ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಪ್ರಹಸನ: ರಾಜೀನಾಮೆ ಕೊಟ್ಟಿಲ್ಲ ಎಂದ ಕಟೀಲ್
ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ನಾನು ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಟೀಲ್, ನನ್ನ ಅವಧಿ ಮುಕ್ತಾಯವಾಗಿದೆ. ಹೊಸದಾಗಿ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನೈತಿಕವಾಗಿ ನಾನು ವಿಧಾನಸಭಾ ಚುನಾವಣೆಯ ಸೋಲಿನ ಜವಾಬ್ದಾರಿ ಹೊತ್ತಿದ್ದೇನೆ. ಜವಾಬ್ದಾರಿ ಹೊತ್ತು […]
ರಷ್ಯಾದಲ್ಲಿ ಆಂತರಿಕ ಕಲಹ: ಪುತಿನ್ ಸರಕಾರಕ್ಕೆ ತಲೆನೋವಾದ ವ್ಯಾಗ್ನರ್ ಸಶಸ್ತ್ರ ಪಡೆಗಳು
ಮಾಸ್ಕೋ: ರಷ್ಯಾದ ವ್ಯಾಗ್ನರ್‌ನ ಸಶಸ್ತ್ರ ಪಡೆಗಳು ರೋಸ್ಟೋವ್-ಆನ್-ಡಾನ್ ನಗರದತ್ತ ಸಾಗುತ್ತಿರುವ ಮತ್ತು ಅದರ ಪ್ರಮುಖ ಮಿಲಿಟರಿ ತಾಣಗಳ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿರುವ ದೃಶ್ಯವು ರಷ್ಯಾದಲ್ಲಿ ರಾಜಕೀಯ ವಿಪ್ಲವದ ಮುನ್ಸೂಚನೆಯನ್ನು ನೀಡಿದೆ. ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿ ಮಾಲೀಕ ಯೆವ್ಗೆನಿ ಪ್ರಿಗೊಜಿನ್ ಶುಕ್ರವಾರದಂದು ಕ್ರೆಮ್ಲಿನ್‌ಗೆ ನೇರವಾದ ಸವಾಲನ್ನು ಒಡ್ಡಿದ್ದು, ರಷ್ಯಾದ ರಕ್ಷಣಾ ಮಂತ್ರಿಯನ್ನು ಹೊರಹಾಕುವ ಗುರಿಯನ್ನು ಹೊಂದಿರುವ ಸಶಸ್ತ್ರ ದಂಗೆಗೆ ಕರೆ ನೀಡಿದ್ದಾರೆ. ಉಕ್ರೇನ್ ಜೊತೆ ಯುದ್ದ ನಿರತವಾಗಿರುವ ರಷ್ಯಾವು ಇದೀಗ ಆಂತರಿಕ ದಂಗೆಯನ್ನು ಎದುರಿಸಬೇಕಾಗಿದೆ. ರಷ್ಯಾದೊಳಗಿನ ಆಂತರಿಕ ಕಲಹದ […]
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಧಾನಕ್ಕೆ ನಳೀನ್ ಕುಮಾರ್ ಕಟೀಲ್ ರಾಜೀನಾಮೆ
ಬಳ್ಳಾರಿ: ನಳೀನ್ ಕುಮಾರ್ ಕಟೀಲ್ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಧಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದ ಹಿನ್ನಲೆಯಲ್ಲಿ, ಈ ಸೋಲಿನ ಹೊಣೆಯನ್ನ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಇದೀಗ ರಾಜ್ಯಾಧ್ಯಕ್ಷ ಸ್ಧಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜೂನ್ 28 ರ ವರೆಗೆ ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆಯ ಮನ್ಸೂಚನೆ ನೀಡಿದ ಹವಾಮಾನ ಇಲಾಖೆ
ಉಡುಪಿ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುರುವಾರದಿಂದ ಉತ್ತಮ ಮಳೆಯಾಗುತ್ತಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮಳೆರಾಯ ಇದೀಗ ಸ್ವಲ್ಪ ಕೃಪೆ ತೋರಿದ್ದು ಕೃಷಿ ಚಟುವಟಿಕೆಗಳು ಮತ್ತೆ ಪುಟಿದೆದ್ದಿವೆ. ಹೊನ್ನಾವರ ತಾಲೂಕಿನಲ್ಲಿ ಗರಿಷ್ಠ 110 ಮಿಮಿ ಮಳೆಯಾಗಿದ್ದರೆ ಕುಮಟಾದಲ್ಲಿ 96 ಮಿಮಿ ಮತ್ತು ಭಟ್ಕಳದಲ್ಲಿ 86 ಮಿಮಿ ಮಳೆಯಾಗಿದೆ. ಆದಾಗ್ಯೂ, ಮಳೆಯ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿಲ್ಲದೆ ಕುಸಿತವನ್ನು ದಾಖಲಿಸಿದೆ. ಬುಧವಾರದವರೆಗೂ ಕರಾವಳಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಹಿತ ಭಾರೀ […]
ಕೊಪ್ಪಳ: ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ವತಿಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸುವ ಗುರಿ
ಕೊಪ್ಪಳ: ಅಪೌಷ್ಟಿಕತೆ ಕೊನೆಗೊಳಿಸುವಿಕೆ – ಅಪೌಷ್ಟಿಕತೆಯ ಹೊರೆಯನ್ನುಕಡಿಮೆ ಮಾಡುವ ಒಂದು ನವೀನ ಸಾರ್ವಜನಿಕ ಆರೋಗ್ಯ ಪರಿಕಲ್ಪನೆಯನ್ನು ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ECIPH) (ಯೆನೆಪೊಯ ಜೊತೆಗಿನ ಸಿಎಚ್‌ಡಿ ಗ್ರೂಪ್ ಮತ್ತು ಸುಧಾರಿತ ತಾಂತ್ರಿಕ ಸಹಕಾರ ಕೇಂದ್ರದ ಒಂದು ಘಟಕ) ನಿಂದ ಪರಿಚಯಿಸಲಾಗಿದೆ. ಈ ಉಪಕ್ರಮವನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದಿಂದ ಪ್ರಾಯೋಗಿಕವಾಗಿ ನಡೆಸಲಾಯಿತು. ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವಾಗಿ ಜಾರಿಗೊಳಿಸಲಾಯಿತು. ಈ ಉಪಕ್ರಮವು ತೀವ್ರವಾದ ಅಪೌಷ್ಟಿಕತೆ ಹೊಂದಿರುವ […]