ಶಾಲಾ ಮಕ್ಕಳ ಬ್ಯಾಗ್ಗೆ ನಿರ್ದಿಷ್ಟ ತೂಕ: ನಿಗದಿಗೊಳಿಸಿದ ಸರ್ಕಾರ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಣಭಾರದ ಶಾಲಾ ಬ್ಯಾಗ್ ದೊಡ್ಡ ಸಮಸ್ಯೆಯಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಶಾಲಾ ಬ್ಯಾಗ್ಗಳ ಭಾರವನ್ನು ನಿಗದಿಪಡಿಸಿದೆ. ಹೆಚ್ಚುವರಿ ಭಾರವನ್ನು ವಿದ್ಯಾರ್ಥಿಗಳ ಬೆನ್ನಿನಿಂದ ಕೆಳಗಿಳಿಸುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಕೊಂಚ ನೆಮ್ಮದಿ ತಂದಿದೆ.ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಣಭಾರದ ಶಾಲಾ ಬ್ಯಾಗ್ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಕೆಲ ಮಹತ್ವದ ಸೂಚನೆಗಳೊಂದಿಗೆ […]
ಪುತ್ತಿಗೆ ಪರ್ಯಾಯ: ಕಟ್ಟಿಗೆ ಮುಹೂರ್ತ ಸಂಪನ್ನ
ಉಡುಪಿ: ಪುತ್ತಿಗೆ ಪರ್ಯಾಯ 2024-26 ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಒಂದಾದ ಕಟ್ಟಿಗೆ ಸಂಗ್ರಹ ಮುಹೂರ್ತವು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಆದೇಶದಂತೆ ಜೂನ್ 26 ರಂದು ಶ್ರೀಕೃಷ್ಣಮಠದ ಕಟ್ಟಿಗೆ ರಥವಿರುವ ಸ್ಥಳದಲ್ಲಿ ಸಂಪನ್ನಗೊಂಡಿತು. ವಿದ್ವಾನ್ ಹೆರ್ಗ ವೇದವ್ಯಾಸ ಭಟ್ ಹಾಗೂ ರಾಘವೇಂದ್ರ ಕೊಡಂಚರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಪಟ್ಟದ ದೇವರು ಶ್ರೀ ಉಪೇಂದ್ರ ವಿಠಲ ದೇವರಲ್ಲಿ ಫಲನ್ಯಾಸ ಪೂರ್ವಕ ಪ್ರಾರ್ಥನೆ, ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ, ಶ್ರೀಕೃಷ್ಣಮಠದಲ್ಲಿ ಪ್ರಾರ್ಥನೆ, ನವಗ್ರಹ […]
ಶೂಟಿಂಗ್ ಸಮಯದಲ್ಲಿ ಗಾಯಗೊಂಡ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್
ಕೊಚ್ಚಿ: ಸಿನಿಮಾ ಶೂಟಿಂಗ್ ವೇಳೆ ಮಲಯಾಳಂ ಚಿತ್ರ ನಟ ಪೃಥ್ವಿರಾಜ್ ಸುಕುಮಾರನ್ ಅವರ ಕಾಲಿಗೆ ಗಾಯವಾಗಿದೆ. ಮರಯೂರಿನಲ್ಲಿ ‘ವಿಲಾಯತ್ ಬುದ್ಧ’ ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಪೃಥ್ವಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ಮರಯೂರು ಬಸ್ ನಿಲ್ದಾಣದಲ್ಲಿ ಘರ್ಷಣೆಯ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಕಾಲು ಜಾರಿ ಬಿದ್ದಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನೊಳಗಿನ ಸಂಘರ್ಷವನ್ನು ಚಿತ್ರೀಕರಿಸುವ ವೇಳೆ ಈ ಘಟನೆ ಸಂಭವಿಸಿದೆ. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ […]
ಮುಂದಿನ ವರ್ಷ ಏಪ್ರಿಲ್ ನಿಂದ ಹೊಸ ವಿದ್ಯುತ್ ದರ ನೀತಿ: ದಿನದ ಸಮಯ ಮತ್ತು ರಾತ್ರಿ ಸಮಯದ ವಿದ್ಯುತ್ ದರ ಪರಿಚಯಿಸಿದ ಕೇಂದ್ರ
ನವದೆಹಲಿ: ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020 ರ ತಿದ್ದುಪಡಿಯ ಮೂಲಕ ಭಾರತ ಸರ್ಕಾರವು ಚಾಲ್ತಿಯಲ್ಲಿರುವ ವಿದ್ಯುತ್ ದರ ವ್ಯವಸ್ಥೆಗೆ ಎರಡು ಬದಲಾವಣೆಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳೆಂದರೆ: ದಿನದ ಸಮಯದ (ToD) ದರ ಪರಿಚಯ ಮತ್ತು ಸ್ಮಾರ್ಟ್ ಮೀಟರಿಂಗ್ ನಿಬಂಧನೆಯ ತರ್ಕಬದ್ಧಗೊಳಿಸುವಿಕೆ. ದಿನದ ಸಮಯದ (ToD) ದರ ಎಂದರೇನು? ದಿನದ ದರವು ಹಗಲು ಮತ್ತು ರಾತ್ರಿಯ ಸಮಯದ ವಿದ್ಯುತ್ ಬಳಕೆಗೆ ವಿಭಿನ್ನ ಬೆಲೆಗಳನ್ನು ಹೊಂದಿದೆ. ದಿನದ ಎಲ್ಲಾ ಸಮಯದಲ್ಲೂ ಒಂದೇ ದರದಲ್ಲಿ ವಿದ್ಯುಚ್ಛಕ್ತಿಗೆ ಶುಲ್ಕ ವಿಧಿಸುವುದಕ್ಕಿಂತ ಹೆಚ್ಚಾಗಿ, […]
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ
ಕುಂದಾಪುರ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ ೨೬ ರಂದು ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಂಡಾರ್ಕರ್ಸ್ ಕಾಲೇಜಿನ ಉಪನ್ಯಾಸಕಿ ಹಾಗೂ ಮನಶಾಸ್ತ್ರ ಸಲಹೆಗಾರ್ತಿ ರಾಜೇಶ್ವರಿ. ಆರ್. ಶೆಟ್ಟಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಹಾಗೂ ಯುವ ಜನರು ದೇಶವನ್ನು ಮಾದಕ ದ್ರವ್ಯ ಸೇವನೆಯಿಂದ ಮುಕ್ತಗೊಳಿಸಲು ಕೈಗೊಳ್ಳಬಹುದಾದ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ರಾಗಿಣಿ ಅಧ್ಯಕ್ಷತೆ ವಹಿಸಿದ್ದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ […]