ವಿಶ್ವಕಪ್ ಉಚಿತ ವೀಕ್ಷಣೆಗೆ ಅವಕಾಶ : ಜಿಯೋ ಸಿನಿಮಾ ಜೊತೆ ಸ್ಪರ್ಧೆಗೆ ಇಳಿದ ಹಾಟ್ಸ್ಟಾರ್, ಏಷ್ಯಾಕಪ್
ಜಿಯೋ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲ್ಲಾ ಸಿಮ್ ಬಳಕೆದಾರರಿಗೆ ಉಚಿತವಾಗಿ ವೀಕ್ಷಣೆ ಅವಕಾಶ ನೀಡಿ ಭರ್ಜರಿ ಪ್ರತಿಕ್ರಿಯೆಗಳಿಸಿತ್ತು.ಒಟಿಟಿಯಲ್ಲಿ ಜಿಯೋ ಸಿನಿಮಾ ಮತ್ತು ಹಾಟ್ಸ್ಟಾರ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಐಪಿಎಲ್ ಉಚಿತ ವೀಕ್ಷಣೆಯ ದಾಖಲೆಯನ್ನು ಮುರಿಯಲು ಏಷ್ಯಾಕಪ್ ಮತ್ತು ವಿಶ್ವಕಪ್ನ್ನು ಹಾಟ್ಸ್ಟಾರ್ ಉಚಿತ ಪ್ರಸಾರ ಮಾಡಲು ಮುಂದಾಗಿದೆ. ದಾಖಲೆಯ ಜಾಹೀರಾತುದಾರನ್ನು ಪಡೆದುಕೊಂಡಿತ್ತು. ಅಲ್ಲದೇ ಒಂದೇ ದಿನ ಹೆಚ್ಚು ಜನರು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದರು. ಐಪಿಎಲ್ ಫೈನಲ್ ಪಂದ್ಯವನ್ನು3.2 ಕೋಟಿ ಜನರು ಓಟಿಟಿ ಪರದೆಯ ಮೇಲೆ ವೀಕ್ಷಣೆ ಮಾಡಿದ್ದರು. ಈ […]
ದ್ವಿತೀಯ ಪಿಯುಸಿ ಬಳಿಕ HCLTech ನಲ್ಲಿ ತರಬೇತಿ ಮತ್ತು ನೇರ ನೇಮಕಾತಿ ಪಡೆಯುವ ಅವಕಾಶ
4 ವರ್ಷದ ಇಂಜಿನಿಯರಿಂಗ್ / ಬಿಸಿಎ ಮತ್ತು ಐಟಿ / ಸಾಫ್ಟ್‌ವೇರ್ ಇಂಡಸ್ಟ್ರಿಗೆ ಸೇರದೆ ದ್ವಿತೀಯ ಪಿಯುಸಿ ನಂತರ ನೇರವಾಗಿ HCLTech ಗೆ ಸೇರಿಕೊಳ್ಳಲು ಸುವರ್ಣಾವಕಾಶ. ರಾಷ್ಟ್ರೀಯ ಪೂರ್ವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರ ಸಂಘವು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಪಿಯು ಇಲಾಖೆಯ ಸಹಯೋಗದೊಂದಿಗೆ HCL TECHBEE ನೇರ ನೇಮಕಾತಿ ಅಭಿಯಾನವನ್ನು ಆಯೋಜಿಸುತ್ತಿದೆ. ಸ್ಥಳ: ಸರ್ಕಾರಿ ಪಿಯು ಕಾಲೇಜು (ಬೋರ್ಡ್ ಹೈಸ್ಕೂಲ್), ಸರ್ವೀಸ್ ಬಸ್ ನಿಲ್ದಾಣದ ಹತ್ತಿರ, ಉಡುಪಿ. ದಿನಾಂಕ: ಜೂನ್ 12 […]
ಬ್ರಹ್ಮಾವರ: ಜೂನ್ 10-11 ರಂದು ಎಸ್.ಎಸ್ಂ.ಎಸ್ ಸಮುದಾಯಭವನದಲ್ಲಿ ಹಣ್ಣು ಮೇಳ-2023
