ಪತ್ರಕರ್ತರು ಯಾವುದೇ ಒತ್ತಡದ ಸಂದರ್ಭದಲ್ಲಿ ಸತ್ಯ ಹೇಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು: ಹರಿಪ್ರಸಾದ್ ಎ.
ಉಡುಪಿ: ಇಂದು ಸಮಾಜದಲ್ಲಿ ಸತ್ಯ ಹೇಳುವುದೇ ಸತ್ಯ ಹೇಳುವುದೇ ಬಹಳ ದೊಡ್ಡ ಸವಾಲಿನ ಕೆಲಸ ಆಗಿದೆ. ಪತ್ರಕರ್ತರು ಯಾವುದೇ ಒತ್ತಡದ ಸಂದಭದಲ್ಲೂ ಸತ್ಯವನ್ನು ಹೇಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಅಂತಹ ವೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಎಂದು ಸುದ್ದಿಯಾನ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ಹರಿಪ್ರಸಾದ್ ಎ. ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಐಎಂಎ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ […]
ದೇಶದ ಆರ್ಥಿಕತೆ ತುಂಬಾ ಮುಖ್ಯವಾದದ್ದು ಅದರಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರ: ಸಿ.ಎ ಗೋಪಾಲಕೃಷ್ಣ ಭಟ್
ಕಟಪಾಡಿ : ” ಲೆಕ್ಕ ಪರಿಶೋಧಕರಿಗೆ (ಸಿ.ಎ) ಸಮಾಜದಲ್ಲಿ ಒಂದು ವಿಶೇಷವಾದ ಉನ್ನತ ಸ್ಥಾನಮಾನವಿದೆ. ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರವಾದದ್ದು, ದೇಶದ ಏಳಿಗೆಗೆ ನಾವು ದುಡಿಯಬೇಕು” ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ. ಸಿ.ಎ ಗೋಪಾಲಕೃಷ್ಣ ಭಟ್ ರವರು ಮಾತನಾಡಿದರು. ಜುಲೈ 1 ರಂದು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಚರಿಸಲಾದ ‘ಚಾರ್ಟರ್ಡ್ ಅಕೌಂಟೆಂಟ್ಸ್ ಡೇ’ ಕಾರ್ಯಕ್ರಮ ನಡೆಯಿತು .ವೇದಿಕೆಯಲ್ಲಿದ್ದ ಸಿ.ಎ ಆದರ್ಶ್ ಶೆಣೈ ಹಾಗೂ ಸಿ.ಎ ನಾಗೇಂದ್ರ ಭಕ್ತ ಇವರು […]
ಬಿಸಿಸಿಐ ಘೋಷಣೆ : ಭಾರತ ಕ್ರಿಕೆಟ್ ತಂಡಕಕ್ಕೆ ಡ್ರೀಮ್-11 ಪ್ರಾಯೋಜಕತ್ವ
ಮುಂಬೈ: ಬೈಜೂಸ್ಗೆ (Byju’s) ಬದಲಾಗಿ ಡ್ರೀಮ್-11 ಜೆರ್ಸಿ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ. ಇನ್ಮುಂದೆ ಟೀಂ ಇಂಡಿಯಾ (Team India) ಡ್ರೀಮ್-11 ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ಮೂಲಕ ಭಾರತ ಡ್ರೀಮ್-11 ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ. ಕ್ರಿಕೆಟ್ ಅಭಿಮಾನಿಗಳ ಜನಪ್ರಿಯ ಗೇಮಿಂಗ್ ಪ್ಲಾಟ್ಫಾರ್ಮ್ ಡ್ರೀಮ್-11 (Dream11) ಭಾರತ ಕ್ರಿಕೆಟ್ ತಂಡದ ಜೆರ್ಸಿ (Jerseys) ಪ್ರಾಯೋಜಕತ್ವ ಪಡೆದುಕೊಂಡಿದೆ. ಮುಂದಿನ 3 ವರ್ಷಗಳ ಅವಧಿಗೆ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) […]
ವೈದ್ಯರು ಮತ್ತು ಆರೋಗ್ಯ ಮೂಲಸೌಕರ್ಯಗಳ ಮೇಲಿನ ಹೊರೆಗಳನ್ನು ನಿವಾರಿಸಲು ಪ್ರಿವೆಂಟಿವ್ ಹೆಲ್ತ್ ಕೇರ್ ಮೇಲೆ ಗಮನ ಕೇಂದ್ರೀಕರಿಸಿ
ಭಾರತದಲ್ಲಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಆರೋಗ್ಯ ವೃತ್ತಿಪರರ ದಣಿವರಿಯದ ಪ್ರಯತ್ನಗಳಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಶೇಷ ಸಂದರ್ಭವಾಗಿ ಈ ದಿನ ಕಾರ್ಯನಿರ್ವಹಿಸುತ್ತದೆ. ಅದೇನೇ ಒತ್ತಡ ಇದ್ದರೂ, ವೈದ್ಯರು, ನಮ್ಮೆಲ್ಲರಂತೆ, ವಿಸ್ತೃತ ಕೆಲಸದ ಸಮಯ ಮತ್ತು ರೋಗಿಗಳ ಹೆಚ್ಚುತ್ತಿರುವ ಒತ್ತಡದ ಪರಿಣಾಮವಾಗಿ ಭಾವನಾತ್ಮಕ ತೊಂದರೆ ಮತ್ತು ದೈಹಿಕ ಬಳಲಿಕೆಯನ್ನು ಎದುರಿಸುವ ಮಾನವರು ಎಂದು ಗುರುತಿಸುವುದು ಅವಶ್ಯ. ಆದ್ದರಿಂದ ಪ್ರಿವೆಂಟಿವ್ ಹೆಲ್ತ್ ಕೇರ್ ನ ಮಹತ್ವವನ್ನು […]
ತಹಶಿಲ್ದಾರ್ ಅಜಿತ್ ಕುಮಾರ್ ರೈ ಸರಕಾರಿ ಹುದ್ದೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ
ಬೆಂಗಳೂರು: ಬೆಂಗಳೂರಿನಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಕೆ ಆರ್ ಪುರಂನ ತಹಶೀಲ್ದಾರ್, ಪುತ್ತೂರು ಮೂಲದ ಅಜಿತ್ ಕುಮಾರ್ ರೈ ಅವರನ್ನು ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಸರಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ತಹಸಿಲ್ದಾರ್ ಅಜಿತ್ ರೈ ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು, 1957 ರ ನಿಯಮ 10(1)(ಎ)(ಎ) ಮತ್ತು 10(2)(ಎ) ಅನ್ವಯ ಮುಂದಿನ ಆದೇಶದ ವರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ […]