ಜೆಡ್ಡಾಗೆ ತೆರಳಿತು ಭಾರತದ ಮೊದಲ ಸಂಪೂರ್ಣ ಮಹಿಳಾ ಹಜ್ ವಿಮಾನ: ಇತಿಹಾಸ ನಿರ್ಮಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್
ಕೋಝಿಕ್ಕೋಡ್: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಭಾರತದ ಮೊದಲ ಅಂತರರಾಷ್ಟ್ರೀಯ ಬಜೆಟ್ ಏರ್‌ಲೈನ್, ಭಾರತದ ಮೊದಲ ಸಂಪೂರ್ಣ ಮಹಿಳೆಯರ ಹಜ್ ವಿಮಾನವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಗುರುವಾರ ಇತಿಹಾಸ ನಿರ್ಮಿಸಿದೆ. ವಿಮಾನದಲ್ಲಿ ಮಹಿಳಾ ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯುವ ಹಜ್ ಕಮಿಟಿ ಆಫ್ ಇಂಡಿಯಾದ ಉಪಕ್ರಮಕ್ಕೆ ಪೂರಕವಾಗಿ, ಹಾರಾಟದ ಸಮಯದಲ್ಲಿ ಪ್ರತಿ ನಿರ್ಣಾಯಕ ಕಾರ್ಯಾಚರಣೆಯ ಉಸ್ತುವಾರಿಯನ್ನು ವಹಿಸಿಕೊಂಡ ಎಲ್ಲಾ ಮಹಿಳಾ ಸಿಬ್ಬಂದಿಯಿಂದಾಗಿ ಈ ಗಮನಾರ್ಹ ಸಾಧನೆ ಸಾಧ್ಯವಾಗಿದೆ ಎಂದು ಡಿಡಿನ್ಯೂಸ್ ವರದಿ ಹೇಳಿದೆ. ವಿಮಾನ ಸಂಖ್ಯೆ IX 3025, ಕೋಝಿಕ್ಕೋಡ್‌ನಿಂದ […]
71ನೇ ವಿಶ್ವ ಸುಂದರಿ ಸ್ಪರ್ಧೆಯ ಆತಿಥೇಯ ಪ್ರತಿನಿಧಿಯಾಗಿ ಜಗತ್ತನ್ನು ಸ್ವಾಗತಿಸಲಿದ್ದಾರೆ ಸಿನಿಶೆಟ್ಟಿ
ನವದೆಹಲಿ: ಬರೋಬ್ಬರಿ 27 ವರ್ಷಗಳ ಬಳಿಕ 71ನೇ ವಿಶ್ವ ಸುಂದರಿ ಸ್ಪರ್ಧೆಯು ಭಾರತದಲ್ಲಿ ನಡೆಯಲಿದ್ದು, ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ವಿಜೇತೆ ಸಿನಿಶೆಟ್ಟಿ ಆತಿಥೇಯ ಪ್ರತಿನಿಧಿಯಾಗಿದ್ದು ಈ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಈ ಘಳಿಗೆಗೋಸ್ಕರ ತುಂಬಾ ಸಮಯದಿಂದ ಕಾಯುತ್ತಿದ್ದೆ, ನಾನು ಆತಿಥೇಯ ಪ್ರತಿನಿಧಿಯಾಗಿದ್ದು ಜಗತ್ತಿನ ಎಲ್ಲಾ ದೇಶಗಳನ್ನು ಭಾರತಕ್ಕೆ ಸ್ವಾಗತಿಸಲು, ಭಾರತದ ಸಂಸ್ಕೃತಿ, ಆಚಾರ ವಿಚಾರ ಹಾಗೂ ಆಹಾರದ ಪರಿಚಯವನ್ನು ಜಗತ್ತಿಗೆ ಪರಿಚಯಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ಸುದ್ದಿಸಂಸ್ಥೆ ಎ.ಎನ್.ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. […]
ಸಸ್ಯಾಹಾರ-ಮಾಂಸಾಹಾರ ಮತ್ತು ಸವಿರುಚಿಯಾದ ಐಸ್ ಕ್ರೀಂ ಗಾಗಿ ಶ್ರೀವೀರಭದ್ರ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಕೆಟರರ್ಸ್
