ದಿವಂಗತ ನಿತ್ಯಾನಂದ ಕೆಮ್ಮಣ್ಣು ಇವರ ದ್ವಿತೀಯ ವರ್ಷದ ಪುಣ್ಯಸ್ಮರಣೆ
ಕೆಮ್ಮಣ್ಣು: ದಿವಂಗತ ನಿತ್ಯಾನಂದ ಕೆಮ್ಮಣ್ಣು ಇವರ ದ್ವಿತೀಯ ವರ್ಷದ ಪುಣ್ಯಸ್ಮರಣೆಯನ್ನು ಕೆಮ್ಮಣ್ಣು ಸಂತ ತೆರೇಸಾ ಚರ್ಚಿನ ಹಾಲಿನಲ್ಲಿ ನಿತ್ಯಾನಂದ ಕೆಮ್ಮಣ್ಣು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕೆಮ್ಮಣ್ಣು ಪರಿಸರದಲ್ಲಿರುವ ನಾಲ್ಕು ವಿದ್ಯಾ ಸಂಸ್ಥೆಗಳ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರ ಮೂಲಕ ಪುಣ್ಯ ಸ್ಮರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ಗ್ಲೋವಿಂಗ್ ಸ್ಟಾರ್ ಸಂಸ್ಥೆಗಳ ಮುಖ್ಯಸ್ಥ ಟಿ ಜೆ ಕ್ವಾಡ್ರಸ್, ಕೆಮ್ಮಣ್ಣು ಚರ್ಚಿನ ಧರ್ಮ ಗುರುಗಳಾದ ಫಾದರ್ ವಿಕ್ಟರ್ […]
ಉಡುಪಿ: ನೂತನ ಶಾಸಕ ಯಶ್ ಪಾಲ್ ಸುವರ್ಣ ಅಭಿನಂದನಾ ಸಮಾರಂಭ
ಉಡುಪಿ: ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಯಶ್ಪಾಲ್ ಎ. ಸುವರ್ಣರವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಬಿಜೆಪಿ ಜಿಲ್ಲಾಧ್ಯಕ್ಷಕುಯಿಲಾಡಿ ಸುರೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ, ಉಡುಪಿ […]
ಸೂಪರ್ ಕಂಪ್ಯೂಟರ್ ಕ್ಷೇತ್ರದಲ್ಲಿ ಭಾರತದ ಸಾಧನೆ: ಎಐ ಸೂಪರ್ ಕಂಪ್ಯೂಟರ್ “ಐರಾವತ್” ಲೋಕಾರ್ಪಣೆಗೆ ದಿನಗಣನೆ
ನವದೆಹಲಿ: ಟೆಕ್ ಜಗತ್ತಿನಲ್ಲಿ ಭಾರತ ಶೀಘ್ರದಲ್ಲೇ ಮತ್ತೊಂದು ಗಮನಾರ್ಹ ಸಾಧನೆಯನ್ನು ಮಾಡಲಿದೆ. ಭಾರತವು 900 ಕೋಟಿ ರೂಪಾಯಿ ಮೌಲ್ಯದ ತನ್ನ ವೇಗದ ಸೂಪರ್ ಕಂಪ್ಯೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಸೂಪರ್ ಕಂಪ್ಯೂಟರ್ ಕಾರ್ಯನಿರ್ವಹಿಸಲು ಪ್ರಾರಂಭಿಸಬಹುದು. ಈ ಅದ್ಭುತ ಬೆಳವಣಿಗೆಯ ಕುರಿತು ಮಾಹಿತಿ ನೀಡಿದ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು, ಸಂಭವನೀಯ ಮುನ್ಸೂಚನೆಯ ಅತ್ಯುನ್ನತ ವಿಶ್ಲೇಶಣೆಯೊಂದಿಗೆ ಬರುವ ಹವಾಮಾನ ಮೇಲ್ವಿಚಾರಣಾ ಕಾರ್ಯವಿಧಾನದ ಬಗ್ಗೆಯೂ ಮಾಹಿತಿ ನೀಡಿದರು. ಮತ್ತೊಂದು ಗಮನಾರ್ಹ ಸಾಧನೆಯೆಂದರೆ […]
24 ಶಾಸಕರಿಗೆ ಸಚಿವಗಿರಿ: ಶನಿವಾರದಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಇನ್ನೂ 24 ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಪಕ್ಷದ ಕೇಂದ್ರ ನಾಯಕರ ನಡುವೆ ನಡೆದ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ 20 ರಂದು ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆ ಇನ್ನೂ ಎಂಟು ಮಂದಿ ಪ್ರಮಾಣ […]
ಹೊಸ ಸಂಸತ್ ಕಟ್ಟಡದ ನೆನಪಿಗಾಗಿ 75 ರೂಪಾಯಿ ನಾಣ್ಯ ಬಿಡುಗಡೆ
ನವದೆಹಲಿ: ಭಾರತದ ಹೊಸ ಸಂಸತ್ ಕಟ್ಟಡದ ಲೋಕಾರ್ಪಣೆ ಸಂದರ್ಭದ ನೆನಪಿಗಾಗಿ ಮೋದಿ ಸರ್ಕಾರವು ರೂ 75 ನಾಣ್ಯವನ್ನು ಬಿಡುಗಡೆ ಮಾಡಲಿದೆ. 35 ಗ್ರಾಂ ತೂಗುವ ನಾಣ್ಯವು 44 ಎಂಎಂ ವ್ಯಾಸ ಹೊಂದಿದ್ದು ವೃತ್ತಾಕಾರದಲ್ಲಿರುತ್ತದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನ ಮತ್ತು ಅದರ ಕೆಳಗೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ‘ಭಾರತ್’ ಎಂದು ದೇವನಗಿರಿ ಲಿಪಿಯಲ್ಲಿ ಬರೆಯಲಾಗಿದ್ದರೆ, ಬಲಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ರೂಪಾಯಿಯ […]