ಪುಣ್ಯಕ್ಷೇತ್ರ ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಬುಕಿಂಗ್ ಆರಂಭ

ಹಿಂದುಗಳ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಕೇದಾರನಾಥ ಧಾಮ ಒಂದಾಗಿದ್ದು, ಉತ್ತರ ಖಂಡದ ಗುಡ್ಡಗಾಡು ಪ್ರದೇಶದಲ್ಲಿ 12,000 ಅಡಿ ಎತ್ತರದಲ್ಲಿದೆ. ಕೇದಾರನಾಥಯಾತ್ರೆಗೆ ಐ ಆರ್ ಸಿಟಿಸಿ ಮೂಲಕ ಹೆಲಿಕಾಪ್ಟರ್ ರೈಡ್ ಗೆ ಬುಕಿಂಗ್ ಆರಂಭಗೊಂಡಿದ್ದು, ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಬುಕಿಂಗ್ ಆರಂಭಗೊಂಡಿದೆ. ಮೇ 28 ರಿಂದ ಜೂನ್ 15ರ ನಡುವಿನ ಹೆಲಿಕಾಪ್ಟರ್ ರೈಡನ್ನು ಬುಕ್ ಮಾಡಿಕೊಳ್ಳಬಹುದು. ಬುಕಿಂಗ್ ಗಾಗಿ ವೆಬ್ಸೈಟ್ನಲ್ಲಿ ಲಾಗಿನ್ ಐಡಿ ಅನ್ನು ರಚಿಸಿ, ಲಾಗಿನ್ ಮಾಡಿದ ನಂತರ ಬಳಕೆದಾರರು ಹೆಲಿ ಆಪರೇಟರ್ ಕಂಪನಿಯನ್ನು ಆಯ್ಕೆ ಮಾಡುವ […]

ನೆರೆ ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಉಚಿತ ಸಹಾಯವಾಣಿಯನ್ನು ಸಂಪರ್ಕಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ : ಮಳೆಯಿಂದ ಉಂಟಾಗುವ ನೆರೆ ಸೇರಿದಂತೆ ಪ್ರಕೃತಿ ವಿಕೋಪಗಳಲ್ಲಿ ಮಾನವ ಹಾನಿ ಹಾಗೂ ಹೆಚ್ಚಿನ ಆಸ್ತಿ ಹಾನಿ ಉಂಟಾಗದಂತೆ ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ವಿಕೋಪಗಳಿಂದ ತೊಂದರೆಗೊಳಗಾದವರು ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಉಚಿತ ಸಹಾಯವಾಣಿ ಸಂಖ್ಯೆ 1077 ಅಥವಾ 0820-2574802, ಜಿಲ್ಲಾ ತುರ್ತು ಕಾರ್ಯಾಚರಣಾ ಕೇಂದ್ರಗಳನ್ನು 25 ಮೆಸ್ಕಾಂ ಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸಹಾಯವಾಣಿ ಸಂಖ್ಯೆ 1912 […]

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕಸಭೆ

ಕುಲಶೇಖರ: ಮಣ್ಣಿನ ಮೂಲಕ ಕಲಶ ನಿರ್ಮಾಣ ಮಾಡುವ ಪ್ರಬುದ್ದ ಸಮುದಾಯ ಕುಲಾಲರದ್ದು. ಇದೊಂದು ಆದರ್ಶ ಸಮುದಾಯ. ಸಂಘಟನೆ ಅನ್ನುವುದು ಹಿಂದೂ ಸಮಾಜದ ಒಗ್ಗಟ್ಟಿನ ವೈಜ್ಞಾನಿಕ ವಿಧಾನ. ಹಿಂದೂ ಸಮಾಜದ ಒಗ್ಗಟ್ಟಿಗೆ ಜಾತಿ ಸಮುದಾಯದ ಸಂಘಟನೆ ಅಡಿಪಾಯ ಆಗಿದೆ. ದೇವರ ತಳಹದಿಯಲ್ಲಿ ಒಗ್ಗಟ್ಟಾಗಿ ಯಾವುದೇ ಕಾರ್ಯದಲ್ಲಿ ಮುಂದುವರಿದರೆ ಯಶಸ್ಸು ದೊರೆಯುತ್ತದೆ. ಕುಲದೇವರ ದೇಗುಲ ನಿರ್ಮಾಣಕ್ಕೆ ದಾನಿಗಳಿಂದ ದೊರೆತ ಸಹಕಾರವೇ ಸಾಕ್ಷಿಯಾಗಿದೆ, ಕುಲದೇವರು ಮತ್ತು ಕುಲಗುರುಗಳ ಆಶೀರ್ವಾದ ಸಮುದಾಯದ ಎಲ್ಲರ ಮೇಲೆ ಇರಲಿ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ […]

ಜೂನ್ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆ ನಿಷೇಧ

ಮಂಗಳೂರು/ಉಡುಪಿ: ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು ಅಥವಾ ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31ರ ವರೆಗೆ (ಉಭಯ ದಿನಗಳು ಸೇರಿ) ಒಟ್ಟು 61 ದಿನ ನಿಷೇಧಿಸಲಾಗಿದೆ. ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟಾರೀಕೃತ ಎಂಜಿನ್ ಹಾಗೂ ಸಾಂಪ್ರದಾಯಿಕ ಮತ್ತು ನಾಡದೋಣಿಗಳಲ್ಲಿ ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ […]

ಟ್ರಕ್‌ನಲ್ಲಿ ಪ್ರಯಾಣಿಸಿ ಚಾಲಕರ ಕಷ್ಟ ಆಲಿಸಿದ ರಾಹುಲ್ ಗಾಂಧಿ

ನವದೆಹಲಿ: ದೆಹಲಿಯಿಂದ ಚಂಡೀಗಢವರಗೆ ಟ್ರಕ್ ನಲ್ಲಿ ಪ್ರಯಾಣಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚಾಲಕರೊಂದಿಗೆ ಮಾತನಾಡಿ ಅವರ ಸಂಕಷ್ಟಗಳನ್ನು ಅರಿತುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ರಕ್ ಡ್ರೈವರ್ ಗಳೊಂದಿಗೆ ತೆರಳಿ ಅವರ ಕಷ್ಟಗಳನ್ನು ಆಲಿಸಿದರು. ರಾಹುಲ್ ಗಾಂಧಿ ಅವರ ಜತೆ ದೆಹಲಿಯಿಂದ ಚಂಡೀಗಢವರೆಗೂ ಪ್ರಯಾಣಿಸಿದರು. ರಾಹುಲ್ ಗಾಂಧಿ ಟ್ರಕ್ನಲ್ಲಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿವೆ.