ಶಾಖೋತ್ಪನ್ನ ಕೇಂದ್ರಗಳು ನಿರಾಳದ 110 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ ದೇಶದಲ್ಲಿ ದಾಖಲೆ
ನವದೆಹಲಿ : ಜೂನ್ 13 ರ ಹೊತ್ತಿಗೆ ದೇಶದ ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸಾಗಣೆಗಳಲ್ಲಿನ ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್‌ಗಳನ್ನು ತಲುಪಿದೆ. ಈ ವರ್ಷದ ಜೂನ್ 13ರ ಹೊತ್ತಿಗೆ ದೇಶದಲ್ಲಿ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್ ತಲುಪಿದೆ. ಅದೇ ಸಮಯದಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, ಜೂನ್ 13 ರ ಹೊತ್ತಿಗೆ 2023-24 ರ ಸಂಚಿತ ಸಾಧನೆಯು 164.84 ಮಿಲಿಯನ್ ಟನ್‌ಗಳಷ್ಟಿದ್ದು, ಕಳೆದ […]
ಕಲಬುರಗಿ: ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್ ಕಾನ್ಸ್‌ಟೇಬಲ್ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹತ್ಯೆ
ಕಲಬುರಗಿ: ಅಕ್ರಮ ಮರಳು ಸಾಗಾಟ ತಡೆಯಲು ಹೋದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತಪಟ್ಟ ಸಿಬ್ಬಂದಿ ನೆಲೋಗಿ ಠಾಣೆಯಲ್ಲಿ ನಿಯೋಜಿತರಾಗಿದ್ದರು. 51 ವರ್ಷದ ಎಂ. ಚೌವ್ಹಾಣ್ ಕೊಲೆಯಾದ ಹೆಡ್ ಕಾನ್ಸ್‌ಟೇಬಲ್. ಜೇವರ್ಗಿಯ ನಾರಾಯಣಪುರದ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಅಕ್ರಮ ಮರಳು ಸಾಗಾಟದ ಮಾಹಿತಿ ಪಡೆದ ಎಂ. ಚೌವ್ಹಾಣ್ ಸ್ಥಳ ಪರಿಶೀಲನೆಗೆ ಹೋಗಿದ್ದಾರೆ. ಬೈಕ್‌ನಲ್ಲಿ ಹೋಗುತ್ತಿದ್ದ ಎಂ. ಚೌವ್ಹಾಣ್ ಮೇಲೆ ಟ್ರಾಕ್ಟರ್ ಹತ್ತಿಸಿ […]
ಉಡುಪಿ: ಸ್ತ್ರೀ ಸೇವಾ ನಿಕೇತನದಲ್ಲಿದ್ದ ಮಹಿಳೆ ನಾಪತ್ತೆ
ಉಡುಪಿ:ನಗರದ ನಿಟ್ಟೂರು ಸ್ತ್ರೀ ಸೇವಾ ನಿಕೇತನದಲ್ಲಿ ಕಳೆದ ಒಂದು ತಿಂಗಳಿನಿಂದ ವಾಸವಿದ್ದ ಮಣಿಯಮ್ಮ ಯಾನೆ ವಿದ್ಯಾ ಶೆಟ್ಟಿಯಾರ್ (36) ಎಂಬ ಮಹಿಳೆಯು ಜೂನ್ 14 ರ ಮುಂಜಾನೆಯಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಕಪ್ಪು ಮೈಬಣ್ಣ, ಸಪೂರ ಉದ್ದನೆಯ ಶರೀರ ಹೊಂದಿದ್ದು, ಕನ್ನಡ, ತುಳು, ಹಿಂದಿ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದ್ಯೋಗದಿಂದ ಸಿಗುವ ಜೀವನ ಭದ್ರತೆಯು ಸಮಾಜಕ್ಕೆ ಬೆಳಕು ನೀಡುತ್ತದೆ: ಪ್ರಕಾಶ್ ಅಮ್ಮಣ್ಣಾಯ
ಉಡುಪಿ: ಕೊಡವೂರು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಆಶ್ರಯದಲ್ಲಿ, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಉಡುಪಿಯ ನಿತ್ಯಾನಂದ ಮಠ ಮಂದಿರದಲ್ಲಿ 7ನೇಯ ಮಿನಿ ಉದ್ಯೋಗ ಮೇಳ ನಡೆಯಿತು. ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ, ಉದ್ಯೋಗ ಯುವಕರಿಗೆ ಭದ್ರತೆಯನ್ನು ನೀಡುತ್ತದೆ ಮತ್ತು ಈ ಭದ್ರತೆಯಿಂದ ಸಮಾಜಕ್ಕೆ ಬೆಳಕಾಗುತ್ತದೆ. ನ್ಯಾಯ ನೀತಿ ಧರ್ಮದಲ್ಲಿ ನಡೆದಾಗ ನಮಗೆ ಜೀವನದಲ್ಲಿ […]
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಿಂದಾಗಿ ಉಡುಪಿ ಜಿಲ್ಲೆಗೆ ವಿಶ್ವಮಾನ್ಯತೆ: ಯಶ್ ಪಾಲ್ ಸುವರ್ಣ
ಉಡುಪಿ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಹುಮುಖ್ಯವಾಗಿದ್ದು, ಇವುಗಳ ಅಭಿವೃದ್ಧಿಗೆ ವಿಶೇಷ ಗಮನವನ್ನು ನೀಡಲಾಗುವುದು. ಶಿಕ್ಷಣವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಂದ ಉಡುಪಿ ಜಿಲ್ಲೆ ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ಗುರುತಿಸಿಕೊಂಡು ವಿಶ್ವಮಾನ್ಯವಾಗಿದೆ. ಈ ಎರಡೂ ಕ್ಷೇತ್ರಗಳು ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯವಾದಲ್ಲಿ ಮಾತ್ರ ದೇಶ ಅಭಿವೃದ್ಧಿಯಾಗಬಲ್ಲದು ಎಂದು ಹೇಳಿದರು. ಅವರು ಉಡುಪಿ ಪುರಭವನದಲ್ಲಿ ನಡೆದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ […]