ಕಂಗನಾ ರಣಾವತ್ ಮುಂದಿನ ಚಿತ್ರ ಎಮರ್ಜೆನ್ಸಿ ಟೀಸರ್ ಬಿಡುಗಡೆ: ನವೆಂಬರ್ 24 ರಂದು ಚಿತ್ರ ಬೆಳ್ಳಿತೆರೆಗೆ

ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ ರಣಾವತ್ ತಮ್ಮ ಮುಂದಿನ ಚಿತ್ರ ‘ಎಮರ್ಜೆನ್ಸಿ’ಯ ಎರಡನೇ ಟೀಸರ್ ಶನಿವಾರದಂದು ಬಿಡುಗಡೆಗೊಳಿಸಿದ್ದಾರೆ. ಕಂಗನಾ ನಿರ್ದೇಶನ, ನಿರ್ಮಾಣ ಮತ್ತು ನಟನೆಯ ಈ ಚಿತ್ರವು 1975 ಜೂನ್ 25 ರಂದು ಹೇರಲಾದ ತುರ್ತುಪರಿಸ್ಥಿತಿಯ ಹಿನ್ನಲೆಯನ್ನು ಒಳಗೊಂಡಿದೆ. ಚಿತ್ರದ ಟೀಸರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಂಗನಾ, “ರಕ್ಷಕರೋ ಅಥವಾ ಸರ್ವಾಧಿಕಾರಿಯೋ? ನಮ್ಮ ರಾಷ್ಟ್ರದ ನಾಯಕಿ ತನ್ನ ಜನರ ಮೇಲೆ ಯುದ್ಧವನ್ನು ಘೋಷಿಸಿದ ನಮ್ಮ ಇತಿಹಾಸದ ಕರಾಳ ಸಮಯದ […]

ತ್ರಿಶಾ ವಿದ್ಯಾ ಕಾಲೇಜು ವಿದ್ಯಾರ್ಥಿಗಳಿಂದ ಬೈಲೂರು ರಾಮಕೃಷ್ಣ ಆಶ್ರಮಕ್ಕೆ ಭೇಟಿ

ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಬೈಲೂರು ರಾಮಕೃಷ್ಣ ಆಶ್ರಮಕ್ಕೆ ಭೇಟಿ ಹಾಗೂ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ರಾಮಕೃಷ್ಣ ಆಶ್ರಮದ ಸ್ವಾಮೀಜಿ ವಿನಾಯಕಾನಂದ ಜೀ ಮಹಾರಾಜ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮನಸ್ಸು ಚಂಚಲವಾಗಿದ್ದು ಎಲ್ಲವನ್ನೂ ಬಯಸುತ್ತದೆ. ಸುತ್ತಮುತ್ತ ಅಡೆತಡೆಗಳು ಬಹಳಷ್ಟು ಬರುತ್ತದೆ ಆದರೆ ಮನಸ್ಸು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಗುರಿ ಸ್ಪಷ್ಟವಾಗಿರಬೇಕು. ಹಾಗಿದ್ದಾಗ ಮಾತ್ರ ಅದ್ಭುತ ಸಾಧನೆ ಮಾಡೋಕೆ ಸಾಧ್ಯ ಎಂದರು. ಬಳಿಕ ಮಕ್ಕಳಿಗೆ ಧ್ಯಾನಯೋಗದ ಪ್ರಾತ್ಯಕ್ಷಿಕೆ ಮಾಡಿಸಿದರು. ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ […]

ಜುಲೈ 2 ರಂದು ಆದರ್ಶ ಆಸ್ಪತ್ರೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಉಡುಪಿ: ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭವು ಆದರ್ಶ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಜುಲೈ 2 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆಯಲಿದೆ. ಆಸ್ಪತ್ರೆಯ ತಜ್ಞ ವೈದ್ಯರು ಇದರಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿವಂತೆ ಆಸ್ಪತ್ರೆಯ ಎಂ.ಡಿ ಡಾ. ಜಿ.ಎಸ್ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ: ಎರಡು ಗೂಡ್ಸ್ ರೈಲುಗಳ ಮಧ್ಯೆ ಅಪಘಾತ; ಚಾಲಕರು ಪ್ರಾಣಾಪಾಯದಿಂದ ಪಾರು

ಕೋಲ್ಕತಾ: ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳದ ಬಂಕುರಾ ಬಳಿ ಎರಡು ರೈಲು ಇಂಜಿನ್‌ಗಳ ನಡುವೆ ಡಿಕ್ಕಿ ಸಂಭವಿಸಿದ ನಂತರ ಎರಡು ಸರಕು ರೈಲುಗಳ ಹಲವಾರು ಬೋಗಿಗಳು ಹಳಿ ತಪ್ಪಿದವು. ಒಂದು ಗೂಡ್ಸ್ ರೈಲು ಇನ್ನೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿ ತಪ್ಪಿವೆ. ಓಂಡಾ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ, ಆದರೆ ಗೂಡ್ಸ್ ರೈಲಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಮಹಿಮೆ ಸಾರುವ ‘ನನ್ನೊಡೆಯಾ ನೀನು’ ಭಕ್ತಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆ

ಕುಂದಾಪುರ: ಸುಪ್ರಸಿದ್ದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಕುರಿತು ರಚಿತವಾದ “ನನ್ನೊಡೆಯಾ ನೀನು” ಎಂಬ ಭಕ್ತಿ ಪ್ರಧಾನ ಗೀತೆಯು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಆರಾಧ್ಯ ಕ್ರಿಯೇಷನ್ಸ್ ಹಾಗೂ ಸ್ಪೆಕ್ಟ್ರಮ್ ವಿಜುವಲ್ಸ್ ಅವರ ಸಹಭಾಗಿತ್ವದಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಕುರಿತು ರಚಿತವಾದ “ನನ್ನೊಡೆಯಾ ನೀನು” ಭಕ್ತಿ ಪ್ರಧಾನ ಗೀತೆಯು ಕ್ಷೇತ್ರದ ಇತಿಹಾಸ ಸಾರುವ ಈ ಗೀತೆಯು ಹಿಂದೆಂದೂ ಕಂಡಿರದ ವಿಷಯಗಳಲ್ಲಿ ವಿಷೇಶತೆಯನ್ನೊಳಗೊಂಡಿದೆ. ನಿರ್ದೇಶನ: ಶಶಾಂಕ್ ಆಚಾರ್ಯ ವಂಡ್ಸೆ ಸಾಹಿತ್ಯ ಮತ್ತು ಸಂಯೋಜನೆ: ಸಂತೋಷ್ ಕುಂದಾಪುರ ಸಂಗೀತ: ರಾಜೇಶ್ ಭಟ್ […]