ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ವಿಶ್ವ ಯೋಗ ದಿನಾಚರಣೆ
ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಪ್ರಾತಃಕಾಲ ಜಗನ್ನಾಥ ಸಭಾಭವನದಲ್ಲಿ ಶ್ರೀಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಇದರ ಯೋಗ ಶಿಕ್ಷಕಿ ಶ್ರೀಮತಿ ಪ್ರೀತಿ ಮನೋಹರ ಶೆಟ್ಟಿ ಯೋಗ ಪ್ರದರ್ಶನ ಮತ್ತು ತರಬೇತಿ ನೀಡಿದರು. ಸಹ ಶಿಕ್ಷಕಿಯರಾದ ಸ್ಯಾಂಡ್ರಾ ಕ್ರಾಸ್ತಾ ಹಾಗೂ ಭಾರತಿ ಹೆಗ್ಡೆ ಸಹಕರಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಯೋಗ ಶಿಕ್ಷಕಿಯರನ್ನು ಗೌರವಿಸಿದರು. ಸೊಸೈಟಿಯ ಉಪಾಧ್ಯಕ್ಷ ಎಲ್ ಉಮಾನಾಥ, ಆಡಳಿತ […]
ಉಚಿತ ವಿದ್ಯುತ್ ಯೋಜನೆ ನೋಂದಣಿಗೆ ಸರ್ವರ್ ಕಾಟ; ನಾಲ್ಕು ಜಿಲ್ಲೆಗಳಿಂದ 21160 ಅರ್ಜಿ ಸ್ವೀಕಾರ
ಮಂಗಳೂರು/ ಉಡುಪಿ: ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ 200 ಉಚಿತ ವಿದ್ಯುತ್ ಯೋಜನೆ ನೋಂದಣಿಯ ಎರಡನೇ ದಿನ ಅವಿಭಜಿತ ದ.ಕ ಜಿಲ್ಲೆಯಲ್ಲಿ ಜನರು ಸರ್ವರ್ ಸಮಸ್ಯೆ ಮತ್ತು ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸಿದರು. ಮಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದರೂ ಮಧ್ಯಾಹ್ನದ ವೇಳೆಗೆ ಸರ್ವರ್ ಸಮಸ್ಯೆಯಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. ಮಂಗಳೂರು ವನ್, ಗ್ರಾಮ ವನ್ ನ ಎಲ್ಲಾ ಕೇಂದ್ರಗಳು, ಮೆಸ್ಕಾಂ ಕಚೇರಿಗಳು,ಇಂದಿರಾ ಸೇವಾ ಕೌಂಟರ್‌ಗಳು ಎಲ್ಲೆಲ್ಲೂ ಸರ್ವರ್ ಸಮಸ್ಯೆ ತಲೆದೋರಿದೆ. ಸೋಮವಾರ ಸಂಜೆಯವರೆಗೆ ಮೆಸ್ಕಾಂ […]
ನಾನು ಮೋದಿ ಅಭಿಮಾನಿ ಎಂದ ಎಲೋನ್ ಮಸ್ಕ್; ಸಾಧ್ಯವಾದಷ್ಟು ಬೇಗ ಟೆಸ್ಲಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೇರಿಕಾ ಪ್ರವಾಸದಲ್ಲಿದ್ದು ಮಂಗಳವಾರ ಟೆಕ್ ದಿಗ್ಗಜ, ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಭೇಟಿಯಾದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ‘‘ನಾನು ಮೋದಿ ಅವರ ಅಭಿಮಾನಿ” ಎಂದು ಹೇಳಿದ್ದಾರೆ. “ಇದು ಪ್ರಧಾನ ಮಂತ್ರಿಯೊಂದಿಗಿನ ಅದ್ಭುತ ಸಭೆ ಮತ್ತು ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹಾಗಾಗಿ, ನಾವು ಹಲವು ಕಾಲದಿಂದ […]