ಕಾರ್ಕಳ: ಜೂ. 21 ರಂದು ಶ್ರೀ ಕ್ಷೇತ್ರ ಅತ್ತೂರು ಪರ್ಪೆಲೆಗಿರಿಗೆ ಶಿಲಾಯಾತ್ರೆ

ಕಾರ್ಕಳ: ಕಲ್ಕುಡ ಸ-ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯ ಪುನರುತ್ಥಾನದ ನಿಮಿತ್ತ ಜೂ. 21 ರಂದು ಬೆಳಿಗ್ಗೆ 7:30 ಗಂಟೆಗೆ ಶಿಲಾಯಾತ್ರೆ ನಡೆಯಲಿದೆ. ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆರಂಭವಾಗುವ ಶಿಲಾಯಾತ್ರೆ ಅನಂತಶಯನ ಮಾರ್ಗವಾಗಿ ಗೊಮ್ಮಟ ಬೆಟ್ಟ, ಆನೆಕೆರೆ, ಶ್ರೀ ಕೃಷ್ಣ ದೇವಸ್ಥಾನ, ಬಾಲಾಜಿ ಅಯ್ಯಪ್ಪ ಶಿಬಿರ, ದೂಪದಕಟ್ಟೆಯಿಂದ ಅತ್ತೂರು ಪರ್ಪಲೆಗಿರಿಗೆ ತಲುಪಲಿದೆ. ನಂತರ 10 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶಿಲಾಪೂಜೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ತ್ರಿಶಾ ಕ್ಲಾಸಸ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಸಿ.ಎಸ್.ಇ.ಇ.ಟಿ ಕುರಿತು ಮಾಹಿತಿ ಕಾರ್ಯಗಾರ

ಉಡುಪಿ: ಸತತ ಇಪ್ಪತ್ತೈದು ವರ್ಷಗಳಿಂದ ವಾಣಿಜ್ಯ ವಿಭಾಗದ ವೃತ್ತಿಪರ ಕೋರ್ಸ್ ಗಳ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೂತನ ಸಿ.ಎಸ್.ಇ.ಇ.ಟಿ ಕುರಿತಾದ ಮಾಹಿತಿ ಕಾರ್ಯಗಾರವು ಜೂನ್ 15 ಗುರುವಾರದಂದು ಸಂಜೆ 6 ರಿಂದ 7:30ರ ವರೆಗೆ ಆನ್ಲೈನ್ ಮುಖಾಂತರ ನಡೆಯಲಿದೆ. ಪ್ರಸ್ತುತ ಸಾಲಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಆದ ಕಂಪೆನಿ ಸೆಕ್ರೆಟರಿ ಬಗ್ಗೆ ತಿಳಿದುಕೊಳ್ಳಲು ಈ ಮಾಹಿತಿ ಕಾರ್ಯಾಗಾರವು ಉಪಯುಕ್ತವಾಗಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಕೋರ್ಟ್ […]
ಆದಿವಾಸಿ ಆರೋಗ್ಯ ಕಾರ್ಯಕರ್ತೆ ಹುದ್ದೆಗಾಗಿ ಬುಡಕಟ್ಟು ಮಹಿಳೆಯರಿಂದ ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಆದಿವಾಸಿ ಆರೋಗ್ಯ ಸಂಯೋಜಕರು ಮತ್ತು ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಆದಿವಾಸಿ ಆರೋಗ್ಯ ಕಾರ್ಯಕರ್ತೆಯವರ ತಲಾ 1 ಹುದ್ದೆಗಳ ನೇಮಕಾತಿಗೆ ನರ್ಸಿಂಗ್ ತರಬೇತಿ ಪಡೆದ ಅರ್ಹ ಬುಡಕಟ್ಟು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಐ.ಟಿ.ಡಿ.ಪಿ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574814 ಅನ್ನು […]
6 ರಿಂದ 18 ವರ್ಷದೊಳಗಿನ ಸಾಹಿಸಿ ಮಕ್ಕಳಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಐ.ಸಿ.ಸಿ.ಡಬ್ಲ್ಯೂ ನ್ಯಾಷನಲ್ ಬ್ರೇವರಿ ಅವಾರ್ಡ್ ಪ್ರಶಸ್ತಿ ಪಡೆಯಲು, ಧೈರ್ಯ, ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಮಕ್ಕಳ ಸೂಕ್ತ ಪ್ರಸ್ತಾವನೆಯನ್ನು ಅಕ್ಟೋಬರ್ 15 ರ ಒಳಗೆ ವೆಬ್‌ಸೈಟ್ www.iccw.co.in ನಲ್ಲಿ ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ: ಬೆಂಗಳೂರಿಗೆ ಹೋದ ಯುವತಿ ನಾಪತ್ತೆ

ಬಂಟ್ವಾಳ: ಬೆಂಗಳೂರಿಗೆ ಹೋಗುವುದಾಗಿ ಸಂದೇಶ ಕಳುಹಿಸಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಎಂಬವರ ಪುತ್ರಿ ನೇಹಾ (22) ನಾಪತ್ತೆಯಾದ ಯುವತಿ. ಮಂಗಳೂರಿನ ಸುರಕ್ಷತಾ ಸಲಕರಣೆ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ನೇಹಾ, ತನಗೆ ಮದುವೆಯ ಪ್ರಸ್ತಾಪವನ್ನು ನೋಡುತ್ತಿದ್ದ ಮನೆಯವರಲ್ಲಿ ತಾನು ಸದ್ಯಕ್ಕೆ ಮದುವೆಯಾಗುವುದಿಲ್ಲ, ತನಗಿನ್ನೂ ಹೆಚ್ಚು ಓದುವ ಆಸೆ ಇದೆ ಎಂದು ತಿಳಿಸಿದ್ದಳು. ಮೇ 27ರಂದು ನೇಹಾ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಸಂಜೆ 4 ಗಂಟೆಗೆ ಚಿಕ್ಕಮ್ಮನ ಮೊಬೈಲ್‌ಗೆ ತಾನು […]