾಕರ್ […]
ರಾಮೋಜಿ ಫಿಲ್ಮ್ ಸಿಟಿಗೆ ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ಎಫ್ಟಿಸಿಸಿಐ ಪ್ರಶಸ್ತಿ
ಹೈದರಾಬಾದ್: ಹೈದರಾಬಾದ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ಐಟಿ ಸಚಿವರಾದ ಶ್ರೀ ಕೆ.ಟಿ. ರಾಮರಾವ್ ಅವರು ಶ್ರೀಮತಿ ಚಿ. ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಅವರಿಗೆ ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ತೆಲಂಗಾಣದ ಅಪೆಕ್ಸ್ ಟ್ರೇಡ್ ಮತ್ತು ಇಂಡಸ್ಟ್ರಿ ಮಂಡಳಿ, ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್ (ಎಫ್ಟಿಸಿಸಿಐ) ವತಿಯಿಂದ ನೀಡಲಾಗುವ ಎಕ್ಸಲೆನ್ಸ್ ಪ್ರಶಸ್ತಿ ಗರಿ ರಾಮೋಜಿ ಫಿಲ್ಮ್ ಸಿಟಿಗೆ ದೊರೆತಿದೆ.ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ […]
ಮಳೆಯಿಂದಾಗಿ ಜೋಗ ಜಲಪಾತಕ್ಕೆ ಜೀವಕಳೆ : ಪ್ರವಾಸಿಗರಿಗೆ ರಾಜಾ, ರಾಣಿ, ರೋರರ್, ರಾಕೆಟ್ ಮೋಡಿ
ಶಿವಮೊಗ್ಗ :ಇನ್ನು ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಮಳೆಯಿಂದ ಜೀವಕಳೆ ಬಂದಂತೆ ಆಗಿದೆ. ಜಿಲ್ಲೆಯಲ್ಲಿ ಮುಂಗಾರು ತಡವಾದರು ಸಹ ಸಣ್ಣದಾಗಿ ಪ್ರಾರಂಭಗೊಂಡಿದೆ. ಆದರೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಳೆ ಬಾರದೆ ಇದ್ದರೂ ಸಹ ವರುಣನ ಆಗಮನ ಮಲೆನಾಡ ರೈತರಿಗೆ ತುಸು ನೆಮ್ಮದಿ ತರಿಸಿದೆ. ಮುಂಗಾರು ಸುಮಾರು 40 ದಿನ ತಡವಾದರೂ ಜೋಗದಲ್ಲಿ ಶರಾವತಿ ಬಳಕುತ್ತಾ ಮೇಲಿಂದ ಧುಮ್ಮಿಕ್ಕುತ್ತಿದ್ದಾಳೆ. ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳಲ್ಲಿ 960 ಅಡಿ ಎತ್ತರದಿಂದ ಶರಾವತಿ ನದಿ ಕೆಳಕ್ಕೆ ಬಿದ್ದು ಮುಂದೆ […]
ಕಬಿನಿ ಬತ್ತಿದ ಕಾರಣ ಹಿನ್ನೀರಿನಲ್ಲಿ ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳ ಗೋಚರ
ಮೈಸೂರು : ಇದಕ್ಕೆ ನಿದರ್ಶನ ಎಂಬಂತೆ 10 ವರ್ಷಗಳ ನಂತರ ಮೈಸೂರು ಜಿಲ್ಲೆಯ ಬೀಚನಹಳ್ಳಿ ಸಮೀಪದಲ್ಲಿರುವ, ಕಬಿನಿ ಡ್ಯಾಂನಲ್ಲಿ ನೀರು ಸಂಪೂರ್ಣ ಕಡಿಮೆ ಆಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ, ಐತಿಹಾಸಿಕ, ಪುರಾಣ ಪ್ರಸಿದ್ಧ ದೇವಾಲಯಗಳ ಕುರುಹುಗಳು ಪತ್ತೆಯಾಗಿವೆ.10 ವರ್ಷಗಳ ಕಬಿನಿಯ ಒಡಲು ಬರಿದಾಗುತ್ತಿದ್ದು, ಐತಿಹಾಸಿಕ ಪುರಾತನ ದೇವಾಲಯದ ಕುರುಹುಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು. ಬಹುತೇಕ ಜಲಾಶಯಗಳು 10 ವರ್ಷಗಳ ನಂತರ ಖಾಲಿಯಾಗಿವೆ. ಮತ್ತೊಂದೆಡೆ ಜಲಾಶಯಗಳ ಹಿನ್ನೀರಿನಲ್ಲಿ ಇರುವ ದೇವಾಲಯಗಳು ಈಗ ಗೋಚರಿಸುತ್ತಿವೆ. ಈ ಭಾಗದಲ್ಲಿದ್ದ ಪ್ರಾಚೀನ […]
ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ
ಬೆಂಗಳೂರು: ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ನಿರ್ಗಮಿಸಿದ ನಂತರ ಸದನವು ವಂದೇ ಮಾತರಂ ಗೀತೆ ನಡೆಸುವುದರೊಂದಿಗೆ ಸದನ ಮತ್ತೆ ಸಮಾವೇಶಗೊಂಡ ವೇಳೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು, ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ಮಾಜಿ ಶಾಸಕ, ಮಾಜಿ ಉಪಾಧ್ಯಕ್ಷ ಅಂಜನಾಮೂರ್ತಿ, ಮಾಜಿ ಸಂಸದ ಆರ್. ಧ್ರುವನಾರಾಯಣ, ಮಾಜಿ ಸಚಿವ ಡಿ.ಬಿ. ಇನಾಂದಾರ್, ಮಾಜಿ ಶಾಸಕ ಯು.ಆರ್. ಸಭಾಪತಿ, ಡಾ. ಕೆ. ಭುಜಂಗಶೆಟ್ಟಿ ಸೇರಿದಂತೆ ಇತ್ತೀಚೆಗೆ ಅಗಲಿದ ಎಂಟು ಮಂದಿ […]