ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ಪ್ರೋತ್ಸಾಹ ನೀಡಿದ ರಿಷಭ್ ಪಂತ್

ಟೀಂ ಇಂಡಿಯಾ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್​ ಪಂತ್ ಶನಿವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡಕ್ಕೆ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 30 ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದ ಪಂತ್. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಕೂಡ ರಿಷಭ್​ ಪಂತ್ ಅವರನ್ನು ತುಂಬಾ ಮಿಸ್​ […]

ಜೂನ್ 15 ರವರೆಗೆ ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ ವಿಸ್ತರಣೆ

ಮಣಿಪುರ: ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮಣಿಪುರ ಸರ್ಕಾರ ಇನ್ನೂ ಐದು ದಿನಗಳವರೆಗೆ (ಜೂನ್ 15 ರವರೆಗೆ) ವಿಸ್ತರಿಸಿದೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿರುವ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಅಂತರ್ಜಾಲ ನಿಷೇಧವನ್ನು ಮುಂದಿನ ಐದು ದಿನಗಳವರೆಗೆ ವಿಸ್ತರಿಸಲಾಗಿದೆ” ಎಂದು ಅಧಿಕೃತ ಪ್ರಕಟಣೆ ಮೂಲಕ ತಿಳಿಸಲಾಗಿದೆ.ಕೆಲವು ಸಮಾಜ ವಿರೋಧಿ ಚಟುವಟಿಕೆಗಳನ್ನು ಪ್ರಚೋದಿಸುವ ಫೋಟೋಗಳು, ದ್ವೇಷದ ವಿಡಿಯೋ ಸಂದೇಶಗಳು ಮತ್ತು ಭಾಷಣ ಪ್ರಸಾರ ಮಾಡಲು ಸಾಮಾಜಿಕ […]

ಹೆಬ್ರಿ ಸೀತಾನದಿ ಬಳಿ ಬಸ್- ಕಾರು ಅಪಘಾತ: ಇಬ್ಬರು ಶಿಕ್ಷಕರು ಬಲಿ, ಒಬ್ಬರು ಗಂಭೀರ

ಹೆಬ್ರಿ: ಹೆಬ್ರಿ ಸೀತಾನದಿ ಬಳಿ ಬಸ್-ಕಾರು ಅಪಘಾತದಲ್ಲಿ ಉಡುಪಿ ಮೂಲದ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇನ್ನೋರ್ವ ಶಿಕ್ಷಕರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆಯು ಸೀತಾನದಿ ಜಕ್ಕನಮಕ್ಕಿ ಬಳಿ ಜೂ. 11ರ ಆದಿತ್ಯವಾರ ಸುಮಾರು 1.30 ಕ್ಕೆ ಸಂಭವಿಸಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ಶಿಕ್ಷರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿಯಿಂದ ಆಗುಂಬೆ ಹೋಗುತ್ತಿರುವ ಬಸ್ ಹಾಗೂ ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿರುವ ಶಿಕ್ಷಕರ ಕಾರಿನ ನಡುವೆ ಅಪಘಾತ ನಡೆದಿದೆ. ಮೃತಪಟ್ಟವರು ಉಡುಪಿ ಡಿಡಿಪಿಐ ಆಫೀಸ್ ನ ಪ್ರಥಮ […]

ಬೆಂಗಳೂರಿನ ಸ್ಟಾರ್ಟ್ ಕಂಪನಿಯಿಂದ ಅಭಿವೃದ್ದಿಪಡಿಸಲಾದ ಭಾರತದ ಮೊದಲ ಸಂಪೂರ್ಣ ಅಟೋನಾಮಸ್ ಕಾರು zPod

ಬೆಂಗಳೂರು: ಭಾರತದ ಪ್ರರ್ಥಮ ಅಟೋನಾಮಸ್ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾದ zPod ಅನ್ನು 2021 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಮೈನಸ್ ಝೀರೋ ಸ್ಟಾರ್ಟ್ ಅಪ್ ಕಂಪನಿ ಅಭಿವೃದ್ಧಿಪಡಿಸಿದ್ದು, ಇದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕೇಂದ್ರೀಕರಿಸಿದೆ. ತೆರೆದ ಬದಿಗಳೊಂದಿಗೆ ಕಾಂಪ್ಯಾಕ್ಟ್, ಕೋನೀಯ ಯಂತ್ರದೊಂದಿಗೆ ಸಂಪೂರ್ಣ ಸ್ವಾಯತ್ತ ವಿದ್ಯುತ್ ವಾಹನವನ್ನು ಯೂಟ್ಯೂಬ್‌ನಲ್ಲಿ ಮೈನಸ್ ಝೀರೋ ಲೈವ್‌ಸ್ಟ್ರೀಮ್ ಮಾಡಿದ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ ವ್ಯಾಖ್ಯಾನಿಸಿದಂತೆ ಸ್ಟೀರಿಂಗ್ ಚಕ್ರವನ್ನು ಹೊಂದಿರದ zPod 5 ನೇ ಹಂತದ ಸ್ವಾಯತ್ತತೆಯನ್ನು ನೀಡಲು […]

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ

ಕುಂದಾಪುರ: ಇಲ್ಲಿನ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ 2022 – 23 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರ‍್ಯಾಂಕ್ ಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ನೇಹಾ ಜೆ.ರಾವ್ 3ನೇ, ಸೃಜನ್ ಭಟ್ 6ನೇ, ಪ್ರಣಮ್ಯ 7 ನೇ, ಪ್ರಜ್ಞಾ ಶೆಟ್ಟಿ , ನಿತೇಶ್, ಇಂಚರ 8ನೇ, ಮಯೂರ್ ಶೆಟ್ಟಿ 9ನೇ , ಉಜ್ವಲ ಶೇಟ್, ಸಂಜನಾ ಶೆಟ್ಟಿ 10ನೇ ರ‍್ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ ನೇಹಾ ಎಸ್. ರಾವ್ 5ನೇ, […]