ಪ್ಯಾರಾಲಿಂಪಿಕ್ ವಾಲಿಬಾಲ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುವಿಗೆ ಬೇಕಾಗಿದೆ ದಾನಿಗಳ ನೆರವು

ದಾವಣಗೆರೆ: ಇಲ್ಲಿನ ಹರಿಹರ ನಿವಾಸಿ ರೂಪಾ ಎನ್ ಪ್ಯಾರಾಲಿಂಪಿಕ್ ವಾಲಿಬಾಲ್ ಕ್ರೀಡಾಪಟುವಾಗಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಜುಲೈ 3 ರಿಂದ 8 ಕಝಾಕಿಸ್ತಾನ್ ನ ಅಲ್ಮಾಟಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾವಾಲಿ ಸಿಟ್ಟಿಂಗ್ ವಾಲಿಬಾಲ್ ಏಷ್ಯನ್ ವಲಯ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಪ್ಯಾರಾಲಿಂಪಿಯನ್‌ಗೆ ಆರ್ಥಿಕ ಸಹಾಯದ ಅಗತ್ಯವಿದೆ. ರೂಪಾ ಅವರ ಕಝಾಕಿಸ್ತಾನ್ ಪ್ರವಾಸದ ಖರ್ಚಿಗೆ ಪ್ಯಾರಾಲಿಂಪಿಕ್ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಹಣ […]

ಮನೆಯೊಡತಿಯರಿಗೆ ಸದ್ಯಕ್ಕಿಲ್ಲ ಲಕ್ಷ್ಮೀ ಕಟಾಕ್ಷ: ಗೃಹಲಕ್ಷ್ಮೀ ಯೋಜನೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಅರ್ಜಿದಾರರು ಎದುರಿಸುತ್ತಿರುವ ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲು ಗೃಹಲಕ್ಷ್ಮಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಖಾತರಿಗಳಲ್ಲಿ ಒಂದಾಗಿದ್ದು, ಇದು ರಾಜ್ಯಾದ್ಯಂತ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ ನೀಡುವ ವಾಗ್ದಾನ ಹೊಂದಿದೆ. ಯೋಜನೆ ಅನುಷ್ಠಾನಕ್ಕೆ ವಿರಾಮ ನೀಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ. ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಭ್ರಷ್ಟಾಚಾರ ಮುಕ್ತ ವಾತಾವರಣವನ್ನು […]

ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾದುವುದು ಎಂದ ಪುತಿನ್

ಮಾಸ್ಕೋ: ವ್ಯಾಗ್ನರ್ ಖಾಸಗಿ ಮಿಲಿಟರಿ ದಂಗೆಯನ್ನು ವಿಫಲಗೊಳಿಸಿದ ನಂತರ, ಸೋಮವಾರದಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್, ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಯಾವುದೇ ಪ್ರಯತ್ನವು ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ರಷ್ಯನ್ನರು ಪರಸ್ಪರರನ್ನು ಕೊಲ್ಲಬೇಕೆಂದು ಪಶ್ಚಿಮ ದೇಶಗಳು ಮತ್ತು ಕೈವ್ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಶನಿವಾರದಂದು ಪ್ರಾರಂಭವಾದ ಶಸ್ತ್ರಸಜ್ಜಿತ ಖಾಸಗಿ ಸೈನಿಕರ ದಂಗೆಯು 24 ಗಂಟೆಗಳಿಗೂ ಮೊದಲೆ ಕೊನೆಗೊಂಡಿತು. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಪುತಿನ್, ಘಟನೆಗಳು ಪ್ರಾರಂಭವಾದಾಗಿನಿಂದಲೂ ದೊಡ್ಡ ಪ್ರಮಾಣದ ರಕ್ತಪಾತವನ್ನು ತಪ್ಪಿಸಲು […]

ದೆಹಲಿ: ಬಂದೂಕು ತೋರಿಸಿ ದಂಪತಿಯನ್ನು ದರೋಡೆ ಮಾಡಲು ಬಂದವರೆ 100 ರೂ. ಕೊಟ್ಟು ಪರಾರಿ!!

ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ, ಬಂದೂಕು ತೋರಿಸಿ ದಂಪತಿಯನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ದೆಹಲಿಯ ಇಬ್ಬರು ದರೋಡೆಕೋರರು ಸ್ವತಃ ತಾವೇ ದಂಪತಿಗಳಿಗೆ 100 ರೂಪಾಯಿಗಳನ್ನು ನೀಡಿ ಅವರಿಗೆ ಯಾವುದೇ ಹಾನಿ ಮಾಡದೆ ಸ್ಥಳದಿಂದ ನಿರ್ಗಮಿಸಿದ್ದಾರೆ. ಜೂನ್ 21 ರಂದು ಪೂರ್ವ ದೆಹಲಿಯ ಶಾಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಈ ದರೋಡೆಕೋರರು ಮತ್ತು ಅವರ ದರೋಡೆಯ ಯತ್ನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿ ದಂಪತಿಯ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸುವುದನ್ನು ದೃಶ್ಯಾವಳಿ ತೋರಿಸುತ್ತದೆ. […]

ಗ್ರಾಹಕರ ಮುಖ ಕೆಂಪಾಗಿಸುತ್ತಿದೆ ಟೊಮೇಟೋ ಬೆಲೆ: ಕೆಜಿಗೆ100 ರೂ; ಬೆಳೆ ಕುಸಿತದಿಂದಾಗಿ ಬೆಲೆ ಜಿಗಿತ

ನವದೆಹಲಿ: ಹಲವು ದಿನಗಳಿಂದ ಭಾರತವು ಟೊಮೇಟೋ ಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ಟೊಮೇಟೋ ಬೆಲೆ ಕೇಳಿದರೆನೇ ಗ್ರಾಹಕರ ಮುಖ ಕೆಂಪು ಕೆಂಪಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೋ ಬೆಲೆಯಲ್ಲಿಆತಂಕಕಾರಿ ಏರಿಕೆ ಕಂಡುಬಂದಿದ್ದು, ಪ್ರತಿ ಕಿಲೋಗ್ರಾಂಗೆ 80-120 ರೂ.ಗೆ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಬೆಲೆ ಕಿಲೋಗ್ರಾಂಗೆ 65-70 ಕ್ಕೆ ಏರಿದೆ. ದೇಶದ ಅನೇಕ ಭಾಗಗಳಲ್ಲಿ ಹೆಚ್ಚಿನ ತಾಪಮಾನ, ಕಡಿಮೆ ಉತ್ಪಾದನೆ ಮತ್ತು ವಿಳಂಬವಾದ ಮಳೆ ಸೇರಿದಂತೆ ಹಲವಾರು ಅಂಶಗಳು ಬೆಲೆಗಳ ಈ ಏರಿಕೆಗೆ ಕೊಡುಗೆ ನೀಡುತ್ತವೆ. ಟೊಮೆಟೊ ಬೆಲೆಯಲ್ಲಿನ ಹಠಾತ್ […]