‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ; ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಣೆ

ಮುಂಬೈ: ನಟ ಅಕ್ಷಯ್ ಕುಮಾರ್ ಮತ್ತು ಪರಿಣಿತಿ ಚೋಪ್ರಾ ಅಭಿನಯದ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಚಿತ್ರ ಘೋಷಣೆಯಾದಾಗಿನಿಂದ ಸದ್ದು ಮಾಡಿದ ಹಾಗೂ ಚರ್ಚೆಗೆ ಒಳಪಟ್ಟ ಚಿತ್ರವಾಗಿದೆ.ಶ್ರೀ ಜಸ್ವಂತ್ ಸಿಂಗ್ ಗಿಲ್ ಅವರ ಜೀವನಾಧರಿತ ಕಥೆಯ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡಿದೆ. ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಕುರಿತು ಹೊಸ ಮಾಹಿತಿ ಹಂಚಿಕೊಂಡಿರುವ ಚಿತ್ರ ವಿಶ್ಲೇಷಕ ತರಣ್ ಆದರ್ಶ್, ಅಕ್ಷಯ್ ಕುಮಾರ್ ಅವರ ‘ದಿ ಗ್ರೇಟ್ […]
ಏಕರೂಪ ನಾಗರಿಕ ಸಂಹಿತೆ: ಸಾರ್ವಜನಿಕರು 30 ದಿನಗಳೊಳಗೆ ಅಭಿಪ್ರಾಯ ಸಲ್ಲಿಸುವಂತೆ ಕಾನೂನು ಆಯೋಗ ಸೂಚನೆ

ನವದೆಹಲಿ: ಭಾರತದ 22 ನೇ ಕಾನೂನು ಆಯೋಗವು ಬುಧವಾರ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕ ಮತ್ತು ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಕೇಳಿದೆ. ವಿಭಿನ್ನ ಆಸ್ತಿ ಮತ್ತು ವೈವಾಹಿಕ ಕಾನೂನುಗಳನ್ನು ಅನುಸರಿಸುವ ವಿವಿಧ ಧರ್ಮಗಳು ಮತ್ತು ಪಂಗಡಗಳ ಜನರಿಗಾಗಿ ಏಕರೂಪದ ನಾಗರಿಕ ಸಂಹಿತಿಯ ಅವಶ್ಯಕತೆಯನ್ನು ಭಾರತೀಯ ಸಂವಿಧಾನವು ಒತ್ತಿಹೇಳಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರ ನಿಲುವನ್ನು ಸ್ಪಷ್ಟಪಡಿಸಲು ಕೇಳಿಕೊಂಡಿದ್ದು, ಕೇಂದ್ರ ಸರಕಾರವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೇಳಿದೆ. ಆಸಕ್ತರು 30 ದಿನಗಳೊಳಗೆ […]
ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಲಕ್ಷ್ಮಣ ಫಲ ಗಿಡ ವಿತರಣೆ: ಅತ್ಯುತ್ತಮವಾಗಿ ಪೋಷಿಸಿದ ಗಿಡಗಳಿಗೆ ಬಹುಮಾನ ಘೋಷಣೆ

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ವತಿಯಿಂದ ಲಕ್ಷ್ಮಣ ಫಲವನ್ನು ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ಗುರುವಾರದಂದು ಭುಜಂಗ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ರಮೇಶ್ ಪಿ ನಾಯ್ಕ್ , ಪರಿಸರ ದಿನವನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೆ ವರ್ಷಪೂರ್ತಿ ಆಚರಿಸುವ ಕಾರ್ಯಕ್ಕೆ ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದವರು ಮುಂದಾಗಿರುವುದು ಅತ್ಯುತ್ತಮ ವಿಚಾರ. ಜಿಲ್ಲೆಯಾದ್ಯಂತ 1000 ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಸಂಘದ ವತಿಯಿಂದ ನಡೆಯುತ್ತಿರುವುದು ಅಭಿನಂದನಾರ್ಹ. ಗಿಡಗಳನ್ನು ನೆಡುವುದು […]
ಪಾನ್- ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನ: ತಪ್ಪಿದಲ್ಲಿ ಪಾನ್ ನಿಷ್ಕ್ರಿಯ..!!

ಆಧಾರ್ ಕಾರ್ಡ್ (Aadhar Card) ಅನ್ನು ಪ್ಯಾನ್ ಕಾರ್ಡ್ (PAN Card) ನೊಂದಿಗೆ ಲಿಂಕ್ ಮಾಡಲು, ಇನ್ನು ಕೇವಲ 15 ದಿನಗಳು ಮಾತ್ರವೇ ಬಾಕಿ ಇದೆ. ಪ್ಯಾನ್ – ಆದಾರ್ ಲಿಂಕ್ ಮಾಡಲು 2023ರ ಜೂನ್ 30 ಕೊನೆಯ ದಿನವಾಗಿದೆ. ಜೂ.30 ರ ಒಳಗೆ 1,000 ರೂಪಾಯಿ ದಂಡ ಪಾವತಿ ಮೂಲಕ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆದಾಯ ತೆರಿಗೆ […]
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಸಾಲ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ/ನೀಟ್ ನಲ್ಲಿ ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಆಯುಷ್, ಬಿ.ಆರ್ಕ್, ಬಿ.ಇ, ಬಿ.ಟೆಕ್, ಫಾರ್ಮಸಿ, ಅಗ್ರಿಕಲ್ಚರ್ ಸೈನ್ಸ್, ವೆಟರ್ನರಿ, ಫಾರ್ಮ್ ಸೈನ್ಸ್ ಕೋರ್ಸುಗಳಿಗೆ ಆಯ್ಕೆಯಾಗುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ನಿಗಮದ ವೆಬ್ ಸೈಟ್ kmdconline.karnataka.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರು, ಕರ್ನಾಟಕ […]