ಗ್ರಾಹಕರನ್ನು ಸೆಳೆಯುತ್ತಿವೆ ಜನನಿ ಸಂಭ್ರಮೋತ್ಸವ ವರುಷದ ಆಚರಣೆ ಭಾರೀ ಕೊಡುಗೆಗಳು!!

ಬ್ರಹ್ಮಾವರ: ಗ್ರಾಹಕರೊಂದಿಗೆ ತಮ್ಮ ಬಾಂಧವ್ಯದ ನೆನಪಿಗಾಗಿ ಜನನಿ ಸಂಭ್ರಮೋತ್ಸವ ವರುಷದ ಆಚರಣೆಯನ್ನು ಹಮ್ಮಿಕೊಂಡಿದ್ದು ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವರ್ಷದ ಹರ್ಷಕ್ಕಾಗಿ ಪ್ರತಿ ಖರೀದಿಯೊಂದಿಗೆ ಉಚಿತ ಸಾಗಾಟ, ಖಚಿತ ಉಡುಗೊರೆ, ವಿಶೇಷ ವಿನಿಮಯ ಕೊಡುಗೆ, ಆಕರ್ಷಕ ರಿಯಾಯಿತಿ, ಸುಲಭ ಕಂತುಗಳ ಯೋಜನೆ, ಕ್ಯಾಶ್ ಬ್ಯಾಕ್, ಖಚಿತ ಲಕ್ಕಿ ಡ್ರಾ ಸೌಲಭ್ಯಗಳು ದೊರೆಯುತ್ತಿವೆ. ಪ್ರಸಿದ್ಧ ಕಂಪನಿಗಳ ಇಲೆಕ್ಟ್ರಾನಿಕ್ ವಸ್ತುಗಳು, ವಿವಿಧ ವಿನ್ಯಾಸದ ಫರ್ನಿಚರ್ ಉಪಕರಣಗಳು, ವಿಶಾಲ ಶ್ರೇಣಿಯ ಹೋಂ ಅಪ್ಲೈಯನ್ಸಸ್, ಕಿಚನ್ ಅಪ್ಲೈಯನ್ಸಸ್ ವಸ್ತುಗಳು, ಉತ್ಕೃಷ್ಠ ಗುಣಮಟ್ಟದ […]

ಕಾಂಗ್ರೆಸ್ ಗ್ಯಾರಂಟಿಗೆ ಷರತ್ತುಗಳು ಅನ್ವಯ: ಕೊಟ್ಟ ಭರವಸೆ ಈಡೇರಿಸಿ ಎಂದ ವಿರೋಧ ಪಕ್ಷದ ನಾಯಕರು

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳಿಗೆ ಷರತ್ತುಗಳು ಅನ್ವಯವಾಗಿದ್ದು, ಈ ಬಗ್ಗೆ ವಿರೋಧ ಪಕ್ಷ, ಬಿಜೆಪಿಯ ನಾಯಕರು ಸರಕಾರದ ವಿರುದ್ದ ಮುಗಿಬಿದ್ದಿದ್ದಾರೆ. ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ವಿದ್ಯುತ್ ಬಿಲ್ ಬಂದ್ರೆ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ದಿನಕ್ಕೆ ಕಾಂಗ್ರೆಸ್‌ನವರು ಬಣ್ಣ ಬದಲಾಯಿಸಿದ್ದಾರೆ. ಇನ್ನು ದಿನ ಕಳೆದಂತೆ ಇನ್ಯಾವ ಬಣ್ಣ ಬದಲಾಯಿಸ್ತಾರೋ ನೋಡಬೇಕು. ಮೊದಲು ಎಲ್ಲ ಪದವೀಧರ ನಿರುದ್ಯೋಗಿಗಳಿಗೂ […]

ಆರ್ಚರಿ ವಿಶ್ವಕಪ್: ನಂಬರ್ 1 ಆಟಗಾರನನ್ನು ಮಣಿಸಿ ಮೊದಲ ವೈಯಕ್ತಿಕ ಚಿನ್ನ ಗೆದ್ದ ಭಾರತೀಯ ಪ್ರಥಮೇಶ್ ಸಮಾಧಾನ್ ಜಾವ್ಕರ್

