ತನುಜಾಸ್ ಮೈಂಡ್ ಥೆರಪಿ ವತಿಯಿಂದ ಮೀಟ್ ಮತ್ತು ಗ್ರೀಟ್ ಸೆಷನ್
ಮಣಿಪಾಲ: ಜೂನ್ 11ರಂದು ಇಲ್ಲಿನ ಆಶ್ಲೇಷ್ ಹೋಟೇಲಿನ ಸಭಾಂಗಣದಲ್ಲಿ ತನುಜಾ ಮಾಬೆನ್ ಅವರ ಮೈಂಡ್ ಥೆರಪಿ ವತಿಯಿಂದ ಮೀಟ್ ಮತ್ತು ಗ್ರೀಟ್ ಸೆಷನ್ ಅನ್ನು ಆಯೋಜಿಸಲಾಗಿತ್ತು. ತನುಜಾ ಮಾಬೆನ್ ಅವರ ಬಳಿ ಆಪ್ತಸ್ಮಾಲೋಚನೆಗೆ ಬರುವ ಕ್ಲೈಂಟ್ ಗಳು ಈ ಸೆಷನ್ ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದು ಈ ವರ್ಷದ ಎರಡನೇ ಸೆಷನ್ ಆಗಿತ್ತು. ಸೆಷನ್ ತಂಡದ ಕೆಲಸ, ನಂಬಿಕೆ ಮತ್ತು ಮನಸ್ಸನ್ನು ಅರ್ಥಮಾಡಿಕೊಳ್ಳುವ ಚಟುವಟಿಕೆಗಳ ಜೊತೆಗೆ ಮೋಜಿನಿಂದ ತುಂಬಿತ್ತು. ಮೈಂಡ್ ಥೆರಪಿಯ ಹಲವಾರು ಹೊಸ ಮತ್ತು […]
ಮುಂಗಾಳು ಮಳೆ ವಿಳಂಬ; ಮೋಡ ಬಿತ್ತನೆಗೆ ಚಿಂತನೆ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಧಾರವಾಡ: ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳ ಹಿಂದೆಯೇ ರಾಜ್ಯಕ್ಕೆ ಮುಂಗಾರು ಮಾರುತಗಳು ಆಗಮಿಸಿದ್ದರೂ ಮಳೆ ಸುರಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ತಲೆದೋರುತ್ತದೆ ಎನ್ನುವ ನಂಬಿಕೆ ಇದ್ದು, ಜನಸಾಮಾನ್ಯರು ಅದಾಗಲೇ ಈ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ. ಮುಂಗಾರು ಮಳೆ ಬಂದು ಕೃಷಿ ಚಟುವಟಿಕೆಗಳು ಗರಿಗೆದರ ಬೇಕಾಗಿದ್ದ ಈ ಹೊತ್ತಿನಲ್ಲಿ ರಣಬಿಸಿಲು […]
ಹಲಸಿನ ಹಣ್ಣಿನ ಅಚ್ಚರಿಯೆನಿಸುವ ಆಯುರ್ವೇದೀಯ ಆರೋಗ್ಯ ಪ್ರಯೋಜನಗಳು ಹಲವು
ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಹಲಸು ಉಷ್ಣವಲಯದ ದೇಶಗಳಾದ ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತವೆ. ಪ್ರಾಚೀನ ಕಾಲದಿಂದಲೂ ಮಾನವನ ಆಹಾರದ ಭಾಗವಾಗಿರುವ ಹಲಸಿನ ಹಣ್ಣನ್ನು ಸಂಸ್ಕೃತದಲ್ಲಿ ಪಾನಸ ಫಲ ಎಂದು ಕರೆಯಲಾಗುತ್ತದೆ. ಹಲಸು ಬಾಂಗ್ಲಾದೇಶ ಮತ್ತು ಶ್ರೀಲಂಕಾದ ರಾಷ್ಟ್ರೀಯ ಹಣ್ಣಾಗಿದ್ದರೆ, ಭಾರತದ ಕೇರಳ ಮತ್ತು ತಮಿಳುನಾಡಿನಲ್ಲಿ ರಾಜ್ಯ ಹಣ್ಣು ಎನ್ನುವ ಹೆಗ್ಗಳಿಕೆ ಹೊಂದಿದೆ. ಆಯುರ್ವೇದವು ಹಲಸಿನ ಹಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಇದು ದೇಹದಲ್ಲಿ ಪಿತ್ತ ಮತ್ತು ವಾತ […]
ವಾಮಂಜೂರು: ಜನರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ; ಅಣಬೆ ಫ್ಯಾಕ್ಟರಿ ಮುಚ್ಚಲು ಆದೇಶ
ವಾಮಂಜೂರು: ಇಲ್ಲಿನ ಆಶ್ರಯ ನಗರದ ಬಳಿ ಇರುವ ಅಣಬೆ ಫ್ಯಾಕ್ಟರಿಯಿಂದಾಗಿ ಪರಿಸರ ಮಾಲಿನ್ಯವಾಗುತ್ತಿದ್ದು ಜನರಿಗೆ ಆರೋಗ್ಯ ಸಮಸ್ಯೆಗಳು ಬರುತ್ತಿವೆ ಎಂದು ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆಗೆ ತಾರ್ಕಿಕ ಅಂತ್ಯ ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಣಬೆ ಫ್ಯಾಕ್ಟರಿ ಘಟಕವನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ. ಅಣಬೆ ಫ್ಯಾಕ್ಟರಿಯಿಂದಾಗಿ ದುರ್ವಾಸನೆಯಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದ್ದು, ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ. ಶ್ವಾಸಕೋಶ ತೊಂದರೆ, ತಲೆನೋವು, ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ಹಾಗಾಗಿ […]
ಕುಂದಾಪುರ: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಸಾವು
ಕುಂದಾಪುರ: ರಸ್ತೆ ದಾಟಲು ನಿಂತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ರಾತ್ರಿ ನಡೆದಿದೆ. ಮೃತರನ್ನು ಸಾಸ್ತಾನ ಮೂಲದ ರಾಜು ಪೂಜಾರಿ ಎಂದು ಗುರುತಿಸಲಾಗಿದೆ. ರವಿವಾರದಂದು ರಾತ್ರಿ ವೇಳೆ ತ್ರಾಸಿಯ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಡಿವೈಡರ್ ಬಳಿ ರಸ್ತೆಯ ಅಂಚಿನಲ್ಲಿ ರಾಜು ಪೂಜಾರಿ ರಸ್ತೆ ದಾಟಲು ನಿಂತಿದ್ದಾಗ ಕುಂದಾಪುರ ಕಡೆಯಿಂದ ಬೈಂದೂರಿನತ್ತ […]