ಬ್ರಹ್ಮಾವರ: ಮಹಿಳೆ ನಾಪತ್ತೆ

ಬ್ರಹ್ಮಾವರ: ತಾಲೂಕಿನ ವಾರಂಬಳ್ಳಿ ಗ್ರಾಮದ ಎಸ್.ಎಮ್.ಎಸ್ ಕಾಲೇಜು ಹಿಂಭಾಗದಲ್ಲಿ ವಾಸವಿದ್ದ ಚಂದ್ರಿಕಾ (30) ಎಂಬ ಮಹಿಳೆಯು ಜೂನ್ 4 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಸಾಧನೆಯೆ ದಾನಿಗಳಿಗೆ ಪ್ರೇರಣೆ: ಡಾ. ಅಶೋಕ್ ಕಾಮತ್

ಉಡುಪಿ: ವಿದ್ಯಾರ್ಥಿಗಳು ಮಾಡುವ ಗರಿಷ್ಠ ಮಟ್ಟದ ಶೈಕ್ಷಣಿಕ ಸಾಧನೆಗಳಿಂದ ದಾನಿಗಳು ಹೆಚ್ಚು ಹೆಚ್ಚು ಪ್ರೇರಣೆ ಹೊಂದಿ ಅವರ ಶೈಕ್ಷಣಿಕ ಅವಶ್ಯಕತೆಗಳಿಗೆ ಸ್ಪಂದನ ನೀಡುವರು ಎಂದು ಶಿಕ್ಷಣ ತಜ್ಞ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಒನ್ ಗುಡ್ ಸ್ಟೆಪ್, ಬೆಂಗಳೂರು ಇವರು ಕೊಡ ಮಾಡಿಸಿದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ದಾನಿ ಜಿನಿಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ […]
ಪೆರ್ಣಂಕಿಲ: ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜ ಸ್ಥಂಭ ವೃಕ್ಷದ ಭವ್ಯ ಮೆರವಣಿಗೆ

ಪೆರ್ಣಂಕಿಲ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಜ್ಞಾನುಸಾರ ಶ್ರೀ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಅಂಗವಾಗಿ ಇಂದು ಸಂಜೆ 4.00 ಗಂಟೆಗೆ ಧ್ವಜ ಸ್ಥಂಭದ ವೃಕ್ಷವನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಗುವುದು. ಸಂಜೆ 4.00 ಗಂಟೆಗೆ ಸರಿಯಾಗಿ ಪೆರ್ಣಂಕಿಲ ಅಂಗಾರಕಟ್ಟೆ ಸರಕಾರಿ ಆಸ್ಪತ್ರೆ ಬಳಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಕಲಾ ತಂಡಗಳು, ವಾದ್ಯಮೇಳ, ಭಜನಾ ತಂಡಗಳೊಂದಿಗೆ ವೈಭವೋಪೇತ ಮೆರವಣಿಗೆ ಆಯೋಜಿಸಲಾಗಿದ್ದು, ಭಗವದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ದೇವಳದ ಪ್ರಕಟಣೆ ತಿಳಿಸಿದೆ.