ಹಿಂದಿನ ಸರ್ಕಾರದ ಮಂಡಳಿ-ನಿಗಮಗಳ ಕಾಮಗಾರಿ ಆದೇಶಗಳಿಗೆ ಹಣ ಬಿಡುಗಡೆ ಸ್ಥಗಿತ: ಸರ್ಕಾರದ ಆದೇಶ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಮಂಡಳಿಗಳು ಮತ್ತು ನಿಗಮಗಳು ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಿಂದಿನ ಸರ್ಕಾರ ನೀಡಿದ್ದ ಯಾವುದೇ ಆದೇಶಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಲು ಸೋಮವಾರ ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಇನ್ನೂ ಆರಂಭವಾಗದೇ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಶನಿವಾರ (ಮೇ 20) ಅಧಿಕಾರ ಸ್ವೀಕರಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ […]

ಅಧಿಕಾರ ಹಂಚಿಕೆ ಸೂತ್ರವಿಲ್ಲ; ಮುಂದಿನ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಂ.ಬಿ.ಪಾಟೀಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಸೂತ್ರವಿಲ್ಲ ಎಂದು ಶನಿವಾರ ಕರ್ನಾಟಕ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಹೇಳಿದ್ದಾರೆ. ತಮ್ಮ ನಡುವೆ ಅಧಿಕಾರ ಹಂಚಿಕೆ ಸೂತ್ರವಿದ್ದರೆ ಹೈಕಮಾಂಡ್ ಘೋಷಣೆ ಮಾಡುತ್ತಿತ್ತು ಎಂದ ಪಾಟೀಲ್, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಎಂದರು. ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸಲು ಚರ್ಚೆಗಳು ಮತ್ತು ಸಭೆಗಳು ಮುಂದುವರೆದಂತೆ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು […]

2,000 ರೂ ನೋಟು ಹಿಂತೆಗೆತ: ಚಿನ್ನ ಖರೀದಿಯತ್ತ ಜನರ ಒಲವು; ಚಿನ್ನದ ಬೆಲೆಯಲ್ಲಿ ಜಿಗಿತ

ಮುಂಬೈ: 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕೇಂದ್ರೀಯ ಬ್ಯಾಂಕ್‌ನ ಕ್ರಮದ ನಂತರ ಜನರು ಚಿನ್ನ ಖರೀದಿಯತ್ತ ಮನಸ್ಸು ಮಾಡಿರುವುದರಿಂದ ಆಭರಣ ಮಾರಾಟದಲ್ಲಿ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ. ಆದರೆ 2016 ರಲ್ಲಿ 500 ರೂ ಮತ್ತು 1,000 ರೂ ನ ನೋಟುಗಳನ್ನು ರದ್ದುಗೊಳಿಸಿದಾಗ ಇದಕ್ಕೂ ಹೆಚ್ಚಿನ ಆಭರಣ ಖರೀದಿಯಾಗಿತ್ತು ಎಂದು ಆಭರಣ ವ್ಯಾಪಾರಿಗಳು ಹೇಳುತ್ತಾರೆ. 2,000 ರೂ ಮುಖಬೆಲೆಯ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಶುಕ್ರವಾರದ ಪ್ರಕಟಣೆಯ ಬಳಿಕ ಜನರು ಚಿನ್ನ […]

ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯುಟಿ ಖಾದರ್ ಆಯ್ಕೆ: ನಾಳೆ ಚುನಾವಣೆ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯುಟಿ ಖಾದರ್ ಅವರನ್ನು ಅಂತಿಮಗೊಳಿಸಲಾಗಿದೆ. ಪ್ರಸ್ತುತ ಆರ್.ವಿ.ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಗದಗ ಶಾಸಕ ಎಚ್‌ಕೆ ಪಾಟೀಲ್, ಶಿರಾ ಶಾಸಕ ಟಿಬಿ ಜಯಚಂದ್ರ, ಮಧುಗಿರಿ ಶಾಸಕ ಕೆಎನ್ ರಾಜಣ್ಣ, ಮುದ್ದೇಬಿಹಾಳ ಶಾಸಕ ಸಿಎಸ್ ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಹಿರಿಯ ಶಾಸಕರ ಹೆಸರನ್ನು ಪರಿಗಣಿಸಲಾಗಿತ್ತು. ಮೂಲಗಳ ಪ್ರಕಾರ, ಸೋಮವಾರ ರಾತ್ರಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಖಾದರ್ ಅವರಿಗೆ ದೂರವಾಣಿ […]

ವಿದ್ಯಾ ಟ್ಯುಟೋರಿಯಲ್ ಕಾಲೇಜಿನ 2PUC ಖಾಸಗಿ ವಿಭಾಗದಲ್ಲಿ ಸಾಧಕ ವಿದ್ಯಾರ್ಥಿಗಳು

2PUC ಖಾಸಗಿ ವಿಭಾಗದಲ್ಲಿ ರಾಜ್ಯ ದಾಖಲೆ ಮಾಡಿದ ನಮ್ಮ ವಿದ್ಯಾರ್ಥಿಗಳು ಅಫಿಯಾ – (570/600) ವಫ (530/600) ಪೃಥ್ವಿ (529/600) ನಮ್ಮ ವಿದ್ಯಾರ್ಥಿನಿಯಾದ ಅಫಿಯಾರವರು 2PUC ಖಾಸಗಿ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಜೆಬಾ (543/600) ನಿವೇದಿತಾ (534/600) 1 PUC ಫೇಲಾದವರು ಅಥವಾ S.S.L.C ಪಾಸಾದವರು ನೇರವಾಗಿ 2PUC ಮಾಡಬಹುದು. 7,8,9ನೇ ತರಗತಿಯಲ್ಲಿ ಫೇಲಾದವರು ನೇರವಾಗಿ S.S.L.C ಮಾಡಬಹುದು. ಟ್ಯೂಷನ್ ಗಳು 1&2 PUC- ಅಕೌಂಟೆನ್ಸಿ, ಸ್ಟಾಟ್, ಇತ್ಯಾದಿ 8ನೇ, 9ನೇ ಮತ್ತು 10ನೇ […]