ಜೂನ್ 6- 7 ರಂದು ಜಿಲ್ಲಾ ವ್ಯಾಪ್ತಿಯ ಹಲವೆಡೆ ವಿದ್ಯುತ್ ನಿಲುಗಡೆ
ಉಡುಪಿ: ಜೂನ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ 110/33/11 ಕೆ.ವಿ ವಿದ್ಯುತ್ ವಿತರಣಾಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110 ಕೆ.ವಿ ಮಧುವನ-ಕುಂದಾಪುರ-ನಾವುಂದ ಮಾರ್ಗದ ಮಾರ್ಗ ಮುಕ್ತತೆ ಇರುವುದರಿಂದ 110/11 ಕೆ.ವಿ ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದ ಹಾಗೂ ಹಾಗೂ 33/11 ಕೆ.ವಿ ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಕೊಲ್ಲೂರು ಮತ್ತು ಗಂಗೊಳ್ಳಿಯಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳ […]
ಜುಲೈ 19 ರಂದು ಮುಟ್ಟುಗೋಲು ಹಾಕಿರುವ ವಾಹನಗಳ ಹರಾಜು ಪ್ರಕ್ರಿಯೆ
ಉಡುಪಿ: ಉಡುಪಿ ಸಾರಿಗೆ ಇಲಾಖೆಯ ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳ ಮಾಲೀಕರು ಇಂದಿನವರೆಗೆ, ವಾಹನಗಳನ್ನು ಬಿಡಿಸಿಕೊಳ್ಳಲು ಮುಂದೆ ಬಾರದ ಕಾರಣ, ಈ ವಾಹನಗಳನ್ನು ಅವುಗಳು ಹೇಗಿವೆಯೋ ಹಾಗೆಯೇ ಜುಲೈ 19 ರಂದು ಬೆ.11 ಗಂಟೆಗೆ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹರಾಜು ಹಾಕಲಾಗುವುದು. ಸದ್ರಿ ವಾಹನಗಳ ಮಾಲೀಕರು 10 ದಿನಗಳ ಒಳಗೆ ವಾಹನಗಳ ದಾಖಲಾತಿಗಳನ್ನು ನೀಡಿ ದಂಡ ಪಾವತಿಸಿ ವಾಹನಗಳನ್ನು ಹರಾಜು ಪ್ರಕ್ರಿಯೆಯಿಂದ ಬಿಡಿಸಿಕೊಳ್ಳಬಹುದು ಇಲ್ಲವಾದಲ್ಲಿ ಹರಾಜು ದಿನದಂದು ಖುದ್ದಾಗಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಾದೇಶಿಕ […]
ಜೂನ್ 15 ರವರೆಗೆ ಕಾಫಿಯಾ ಹೋಟೆಲ್ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಸಿಟಿ ಬಸ್ಸ್ಟ್ಯಾಂಡ್ ನಿಂದ ಕಾಫಿಯಾ ಹೋಟೆಲ್ ವರೆಗೆ ಒಳಚರಂಡಿ ಜಾಲದ ಪೈಪ್ ಬದಲಾವಣೆ ಮಾಡಿ ಕಾಂಕ್ರೀಟ್ ಛೇಂಬರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಸದರಿ ರಸ್ತೆಯಲ್ಲಿ ಜೂನ್ 15 ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬದಲಿ ವ್ಯವಸ್ಥೆಯಾಗಿ, ಸರ್ವಿಸ್ ಬಸ್ಸ್ಟ್ಯಾಂಡ್ ಎದುರಿನಿಂದ ಕೆ.ಎಸ್.ಆರ್.ಟಿ.ಸಿಬಸ್ಸ್ಟ್ಯಾಂಡ್ ಮಾರ್ಗವಾಗಿ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರಸಭೆಯ ಪೌರಾಯಕ್ತರ ಪ್ರಕಟಣೆ ತಿಳಿಸಿದೆ.
ಪೋಲ್ಯಾಂಡ್-ಹಂಗೇರಿ ದೇಶಗಳಲ್ಲಿ ಭಾರೀ ಟ್ರಕ್ ಚಾಲಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಉಡುಪಿ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್‌ನ ಪೋಲ್ಯಾಂಡ್ ಮತ್ತು ಹಂಗೇರಿ ದೇಶಗಳಲ್ಲಿ ಭಾರೀ ಟ್ರಕ್ ಮತ್ತು ಟ್ರೇಲರ್ ಪುರುಷ ಮತ್ತು ಮಹಿಳಾ ಚಾಲಕರ ಹುದ್ದೆಗಳಿಗೆ ಬೇಡಿಕೆ ಬಂದಿದ್ದು, ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಕರ್ನಾಟಕದಿಂದ ನೇರ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 11 ರೊಳಗಾಗಿ ನೊಂದಣಿ ಮಾಡಿಕೊಳ್ಳಬಹುದು. 2009ರ ಸೆಪ್ಟಂಬರ್ 9 ಕ್ಕಿಂತ ಮೊದಲು ಕೊಡಲಾದ ಭಾರಿ ಟ್ರಕ್ ಟ್ರೇಲರ್ ಚಾಲಕ ಪರವಾನಿಗೆ ಹೊಂದಿರಬೇಕು ಮತ್ತು ಇಂಗ್ಲೀಷ್ ಭಾಷಾಜ್ಞಾನ ಕಡ್ಡಾಯವಾಗಿದೆ. ಹೆಚ್ಚಿನ […]
ವಿದೇಶದಿಂದ ಫಂಡಿಂಗ್ ಆಗಿದ್ರೆ ತನಿಖೆ ಮಾಡಲಿ, ಬಾಲಿಷ ಹೇಳಿಕೆ ಸಲ್ಲದು: ನಗರದಲ್ಲಿ ಮಂಜುನಾಥ್ ಭಂಡಾರಿ ಕಿಡಿ
ವಿದೇಶಿ ಫಂಡಿಂಗ್ ನಿಂದ ದೇಶ ಅಸ್ಥಿರಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಬಂಡಾರಿ ಉಡುಪಿಯಲ್ಲಿಂದು ತಿರುಗೇಟು ನೀಡಿದ್ರು. ದೇಶದ ಪ್ರಜೆಯಾಗಿ ಈ ಹೇಳಿಕೆಯಿಂದ ನನಗೆ ಆಘಾತವಾಗಿದೆ. ಕೇಂದ್ರದ ಎಲ್ಲಾ ತನಿಖಾ ಸಂಸ್ಥೆಗಳು ನಿಮ್ಮ ಕೈಯಲ್ಲಿ, ಸರಕಾರ ಅಧಿಕಾರ ನಿಮ್ಮ ಕೈಯಲ್ಲಿದೆ. ದೇಶವನ್ನು ಅಸ್ತಿರಗೊಳಿಸುವ ವ್ಯಕ್ತಿಗಳು ಯಾರೇ ಇರಬಹುದು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು ಎಂದು ಸವಾಲೆಸೆದ್ರು. ಕುಸ್ತಿಪಟುಗಳ ಹೋರಾಟಕ್ಕೆ ವಿದೇಶಿ ಫಂಡಿಂಗ್ ಆಗಿದೆಂಬ ಹೇಳಿಕೆಗೆ ಉತ್ತರಿಸಿದ ಅವರು, ನಿಮ್ಮ […]