ಬ್ರಹ್ಮಾವರ: ರೋಟರಿ ಕ್ಲಬ್ ಬ್ರಹ್ಮಾವರ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೆಂದ್ರ ಹಾಗೂ ಸಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಬ್ರಹ್ಮಾವರ, ವಿಜಯ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನ, ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಉಡುಪಿ ಇವರ ಸಂಯುಕ್ರ ಆಶ್ರಯದಲ್ಲಿ ಬ್ರಹ್ಮಾವರ ಎಸ್.ಎಂ.ಎಸ್ ಸಮುದಾಯಭವನದಲ್ಲಿ ಜೂನ್ 10 ಮತ್ತು 11 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ […]
ಉಸ್ತುವಾರಿ ಸಚಿವರ ನೇಮಕ: ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಸಂಪೂರ್ಣ ಪಟ್ಟಿ ಇಲ್ಲಿದೆ… ಬೆಂಗಳೂರು ನಗರ- ಡಿಕೆ ಶಿವಕುಮಾರ್ ತುಮಕೂರು- ಡಾ. ಜಿ ಪರಮೇಶ್ವರ್ ಗದಗ- ಹೆಚ್.ಕೆ ಪಾಟೀಲ್ ಬೆಂಗಳೂರು ಗ್ರಾ.- ಕೆ.ಹೆಚ್ ಮುನಿಯಪ್ಪ ರಾಮನಗರ- ರಾಮಲಿಂಗಾರೆಡ್ಡಿ ಚಿಕ್ಕಮಗಳೂರು- ಕೆಜೆ ಜಾರ್ಜ್ ವಿಜಯಪುರ- ಎಂ.ಬಿ ಪಾಟೀಲ್ ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್ ಮೈಸೂರು- ಹೆಚ್.ಸಿ ಮಹದೇವಪ್ಪ […]
ಗೃಹಪ್ರವೇಶವಾದ ಐದೇ ದಿನಕ್ಕೆ ಮನೆ ಮಾಲಕಿ ಆತ್ಮಹತ್ಯೆ ಪ್ರಕರಣ: ಬ್ಯಾಂಕ್ ನಲ್ಲಿ ಬಾಕಿ ಇಟ್ಟಿದ್ದ ಸಾಲ ಸಾವಿಗೆ ಕಾರಣ?
ಉಳ್ಳಾಲ: ಕುಂಪಲದ ಚಿತ್ರಾಂಜಲಿ ನಗರದಲ್ಲಿ ಮನೆ ಖರೀದಿಸಿ ಗೃಹಪ್ರವೇಶವಾದ ಐದನೇ ದಿನಕ್ಕೆ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಶ್ವಿನಿ ಬಂಗೇರ(25) ಸಾವಿಗೆ ಸ್ನೇಹಿತೆ ಬ್ಯಾಂಕ್ ನಲ್ಲಿ ಬಾಕಿ ಇಟ್ಟಿದ್ದ ಸಾಲವೆ ಕಾರಣ ಎನ್ನಲಾಗಿದೆ. ಮೂಲತಃ ಫರಂಗಿಪೇಟೆಯವರಾದ ಅಶ್ವಿನಿ ಕುಂಪಲದಲ್ಲಿ ತಾನು ಹೊಸದಾಗಿ ಕೊಂಡ ಮನೆಯ ಗೃಹ ಪ್ರವೇಶವನ್ನು ಅದ್ದೂರಿಯಾಗಿ ನಡೆಸಿ ತನ್ನ ತಾಯಿ ದೇವಕಿ ಹಾಗೂ ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಆದರೆ ವಿಧಿ ಅದೇ ಮನೆಯಲ್ಲಿ ಆಕೆಯ ಸಾವಿಗೆ ಮುನ್ನುಡಿ ಬರೆದಿತ್ತು […]