ಇಂದು ಜಗದೊಡೆಯ ಪುರಿ ಜಗನ್ನಾಥನಿಗೆ ರಥಯಾತ್ರೆ ಸಂಭ್ರಮ

ಭುವನೇಶ್ವರ: ಜಗನ್ನಾಥ ರಥ ಯಾತ್ರೆ ಎಂದೂ ಕರೆಯಲ್ಪಡುವ ಪುರಿ ರಥ ಯಾತ್ರೆಯು ಒಡಿಶಾದ ಪುರಿಯಲ್ಲಿ ನಡೆಯುವ ವಾರ್ಷಿಕ ಉತ್ಸವವಾಗಿದೆ. ಇದು ಮಹತ್ವದ ಹಿಂದೂ ಹಬ್ಬವಾಗಿದ್ದು, ಜಗನ್ನಾಥನಾದ ಕೃಷ್ಣ, ಬಲರಾಮ ಮತ್ತು ಸುಭದ್ರೆಯರನ್ನು ಬೃಹತ್ ಶೋಭಾಯಮಾನ ರಥಗಳಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಚಾಂದ್ರಮಾನ ಪಂಚಾಗ ಪದ್ದತಿಯನ್ನು ಆಧರಿಸಿ ಪುರು ಜಗನ್ನಾಥನ ರಥ ಯಾತ್ರೆಯ ದಿನವನ್ನು ನಿಗದಿ ಮಾಡಲಾಗುತ್ತದೆ. ಬಹುತೇಕ ರಥಯಾತ್ರೆಯು ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುತ್ತದೆ. ಈ ವರ್ಷ ಇದು ಜೂನ್ 20 ರಂದು ನಡೆಯುತ್ತಿದೆ. ಪುರಿಯ […]
ಒಡಿಶಾ ತ್ರಿವಳಿ ರೈಲು ದುರಂತ: ಸಿಬಿಐ ವಿಚಾರಣೆ ಬಳಿಕ ಕುಟುಂಬ ಸಮೇತ ನಾಪತ್ತೆಯಾದ ಸಿಗ್ನಲ್ ಜೂನಿಯರ್ ಎಂಜಿನಿಯರ್

ಭುವನೇಶ್ವರ: 289 ಮಂದಿ ಪ್ರಾಣ ಕಳೆದುಕೊಂಡ ಒಡಿಶಾ ತ್ರಿವಳಿ ರೈಲು ದುರಂತದ ತನಿಖೆಯನ್ನು ಮುಂದುವರೆಸಿರುವ ಸಿಬಿಐ, ಸೊರೊ ಸೆಕ್ಷನ್ ಸಿಗ್ನಲ್ ಜೂನಿಯರ್ ಇಂಜಿನಿಯರ್ (ಜೆಇ) ಬಾಡಿಗೆ ಮನೆಯನ್ನು ಸೋಮವಾರ ಸೀಲ್ ಮಾಡಿದೆ. ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ ವರದಿ ಪ್ರಕಾರ, ಅಮೀರ್ ಖಾನ್ ಎಂಬ ಜೆಇಯನ್ನು ಆರಂಭದಲ್ಲಿ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದೆ. ಏಜೆನ್ಸಿ ಅಧಿಕಾರಿಗಳು ಸೋಮವಾರ ಸೊರೊದಲ್ಲಿರುವ ಖಾನ್ ವಾಸವಾಗಿದ್ದ ಬಾಡಿಗೆ ಮನೆಗೆ ತಲುಪಿದಾಗ ಮನೆಗೆ ಬೀಗ ಹಾಕಲ್ಪಟ್ಟಿದೆ ಮತ್ತು ಆತನ ಇಡೀ ಕುಟುಂಬ ನಾಪತ್ತೆಯಾಗಿದೆ. […]