ಒಡಿಶಾ ತ್ರಿವಳಿ ರೈಲು ಅಪಘಾತ: ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣ; ಸೇವೆ ಪುನರಾರಂಭ
ಒಡಿಶಾ: 275 ಜನರನ್ನು ಬಲಿತೆಗೆದುಕೊಂಡ ಭೀಕರ ಬಾಲಸೋರ್ ರೈಲು ಅಪಘಾತ ಸಂಭವಿಸಿದ ವಿಭಾಗದಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಪ್ರಯಾಣಿಕರು ಮತ್ತು ಸಿಬ್ಬಂದಿಯತ್ತ ಕೈಬೀಸಿದರು ಮತ್ತು ಅವರ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು. ಬಾಲಾಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಅವಧಿಯಲ್ಲಿ ಮೇಲಿನ ಮತ್ತು ಕೆಳಗಿನ ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣವಾಗಿದ್ದು ಸೇವೆಗಳು ಪುನರಾರಂಭಗೊಂಡಿವೆ. ದುರ್ಘಟನೆಯಲ್ಲಿ275 ಜನ ಸಾವನ್ನಪ್ಪಿದ್ದು 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. […]
ಒಡಿಶಾ ರೈಲು ದುರಂತ: ಉಡುಪಿ ಸಾರ್ವಜನಿಕರಿಗಾಗಿ ಸಹಾಯವಾಣಿ
ಉಡುಪಿ : ಒಡಿಶಾ ರಾಜ್ಯದಲ್ಲಿ ರೈಲು ಅಪಘಾತ ಸಂಭವಿಸಿದ್ದು, ಸದ್ರಿ ಅಪಘಾತದಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಯಾರಾದರೂ ಸಾರ್ವಜನಿಕರು ಸಿಲುಕಿಕೊಂಡಿದ್ದರೆ, ಆ ಬಗ್ಗೆ ಸದ್ರಿಯವರ ಮಾಹಿತಿಯನ್ನು ಸಂಬಂಧಿಸಿದವರು ಕರ್ನಾಟಕ ರಾಜ್ಯ ಸಹಾಯವಾಣಿ ಕೇಂದ್ರ 080-22253707 / 080-22340676 (Toll Free No:1070), ಉಡುಪಿ ಜಿಲ್ಲಾಧಿಕಾರಿ ಕಛೇರಿ (24*7) ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 0820–2574802 , (Toll Free No:1070), ಸಂಖ್ಯೆಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.