ಉಡುಪಿ: ಕೇಂದ್ರ ಅಂಚೆ ಕಚೇರಿಯಲ್ಲಿ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ತ್ವರಿತ ಅಂಚೆ ಸೇವೆ

ಉಡುಪಿ: ಭಾರತೀಯ ಅಂಚೆ ಇಲಾಖೆಯ ಅರ್.ಎಂ.ಎಸ್ ಕ್ಯೂ ವಿಭಾಗದ ಅಧೀನದಲ್ಲಿರುವ ಉಡುಪಿ ಸಾರ್ಟಿಂಗ್ ಕಚೇರಿಯು ಉಡುಪಿ ಹೆಡ್ ಪೋಸ್ಟ್ ಆಫೀಸಿನ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಕೌಂಟರಿನಲ್ಲಿ ಪ್ರಸಕ್ತ ತ್ವರಿತ ಅಂಚೆ ಸೇವೆಯು ಸಂಜೆ 7 ರಿಂದ ರಾತ್ರಿ 8.30 ರ ವರೆಗೆ ಹಾಗೂ ನೋಂದಾಯಿತ ಅಂಚೆ ಸೇವೆಯು ಸಂಜೆ 5.30 ರಿಂದ 6.30 ರ ವರೆಗೆ ಮಾತ್ರ ಲಭ್ಯವಿತ್ತು. ಅಂಚೆ ಗ್ರಾಹಕರ ಅನುಕೂಲಕ್ಕಾಗಿ ಸಂಜೆ 5.30 ರಿಂದ ರಾತ್ರಿ 8.30 ರ ವರೆಗೆ ತ್ವರಿತ ಅಂಚೆ […]

ಜಿ.ಪಂ/ತಾ.ಪಂ ಚುನಾವಣೆ ಕರಡು ಮತದಾರರ ಪಟ್ಟಿ ಆಕ್ಷೇಪಣೆ ಇತ್ಯರ್ಥಕ್ಕೆ ಜುಲೈ 7 ಕೊನೆ ದಿನ

ಉಡುಪಿ: ಜಿಪಂ ಮತ್ತು ತಾಪಂ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ , ಉಡುಪಿ ಕಾಪು ಕಾರ್ಕಳ ಕುಂದಾಪುರ ಬೈಂದೂರು ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕು ಕಚೇರಿಗಳಲ್ಲಿ ಸಹಾಯಕ ಆಯುಕ್ತರು ಕುಂದಾಪುರ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಜುಲೈ 4 ಹಾಗೂ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಜುಲೈ 7 ಕೊನೆಯ ದಿನವಾಗಿದ್ದು , ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಮುದ್ರಕರಿಂದ ಅಗತ್ಯ ಬದಲಾವಣೆ […]

ಕಟಪಾಡಿ: ಸಮಾನ ಮನಸ್ಕರ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

ಕಟಪಾಡಿ: ಶಶಿಧರ ಪುರೋಹಿತ ಕಟಪಾಡಿ ಇವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಜೂನ್ 29 ರಂದು ಹಮ್ಮಿಕೊಳ್ಳಲಾಯಿತು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪುಸ್ತಕ ವಿತರಿಸಿದರು. ಉಚಿತ ಪುಸ್ತಕ ವಿತರಣೆ ಮಾಡಿದ ಗುರ್ಮೆ ಸುರೇಶ್ ಶೆಟ್ಟಿ, ಸಮಾನ ಮನಸ್ಕ ತಂಡ ಹಾಗೂ ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಶಿಧರ ಪುರೋಹಿತ, ಸದಾಶಿವ ಆಚಾರ್ಯ, ಸಹನಾ ದೇವರಾಜ ಆಚಾರ್ಯ, ಅಚ್ಚುತ ಆಚಾರ್ಯ ಕಾಪು, ನಿವೃತ್ತ ತಹಶೀಲ್ದಾರ ಕೆ. […]

ಉಡುಪಿ: ಕಾಲುಸಂಕದಿಂದ ಜಾರಿ ಮಳೆ ನೀರಿನ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ: ಇಲ್ಲಿನ ಮಠದಬೆಟ್ಟು ಎಂಬಲ್ಲಿ ಜೂ.29ರಂದು ಕಾಲುಸಂಕದಿಂದ ಆಕಸ್ಮಿಕವಾಗಿ ಜಾರಿ ಮಳೆನೀರು ಹರಿದು ಹೋಗುವ ಚರಂಡಿಗೆ ಬಿದ್ದು 33 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಬೈಂದೂರು ಮೂಲದ ಸತೀಶ್ (33) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಬುಧವಾರ ಮಧ್ಯಾಹ್ನದಿಂದ ಸತೀಶ್ ನಾಪತ್ತೆಯಾಗಿದ್ದು, ಗುರುವಾರ ಆತನ ಶವ ಮಳೆನೀರು ಹರಿಯುವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಳುಗು ತಜ್ಞ ಈಶ್ವರ ಮಲ್ಪೆ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲು ಸಮಾಜ ಸೇವಕ […]

ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಶಿಷ್ಯೋಪನಯನ

ಮಣಿಪಾಲ: ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ನೂತನವಾಗಿ ಪ್ರವೇಶ ಪಡೆದಿರುವ ಮೊದಲ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಕಾರ್ಯಕ್ರಮವು ಇತ್ತೀಚಿಗೆ ಕಾಲೇಜಿನ ಬುದ್ಧಾಯುರ್ವೇದ ಸಭಾಂಗಣದಲ್ಲಿ ನೆರವೇರಿತು. ಧನ್ವಂತರಿ ಹೋಮ ಮತ್ತು ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ, ವಿದ್ಯಾರ್ಥಿಗಳಿಗೆ ಆಯುರ್ವೇದ ವಿದ್ಯಾಭ್ಯಾಸದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಂಸ್ಥೆಯ ನಿರ್ದೇಶಕ ಡಾ.ಎಮ್.ವಿ ಶೆಟ್ಟಿಯವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟಿಯವರಾದ ಶ್ರೀಮತಿ ಹೇಮಲತಾ ಶೆಟ್ಟಿ, ಡಾ.ಶ್ರದ್ಧಾ ಶೆಟ್ಟಿ, ಉಪಪ್ರಾಂಶುಪಾಲ ಹರಿಪ್ರಸಾದ್ ಭಟ್, ಅಧ್ಯಾಪಕ […]