ಕೊಲ್ಲೂರು-ಹೆಬ್ರಿ ಮಾರ್ಗದಲ್ಲಿಲ್ಲ ಸರಕಾರಿ ಬಸ್ಸು; ವಿದ್ಯಾರ್ಥಿಗಳು-ಗ್ರಾಮಸ್ಥರ ಗೋಳು ಕೇಳುವವರಿಲ್ಲ

ಕೊಲ್ಲೂರು: ಧಾರ್ಮಿಕ ಮಹತ್ವವಿರುವ ಕೊಲ್ಲೂರಿನಿಂದ ಮುಖ್ಯ ಪೇಟೆ ಹೆಬ್ರಿ ತನಕ ಸರಕಾರಿ ಬಸ್ಸುಗಳು ಓಡಾಟ ನಿಲ್ಲಿಸಿದ್ದು, ಇದರಿಂದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತಿದೆ.ಈ ವರ್ಷದ ಜನವರಿ ಇಂದ ಮೇ ಮಧ್ಯಭಾಗದಲ್ಲಿ ಈ ಮಾರ್ಗದಲ್ಲಿ ಸರಕಾರಿ ಬಸ್ಸುಗಳ ಓಡಾಟವನ್ನು ನಿಲ್ಲಿಸಲಾಗಿದೆ. ಕೊಲ್ಲೂರಿನಿಂದ ಹೆಬ್ರಿಗೆ ಬೆಳಿಗ್ಗೆ 7.30 ಕ್ಕೆ ಬಿಟ್ಟರೆ ಮತ್ತೆ ಮಧ್ಯಾಹ್ನ 2.00 ಗಂಟೆ ತನಕ ಯಾವುದೇ ಬಸ್ಸು ಇರುವುದಿಲ್ಲ. ಇಲ್ಲಿ ಪ್ರತಿ ನಿತ್ಯ ಹಲವಾರು ವಿದ್ಯಾರ್ಥಿಗಳು ಶಂಕರನಾರಾಯಣ ಸರಕಾರಿ ಕಾಲೇಜಿಗೆ ತೆರಳುತ್ತಾರೆ. ಈ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. […]

ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತನೇ ಪ್ರತಿಷ್ಠಾ ಮಹೋತ್ಸವದ ಸಂಭ್ರಮ: 38 ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ದಿವ್ಯವಾದ ಸನ್ನಿಧಾನದಿಂದ ಯಶಸ್ವಿಯಾಗಬಹುದು. ಸಾಧನೆ ಮಾಡುತ್ತಾ ಎತ್ತರಕ್ಕೆ ಏರಬಹುದು. ಇತರ ಪ್ರಾಣಿಗಳಿಗೆ ಬುದ್ದಿಶಕ್ತಿ ಸೀಮಿತವಾಗಿದ್ದರೆ, ಭಗವಂತನು ಮನುಷ್ಯನಿಗೆ ಕೊಟ್ಟ ಅಸಾಧಾರಣ ಶಕ್ತಿಯೆಂದರೆ ಕ್ರೀಯಾಶೀಲವಾಗಿರುವ ಕೈಬೆರಳುಗಳು ಮತ್ತು ಅಪೂರ್ವವಾಗಿರುವ ಬುದ್ದಿ ಶಕ್ತಿ. ವಿದ್ಯೆಯ ಜೊತೆಗೆ ಬುದ್ದಿ ಇದ್ದರೆ ಪ್ರಪಂಚಕ್ಕೆ ಪೂರಕವಾಗುತ್ತದೆ. ಬೌದ್ಧಿಕ ಶಕ್ತಿಯನ್ನು, ಮನಶಕ್ತಿಯನ್ನು ಸತ್ಕರ್ಮದಿಂದ ಸದ್ವಿನಿಯೋಗ ಮಾಡಿದಾಗ ಶ್ರೇಷ್ಠವಾಗಿರುವುದನ್ನು ಪ್ರಪಂಚಕ್ಕೆ ನೀಡಬಹುದು ಎಂದು ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮಿಜಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ […]