ಟೈಟಾನಿಕ್ ಅವಶೇಷ ನೋಡಲು ಸಬ್ ಮರೀನ್ ನಲ್ಲಿ ತೆರಳಿದ್ದ ಐದು ಜನ ಜಲಸಮಾಧಿ: ಮರುಕಳಿಸಿದ ಟೈಟಾನಿಕ್ ದುರಂತದ ನೆನಪು
ನ್ಯೂಯಾರ್ಕ್: ನಾಪತ್ತೆಯಾದ ಸಬ್‌ಮರ್ಸಿಬಲ್ ಟೈಟಾನಿಕ್ ಹಡಗಿನಲ್ಲಿದ್ದ ಐವರು ಸಿಬ್ಬಂದಿಗಳು “ದುರಂತ ಸ್ಫೋಟ” ದಲ್ಲಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ದೃಢಪಡಿಸಿದೆ. ಓಶನ್ ಗೇಟ್ಸ್ ಎಕ್ಸ್‌ಪೆಡಿಶನ್ಸ್ ಸಿಇಒ ಸ್ಟಾಕ್‌ಟನ್ ರಶ್, ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್, ಬ್ರಿಟಿಷ್ ಬಿಲಿಯನೇರ್ ಹಮೀಶ್ ಹಾರ್ಡಿಂಗ್ ಮತ್ತು ಫ್ರೆಂಚ್ ಸಾಹಸಿ ಪಾಲ್-ಹೆನ್ರಿ ನರ್ಜಿಯೊಲೆಟ್ ಅವರು ಟೈಟಾನಿಕ್ ನೋಡಲು ಸಬ್ ಮರೀನ್ ನಲ್ಲಿ ತೆರಳಿದ್ದರು. ಭಾನುವಾರದಂದು 4,000ಮೀ ಡೈವ್‌ನಲ್ಲಿ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಂಬಲ ಹಡಗಿನೊಂದಿಗಿನ […]
ಅಧಿಕಾರಕ್ಕೆ ಬರುತ್ತಲೇ ಜನರಿಗೆ ಬೆಲೆಯೇರಿಕೆಯ ಬರೆ ಹಾಕಿದ ಕಾಂಗ್ರೆಸ್: ಸಿ.ಟಿ.ರವಿ
ಉಡುಪಿ: ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಲೆ ಏರಿಕೆಯ ಮೂಲಕ ಜನತೆಗೆ ಮೋಸ ಮಾಡಿದೆ. ಸದ್ದಿಲ್ಲದೆ ಬೆಲೆ ಏರಿಕೆಗೆ ಮುಂದಾಗಿರುವ ಸರ್ಕಾರ ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಿಸಿದೆ. ಮುಂದೆ ನೋಂದಣಿ ಶುಲ್ಕ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಗುರುವಾರ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾನೇ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಕೇಂದ್ರ ಸರ್ಕಾರ […]
ದೊಡ್ಡಣ್ಣ ಗುಡ್ಡೆ: ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ದೊಡ್ಡಣ್ಣ ಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆಯಲ್ಲಿ ಕಾರ್ಯಾರಂಭಗೊಂಡಿರುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲ್ಪಟ್ಟಿತು. ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಅನಿಶ್ ಆಚಾರ್ಯ ಅವರು ದೀಪ ಪ್ರಜ್ವಲಿಸಿ ಹಾಗೂ ಶಿಕ್ಷಕಿಯರು ಯೋಗ ಗೀತೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ಕೊರಂಗ್ರಪಾಡಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಯೋಗದ ಬಗ್ಗೆ ಮಕ್ಕಳಿಗೆ […]
ದೇವಸ್ಥಾನದ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಉಡುಪಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಜಿಲ್ಲೆಯ ಪ್ರವರ್ಗ-ಸಿ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಆರೋಗ್ಯ ವಿಮೆ ಸೌಲಭ್ಯ ಪಡೆಯಲು, ನೌಕರರ ಹೆಸರು, ಹುದ್ದೆಗೆ ಸೇರಿದ ದಿನಾಂಕ, ಹುಟ್ಟಿದ ದಿನಾಂಕ, ಬ್ಯಾಂಕಿನ ಹೆಸರು, ಬ್ಯಾಂಕ್ ಖಾತೆಯ ಸಂಖ್ಯೆ, ಐ.ಎಫ್.ಎಸ್.ಸಿ ಕೋಡ್ ವಿವರವನ್ನು ಜೂನ್ 26 ರ ಒಳಗಾಗಿ ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: […]
ಪರಶುರಾಮ ಥೀಂ ಪಾರ್ಕ್ ಭೇಟಿಗೆ ತಾತ್ಕಾಲಿಕ ನಿಷೇಧ
ಕಾರ್ಕಳ: ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾದ ಪರಶುರಾಮ ಥೀಂ ಪಾರ್ಕಿನಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಗೆ ತುಕ್ಕು ನಿರೋಧಕ ಲೇಪನ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಜೂನ್ 26 ರಿಂದ ಸೆಪ್ಟಂಬರ್ ಅಂತ್ಯದವರೆಗೆ ಪರಶುರಾಮ ರ್ಥೀಂ ಪಾರ್ಕಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.