ಬೆಕ್ಕಿನ ಮರಿಯನ್ನು ರಕ್ಷಿಸಲು 40 ಅಡಿ ಆಳದ ಬಾವಿಗೆ ಇಳಿದ ಪೇಜಾವರ ಸ್ವಾಮೀಜಿ

ಉಡುಪಿ: ಮುಚ್ಲಕೋಡಿನ ದೇವಸ್ಥಾನದಲ್ಲಿ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲು ಖುದ್ದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾವಿಗಿಳಿದಿರುವ ಘಟನೆ ನಡೆದಿದೆ. ಭಾನುವಾರದಂದು ಸ್ವಾಮೀಜಿಗಳು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡಿದ್ದಾರೆ. ಬೆಕ್ಕಿನ ಮರಿಯನ್ನು ಮೇಲೆತ್ತಲು ಬಕೆಟ್ ಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟಿದ್ದರೂ ಬೆಕ್ಕಿನ ಮರಿಗೆ ಬಕೆಟ್ ಒಳಗೆ ಬರಲು ಆಗಿರಲಿಲ್ಲ. ಕಟ್ಟಕಡೆಗೆ ಸ್ವಾಮೀಜಿಯವರೇ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕಿನ ಮರಿಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.
ಜೂ. 20-22 ರ ವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಜೂನ್ 20 ರಿಂದ 22 ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ 110 ಕೆ.ವಿ ಕೇಮಾರ್ ಬೇ, ಪಿಟಿ ಬೇ, ಪರಿವರ್ತಕ- 1 ಬೇ, ಹಿರಿಯಡ್ಕ ಬೇ, ಪರಿವರ್ತಕ- 2 ಬೇ, ಪರಿವರ್ತಕ 1 ಎಂಡ್ 2 ಮತ್ತು ಎಲ್ಲಾ 11 ಕೆ.ವಿ ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ […]
ಕಾಶೀಮಠಾಧೀಶರಿಂದ ಶ್ರೀಲಕ್ಷ್ಮೀ ವೆಂಕಟೇಶ್ವರನಿಗೆ ಮಹಾಪೂಜೆ

ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಬೆಳ್ಳಿಗೆ ಪ್ರಧಾನ ದೇವರರಾದ ಶ್ರೀಲಕ್ಷ್ಮೀ ವೆಂಕಟೇಶನಿಗೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಮಹಾಪೂಜೆ ನಡೆಸಿ ಆರತಿ ಬೆಳಗಿಸಿ ಬಳಿಕ ಭಕ್ತರಿಗೆ ಪ್ರಸಾದ ನೀಡಿ ಅನುಗ್ರಹಸಿದರು. ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ಅರ್ಚಕ ಚೆಂಪಿ ಶ್ರೀಕಾಂತ್ ಭಟ್, ವಿನಾಯಕ ಭಟ್, ದೀಪಕ್ ಭಟ್, ಪುಂಡಲೀಕ ಕಾಮತ್ , ವಸಂತ್ ಕಿಣಿ, ರೋಹಿತಾಕ್ಷ ಪಡಿಯಾರ್, ಉಮೇಶ್ ಪೈ , ವಿಶಾಲ್ ಶೆಣೈ , ಸತೀಶ್ […]
ಕುಟುಂಬದ ಜೊತೆ ಪುನರ್ಮಿಲನದ ಭಾಗ್ಯ ಕಂಡ ಸ್ನೇಹಾಲಯದಲ್ಲಿದ್ದ ಚಿತ್ರದುರ್ಗದ ಹಿರಿಯೂರಿನ ಕೆಂಚಣ್ಣ

ಮಂಗಳೂರು: 19-01-2021 ರಂದು ಸ್ನೇಹಾಲಯದ ಸಂಸ್ಥಾಪಕ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಉಪ್ಪಳ, ಕಾಸರಗೋಡು ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಕೆಂಚಣ್ಣ ಎಂಬ ವ್ಯಕ್ತಿಯನ್ನು ರಕ್ಷಿಸಿದ್ದರು. ಮಾನಸಿಕ ಅಸ್ವಸ್ಥತರಂತೆ ತೋರುತ್ತಿದ್ದ ಅವರು ಅತ್ಯಂತ ಹಿಂಸಾತ್ಮಕ ನಡವಳಿಕೆಯನ್ನು ಹೊಂದಿದ್ದರು. ಅನ್ನಾಹಾರವಿಲ್ಲದೆ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ಕೆಂಚಣ್ಣನನ್ನು ಮುಂದಿನ ಆರೈಕೆ ಹಾಗೂ ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ಮನೋವೈದ್ಯಕೀಯ ಸಲಹೆಗಾರರು ಮತ್ತು ವೈದ್ಯಕೀಯ ತಂಡವು ಅವರಿಗೆ ಸೂಕ್ತ ಆರೈಕೆ ಮತ್ತು ಬೆಂಬಲವನ್ನು ನೀಡುವಲ್ಲಿ ಯಶಸ್ವಿಯಾಯಿತು. ಔಷಧಿಗಳ ಜೊತೆಗೆ, ವಿವಿಧ […]
ಪರಿಷ್ಕೃತ ಕೆ-ಸಿಇಟಿ ಫಲಿತಾಂಶ: ಜ್ಞಾನಸುಧಾ ಕಾಲೇಜಿಗೆ ಎರಡು ರ‍್ಯಾಂಕ್

ಕಾರ್ಕಳ : ಇತ್ತೀಚೆಗೆ ಹೊರಡಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಕೆ-ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ತಾಂತ್ರಿಕ ದೋಷದಿಂದ ಕೆಲ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಆ ಪರಿಷೃತ ಫಲಿತಾಂಶವು ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ನಿಶಾಂತ್ ಎನ್ ಹೆಗ್ಡೆ 1072(G55) ನೇ ರ‍್ಯಾಂಕ್ ಹಾಗೂ ಸಾತ್ವಿಕ್ ಬಿ.ಸಿ 1387(G55) ನೇ ರ‍್ಯಾಂಕ್ ಪಡೆಯುವುದರ ಮೂಲಕ ಜ್ಞಾನಸುಧಾದ 2 ಸಾವಿರದೊಳಗಿನ ರ‍್ಯಾಂಕ್‌ಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಜೊತೆಗೆ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೆ-ಸಿಇಟಿ ಇಂಜಿನಯರಿಂಗ್‌ನಲ್ಲಿ ಸಾವಿರದೊಳಗಿನ […]