ಕೌಶಲ್ಯ ರಥ ಬ್ಯಾಚ್ ಒನ್ ಬ್ಯೂಟಿ ಥೆರಪಿಸ್ಟ್ ತರಬೇತಿಗೆ ಚಾಲನೆ
ಕುಂದಾಪುರ: ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಸೃಷ್ಟಿ ಇನ್ಫೋಟೆಕ್ ಸಹಯೋಗದೊಂದಿಗೆ ಕೌಶಲ್ಯ ರಥ ಬ್ಯಾಚ್ ಒನ್ ಬ್ಯೂಟಿ ಥೆರಪಿಸ್ಟ್ ತರಬೇತಿಗೆ ಕುಂದಾಪುರದಲ್ಲಿ ಕೋಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಮೊಗವೀರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಸೃಷ್ಟಿ ಇನ್ಫೋಟೆಕ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ದಶಕಗಳ ಬಳಿಕ ಮಲ್ಪೆ ದಡಕ್ಕೆ ತೇಲಿ ಬಂತು ಗಂಗಾಮಾತೆಯ ಕೂದಲು
ಮಲ್ಪೆ: ಬಿಪರ್ ಜಾಯ್ ಚಂಡಮಾರುತದ ಬಳಿಕ ಇದೀಗ ಮಲ್ಪೆಯ ಸಮುದ್ರ ತೀರಕ್ಕೆ ವಿಚಿತ್ರ ವಸ್ತುಗಳು ತೇಲಿ ಬರುತ್ತಿದ್ದು ಮಲ್ಪೆ ಬೀಚ್ ನಲ್ಲಿ ಅಪರೂಪದ ಬಿಳಿ ಬಣ್ಣ ತ್ಯಾಜ್ಯ ಕಾಣಸಿಕ್ಕಿದೆ. ಶ್ಯಾವಿಗೆಯಂತಿರುವ ಈ ಪದಾರ್ಥವು ಸುಮಾರು ಎರಡು ದಶಕದ ನಂತರ ಇಲ್ಲಿನ ಸಮುದ್ರ ದಡದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಇಲ್ಲಿನ ಸ್ಥಳೀಯರು ಗಂಗಾಮಾತೆಯ ಕೂದಲು ಎಂದು ಹೇಳುತ್ತಾರೆ. ಇದು ಸುಮಾರು 10 ವರ್ಷದ ಹಿಂದೆ ಇಲ್ಲಿ ಕಾಣಸಿಕ್ಕಿದ್ದು, ಈ ಬಾರಿ ಯಥೇಚ್ಚವಾಗಿ ತೀರದಲ್ಲಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಆದರೆ ಇದನ್ನು […]
ನೀಟ್ ಪರೀಕ್ಷೆ: ಶ್ರೀವೆಂಕಟರಮಣ ಕಾಲೇಜಿನ ರಿಷಿ ಶೆಟ್ಟಿಗೆ 517 ಅಂಕ
ಕುಂದಾಪುರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಿಷಿ ಶೆಟ್ಟಿ 517 ಅಂಕಗಳನ್ನು ಪಡೆದು ಅರ್ಹತೆ ಪಡೆಯುವ ಮೂಲಕ ಸಾಧನೆಗೈದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉಡುಪಿ: ಜಿಲ್ಲಾ ಬಿಜೆಪಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಉಡುಪಿಯ ಶೇಷಶಯನ ಸಭಾಂಗಣದಲ್ಲಿ ಆಚರಿಸಲಾಯಿತು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜ್ಯೋತಿ ಬೆಳಗಿಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, […]
ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ: ದ.ಕ-ಉಡುಪಿ ಜಿಲ್ಲಾ ಸ್ಪರ್ಧಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಹುಬ್ಬಳ್ಳಿ: ಇಲ್ಲಿನ ರೈಲ್ವೆ ಶತಾಬ್ದಿ ಸಭಾಂಗಣದಲ್ಲಿ ನಡೆದ 48ನೇ ಪುರುಷರ ಹಾಗೂ 40ನೇ ಮಹಿಳೆಯರ ಕರ್ನಾಟಕ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಮಂಗಳೂರಿನ ಬಾಲಾಂಜನೇಯ ಜಿಮ್ ತಂಡದಿಂದ ಪುರುಷರ ವಿಭಾಗದಲ್ಲಿ ಪ್ರದೀಪ್ ಕುಮಾರ್ ಅವರು ದೇಹದ ತೂಕ 83. ವಿಭಾಗದ- ಸ್ಕಾಟ್ 307,5 ಕೆಜಿ- ಬೆಂಚ್ ಪ್ರೆಸ್.230.ಕೆಜಿ- ಡೆಡ್ ಲಿಫ್ಟ್-270. ಒಟ್ಟು 807.5.ಕೆಜಿ ಭಾರವನ್ನು ಎತ್ತಿ ಕನಾರ್ಟಕ ಸ್ಟೇಟ್ ಸ್ಟ್ರಾಂಗ್ ಮ್ಯಾನ್ ಪ್ರಶಸ್ತಿ ಪಡೆದರು. ಪ್ರದೀಪ್ […]