ರಾಜ್ಯ ಮಟ್ಟದ ಪುನರ್ ಮನನ ತರಬೇತಿ: ಗೃಹರಕ್ಷಕ ಸಂದೀಪ್ ದಾಸ್ ಪ್ರಥಮ
ಉಡುಪಿ: ಜಿಲ್ಲಾ ಗೃಹರಕ್ಷಕ ದಳದ ಕುಂದಾಪುರ ಘಟಕದ ಗೃಹರಕ್ಷಕ ಸಂದೀಪ್ ದಾಸ್ ಅವರು ಜೂನ್ 15 ರಿಂದ 27 ರ ವರೆಗೆ ದಾವಣಗೆರೆಯ ದೇವರಬೆಳಕೆರೆಯ ಗೃಹರಕ್ಷಕದಳ ಮತ್ತು ಪೌರ ರಕ್ಷಣಾ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರಿಗೆ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಕಟಪಾಡಿ: ಜುಲೈ 3 ರಿಂದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆ
ಕಟಪಾಡಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಶೋಭಕೃತ್ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3 ರಿಂದ ಸಪ್ಟೆಂಬರ್ 29 ವರೆಗೆ ನಡೆಯಲಿದೆ. ಸ್ಥಳ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಚಾತುರ್ಮಾಸ್ಯ ಪೂರ್ವಭಾವೀ ಕ್ಷೇತ್ರ ಸಂದರ್ಶನ ವೇಳಾ ಪಟ್ಟಿ 8/06/2023 ಗುರುವಾರ ಅಂಕೋಲಾ 12.00 10/06/2023 ಶನಿವಾರ ಕೊಲಕಾಡಿ 10.00 ಪಡುಪಣಂಬೂರು 11.00 […]
ಕಡಬ: 45 ಕೆಜಿ ತೂಕದ ಆಡನ್ನು ನುಂಗಲು ವಿಫಲ ಯತ್ನ ನಡೆಸಿದ ಹೆಬ್ಬಾವು
ಕಡಬ: ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು 45 ಕೆಜಿ ತೂಕದ ಆಡನ್ನು ನುಂಗಲು ಪ್ರಯತ್ನಿಸಿ ವಿಫಲವಾಗಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ಮೆಲ್ಲನೆ ಕಾಡಿಗೆ ತೆರಳಿದ ಘಟನೆ ವರದಿಯಾಗಿದೆ. ಇಲ್ಲಿನ ಸ್ಥಳೀಯ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಆಡನ್ನು ಹೆಬ್ಬಾವು ತನ್ನ ಉರುಳಿಗೆ ಸಿಲುಕಿಸಿಕೊಂಡಿದೆ. ಹೆಬ್ಬಾವು ಆಡಿನ ತಲೆಯ ಭಾಗವನ್ನು ನುಂಗಿದ್ದರೂ ಉಳಿದ ಭಾಗವನ್ನು ನುಂಗಲು ಅದಕ್ಕೆ ಸಾಧ್ಯವಾಗಲಿಲ್ಲ. ಹೆಬ್ಬಾವಿನ ಸುರುಳಿಗೆ ಸಿಲುಕಿದ್ದ […]
ಮಣಿಪಾಲ: ಟೆರೇಸ್ ಮೇಲಿಂದ ಆಕಸ್ಮಿಕವಾಗಿ ಬಿದ್ದು ಬಾಲಕ ಸಾವು
ಮಣಿಪಾಲ: ಆಕಸ್ಮಿಕವಾಗಿ ಟೆರೇಸ್ ಮೇಲಿಂದ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಮೃತ ಬಾಲಕನನ್ನು ಧಾರವಾಡ ನಿವಾಸಿ ನಾಮದೇವ ಎಂಬವರ ಪುತ್ರ ಆಯುಷ್ (8) ಎಂದು ಗುರುತಿಸಲಾಗಿದೆ. ಶಸ್ತ್ರಚಿಕಿತ್ಸೆಗಾಗಿ ನಗರಕ್ಕೆ ಬಂದಿಳಿದಿದ್ದ ಬಾಲಕ ಮತ್ತು ಆತನ ತಂದೆ ಇಲ್ಲಿನ ಬಡಗುಬೆಟ್ಟು ಗ್ರಾಮದ ದಶರಥನಗರದಲ್ಲಿರು ಸಂಬಂಧಿಯೊಬ್ಬರ ಮನೆಯಲ್ಲಿ ವಾಸವಾಗಿದ್ದರು. ಜೂನ್ 25 ರಂದು, ಆಯುಷ್ ಇತರ ಮಕ್ಕಳೊಂದಿಗೆ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಬಾಲಕನ ತಲೆಗೆ ತೀವ್ರ ಏಟಾಗಿತ್ತು. ಚಿಕಿತ್ಸೆಗಾಗಿ ಆತನನ್ನು […]
ವಾಲ್ಮೀಕಿ ರಾಮಾಯಣದ ಮೂಲ ರಚನೆಗೆ ಧಕ್ಕೆ ಆರೋಪ: ಆದಿಪುರುಷ್ ಗೆ ನಿಷೇಧ ಕೋರಿ ಸುಪ್ರೀಂ ಕೋರ್ಟ್ ಗೆ ಪಿಐಎಲ್
ನವದೆಹಲಿ: ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಓಂ ರಾವುತ್ ಅವರ ‘ಆದಿಪುರುಷ್’ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಭಾರತದ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಚಲನಚಿತ್ರದಲ್ಲಿ ಚಿತ್ರಿಸಲಾದ ಹಿಂದೂಗಳು ಮತ್ತು ವಿವಿಧ ದೇವತೆಗಳನ್ನು “ಅವರ ಮೂಲಭೂತ ಮೌಲ್ಯಗಳು ಮತ್ತು ಪಾತ್ರಗಳನ್ನು ನಾಶಪಡಿಸುವ” ಮತ್ತು ವಾಲ್ಮೀಕಿ ರಾಮಾಯಣದ ‘ಮೂಲ ರಚನೆ’ಯನ್ನು ಮಾರ್ಪಡಿಸುವ ಮೂಲಕ ಭಕ್ತರ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಿನಿಮಾದಲ್ಲಿನ ಕೆಲವು ಸಂಭಾಷಣೆಗಳಿಗೆ ಅರ್ಜಿದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಗಲ್ಲಿಯ ಹುಡುಗರು’ ಮಾತ್ರ […]