ಚೀನಾದ ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನ 2ನೇ ಹಂತದ ಪಂದ್ಯದಲ್ಲಿ ಭಾರತದ ಪ್ರಥಮೇಶ್ ಸಮಾಧಾನ್ ಜಾವ್ಕರ್ ಅವರು ಶನಿವಾರದಂದು ವಿಶ್ವದ ನಂಬರ್ 1 ಆಟಗಾರ ಮೈಕ್ ಸ್ಕ್ಲೋಸರ್ ಅವರನ್ನು ಸೋಲಿಸಿ ಪುರುಷರ ವೈಯಕ್ತಿಕ ಕಾಂಪೌಂಡ್ ಚಿನ್ನದ ಪದಕವನ್ನು ಗೆದ್ದುಕೊಂಡರು. 19 ವರ್ಷದ ಜಾವ್ಕರ್ ನಿಕಟ ಪೈಪೋಟಿಯ ಫೈನಲ್‌ನಲ್ಲಿ ಡಚ್ ಬಿಲ್ಲುಗಾರನನ್ನು 149-148 ಅಂಕಗಳಿಂದ ಸೋಲಿಸಿದರು. THE CLOSEST MATCH 😲🔥Prathamesh Jawkar 🇮🇳 wins his firts-ever individual gold in the circuit in Shanghai.#ArcheryWorldCup […]

ಪ್ರಪ್ರಥಮ ಜಿ-20 ಸಭೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಭೂಲೋಕದ ಸ್ವರ್ಗ ಜಮ್ಮು ಮತ್ತು ಕಾಶ್ಮೀರ

ಶ್ರೀನಗರ: ಬಿಗಿ ಭದ್ರತೆಯ ನಡುವೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇಂದಿನಿಂದ ಜಿ-20 ದೇಶಗಳ ಮೂರನೇ ಪ್ರವಾಸೋದ್ಯಮ ಕಾರ್ಯ ಗುಂಪು ಸಭೆಯನ್ನು ಆಯೋಜಿಸಲಿದೆ. ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 2019 ರಲ್ಲಿ ರಾಜ್ಯತ್ವವನ್ನು ತೆಗೆದುಹಾಕಿದ ನಂತರ ಈ ಪ್ರದೇಶದಲ್ಲಿ ನಡೆಯುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. ಶ್ರೀನಗರ ನಗರದ ಕೆಲವು ಭಾಗಗಳು ಮತ್ತು ಜಿ- 20 ನಡೆಯಲಿರುವ ಶೇರ್-ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ಗೆ ಹೋಗುವ ರಸ್ತೆಗಳನ್ನು ಅತ್ಯಾಧಿನಿಕವಾಗಿ […]

ಬೆಂಗಳೂರು: ಭಾರೀ ಮಳೆಗೆ ಕುಸಿದ ಕಟ್ಟಡ; ಪ್ರಾಣಾಪಾಯವಿಲ್ಲ

ಕರ್ನಾಟಕ: ಭಾರೀ ಮಳೆಗೆ ಬೆಂಗಳೂರಿನ ವಿದ್ಯಾರಾಯನಪುರದಲ್ಲಿ ಹಳೆ ಕಟ್ಟಡ ಒಂದು ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಭಾನುವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವೆಡೆ ನೀರು ತುಂಬಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಹಲವೆಡೆ ಮರಗಳು ಉರುಳಿದ್ದು, ಕೆ.ಆರ್ ಸರ್ಕಲ್ ಪ್ರದೇಶದಲ್ಲಿ ನೀರು ತುಂಬಿ ಜನರು ಅಂಡರ್ ಪಾಸ್ ಬಳಿ ಪರದಾಡುವಂತಾಗಿದ್ದು, ಬಳಿಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ಬಾರಿ ಮುಂಗಾರು ಮಳೆಯು ಜೂನ್ 4 ರಂದು ಕೇರಳ ಪ್ರವೇಶಲಿದೆ ಎಂದು ಭಾರತೀಯ […]