ಉಡುಪಿ: ಇಲ್ಲಿನ ಕೆ.ಎಂ ಮಾರ್ಗದಲ್ಲಿರುವ ಸುಪರ್ ಬಜಾರ್ ನಲ್ಲಿ, ಮದರ್ ಕೇರ್ ಮುಂದುಗಡೆ ತೆರೆದಿರುವ ಶ್ರೀ ವೀರಭದ್ರ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಕೆಟರರ್ಸ್ ನಲ್ಲಿ ರುಚಿ ಮತ್ತು ಶುಚಿಯಾದ ಸಸ್ಯಾಹಾರ, ಮಾಂಸಾಹಾರದ ಅಡುಗೆಗಳು ಮತ್ತು ಐಸ್ ಕ್ರೀಂಗಳು ದೊರಕುತ್ತವೆ. ಮದುವೆ ಸಮಾರಂಭ ಇತ್ಯಾದಿಗಳಿಗಾಗಿ ಕೇಟರಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ. ರೆಸ್ಟೋರೆಂಟ್ ಸಮಯ ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಆರ್ಡರ್ ಗಾಗಿ ಸಂಪರ್ಕಿಸಿ: 9480395477/9241423482
ಗೋಹತ್ಯೆ ವಿರೋಧಿ ಕಾನೂನಿನ ಬಗ್ಗೆ ಸಚಿವ ವೆಂಕಟೇಶ್ ವಿವಾದಿತ ಹೇಳಿಕೆ: ಮಿತಿಯಲ್ಲಿರಲು ಸೂಚಿಸಿದ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು: ರಾಜ್ಯದಲ್ಲಿನ ಗೋಹತ್ಯೆ ವಿರೋಧಿ ಕಾನೂನಿನ ಬಗ್ಗೆ ಕರ್ನಾಟಕ ಪಶುಸಂಗೋಪನೆ ಸಚಿವ ಕೆ ವೆಂಕಟೇಶ್ ಅವರ ಅಭಿಪ್ರಾಯಗಳಿಗಾಗಿ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಅವರಿಗೆ ಛೀಮಾರಿ ಹಾಕಿದೆ ಮತ್ತು “ತಮ್ಮ ಮಿತಿಯೊಳಗೆ” ಇರುವಂತೆ ಹೇಳಿದೆ ಎಂದು ವರದಿಯಾಗಿದೆ. ಕರ್ನಾಟಕ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಕರ್ನಾಟಕದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸಚಿವ ಕೆ ವೆಂಕಟೇಶ್ ಅವರಿಗೆ ತಮ್ಮ ಮಿತಿಯಲ್ಲಿರಲು ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಕೆ.ವೆಂಕಟೇಶ್ ಅವರು ಎಮ್ಮೆ, ಹೋರಿಗಳನ್ನು ಕಡಿಯುವುದಾದರೆ ಗೋಹತ್ಯೆ ಮಾಡುವುದರಲ್ಲಿ ತಪ್ಪೇನು? […]
ಮಂಗಳೂರು: ವಾಮಂಜೂರಿನಲ್ಲಿ ಅಣಬೆ ಕಾರ್ಖಾನೆ ವಿರುದ್ದ ಸಾರ್ವಜನಿಕರಿಂದ ಧರಣಿ
ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರು ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣಬೆ ಕಾರ್ಖಾನೆಯಿಂದ ಆರೋಗ್ಯ ಹಾನಿಯಾಗುತ್ತಿರುವ ವಿರುದ್ದ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು, ಗುರುವಾರದಂದು ಇಲ್ಲಿನ ವ್ಯಾಪಾರಿಗಳು ಅರ್ಧ ದಿನ ಅಂಗಡಿ ಮುಂಗಟ್ಟು ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಅಣಬೆ ಕಾರ್ಖಾನೆಯನ್ನು ಮುಚ್ಚುವಂತೆ ಒತ್ತಾಯಿಸಿ ನಿವಾಸಿಗಳು ಸ್ಥಳೀಯ ಗ್ರಾಮಸ್ಥ ರಿಯಾಜ್ ಅಹಮದ್ ಅವರೊಂದಿಗೆ ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದು, ಸುಮಾರು 190 ಮನೆಗಳಿರುವ ಜನವಸತಿ ಪ್ರದೇಶದಲ್ಲಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಖಾನೆಯೊಳಗೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದ್ದು, ಅಣಬೆ ಕಟಾವು […]