ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಪೋಸ್ಟ್: ಬಿಜೆಪಿ ಐಟಿ ಸೆಲ್ ಮುಖ್ಯಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿದ ಕರ್ನಾಟಕ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಕಾಂಗ್ರೆಸ್​ನ ರಮೇಶ್ ಬಾಬು ದೂರು ನೀಡಿದ್ದಾರೆ. ಟ್ವಿಟರ್ ನಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿ ಪೋಸ್ಟ್​ಗಳ ಹಿನ್ನೆಲೆ ರಮೇಶ್ ಬಾಬು ದೂರು ನೀಡಿದ್ದಾರೆ. ಆ್ಯನಿಮೇಟೆಡ್ ವೀಡಿಯೋ ಒಂದರಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯ ಬಿಜೆಪಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಹೈಗ್ರೌಂಡ್ಸ್ […]

ಜೂನ್ 29 ರಂದು ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

ಸಂತೆಕಟ್ಟೆ: ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಪ್ರಥಮ ಶಾಖೆಯು ಕಲ್ಯಾಣಪುರ ಸಂತೆಕಟ್ಟೆಯ ಮೋಹಿನಿ ಟವರ್ ನ ಮಹಡಿಯಲ್ಲಿ ಕಾರ್ಯಾರಂಭಗೊಳ್ಳಲಿದ್ದು, ಕಚೇರಿಯ ಉದ್ಘಾಟನೆಯು ಜೂನ್ 29 ರಂದು ಬೆಳೆಇಗ್ಗೆ 10.30 ಕ್ಕೆ ನಡೆಯಲಿದೆ. ಶಾಸಕ ಯಶ್ ಪಾಲ್ ಸುವರ್ಣ ಕಚೇರಿಯನ್ನು ಉದ್ಘಾಟಿಸಲಿದ್ದು, ಕೋಟ ಶ್ರೀನಿವಾಸ್ ಪೂಜಾರಿ, ಶಂಕರಪುರ ಸಾಯಿ ಸಾಂತ್ವನ ಮಂದಿರದ ಶ್ರೀ ಸಾಯಿ ಈಶ್ವರ ಗುರೂಜಿ, ಪ್ರಮೋದ್ ಮಧ್ವರಾಜ್, ಚಿತ್ತರಂಜನ್ ಬೋಳಾರ್, ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷ ಗೋವಿಂದ […]

ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ಆರೋಪ: ಪ್ರಮೋದ್ ಮುತಾಲಿಕ್ ವಿರುದ್ದದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಶ್ರೀರಾಮ ಸೇನೆಯ ಸ್ಥಾಪಕ-ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ 2017 ರಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 196 ರ ಅಡಿಯಲ್ಲಿ ಅಗತ್ಯವಿರುವ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ದೂರಿನಲ್ಲಿ ಅಪರಾಧದ ಅರಿವನ್ನು ಪಡೆದಿದ್ದಾರೆ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಗಮನಿಸಿದ್ದಾರೆ. […]

ಕೇರಳದಲ್ಲಿ ತನ್ನ ವಿಸ್ತರಣೆಯನ್ನು ಸ್ಥಗಿತಗೊಳಿಸಿದ ಕರ್ನಾಟಕದ ನಂದಿನಿ; ಮಿಲ್ಮಾ ಹಾಲಿನ ಉತ್ಪನ್ನಗಳೇ ಸಾಕೆಂದ ನೆರೆರಾಜ್ಯ

ಬೆಂಗಳೂರು: ಇತ್ತೀಚೆಗೆ ಕೇರಳದಲ್ಲಿ ತನ್ನ ಕೆಲವು ಔಟ್‌ಲೆಟ್‌ಗಳನ್ನು ತೆರೆದಿರುವ ಕರ್ನಾಟಕದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ, ರಾಜ್ಯದಲ್ಲಿ ತನ್ನ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕೇರಳದ ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಸಹಕಾರಿಗಳ ಸಚಿವೆ ಜೆ ಚಿಂಚುರಾಣಿ, ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಸಿಇಒ ಅವರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೆಎಂಎಫ್ ನಿರ್ಧಾರವನ್ನು ಸ್ವಾಗತಿಸಿದ ಚಿಂಚುರಾಣಿ, ಕಾಂಗ್ರೆಸ್ ಗೆಲುವಿನ ನಂತರ ಕರ್ನಾಟಕದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಈ ಬದಲಾವಣೆಯಾಗಿದೆ ಎಂದು ಹೇಳಿರುವುದಾಗಿ ಹಿಂದುಸ್ಥಾನ್ ಟೈಮ್ಸ್ ವರದಿ […]

ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆಗಳ ಭಾಗವಾಗಲಿದ್ದಾರೆ ಬಿಜೆಪಿ ಸಂಸದ ರವಿ ಕಿಶನ್ ಮಗಳು

ಅವದೆಹಲಿ: ಬಿಜೆಪಿ ಸಂಸದ, ನಟ ರವಿ ಕಿಶನ್ ಅವರ ಪುತ್ರಿ ಇಶಿತಾ ಶುಕ್ಲಾ ಅವರು ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆಗಳ ಭಾಗವಾಗಲಿದ್ದಾರೆ. ರವಿ ಕಿಶನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇಶಿತಾಗೆ ಕೇವಲ 21 ವರ್ಷ. ಇಶಿತಾ ದೆಹಲಿ ನಿರ್ದೇಶನಾಲಯದ ‘7 ಗರ್ಲ್ ಬೆಟಾಲಿಯನ್’ನ ಕೆಡೆಟ್ ಎಂದು ರವಿ ಕಿಶನ್ ಹೇಳಿದ್ದಾರೆ ಅಗ್ನಿಪಥ್ ಯೋಜನೆಯು ಭಾರತೀಯ ನಾಗರಿಕರ ಸೇನಾ ನೇಮಕಾತಿ ಕಾರ್ಯಕ್ರಮವಾಗಿದ್ದು, ಈ ಯೋಜನೆಯಡಿ ತರಬೇತಿ ಪಡೆದವರು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ […]