ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ
ಬೆಂಗಳೂರು: ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಿ ಪರಮೇಶ್ವರ, ಕೆ ಎಚ್ ಮುನಿಯಪ್ಪ, ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಜಮೀರ್ ಅಹಮದ್ ಖಾನ್ ಸೇರಿದಂತೆ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, […]
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತೋತ್ಸವ
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಸಂತ ಮಾಸದ ಕೊನೆಯ ದಿನ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಲಾಲ್ಕಿ ಉತ್ಸವ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಪ್ರತಿ ವರುಷದಂತೆ ಸ್ವಯಂಸೇವಕರು ಮತ್ತು ಜಿ.ಎಸ್.ಬಿ ಯುವಕ ಮಂಡಳಿಯ ವತಿಯಿಂದ ವಸಂತೋತ್ಸವವು ಸಂಭ್ರಮದಿಂದ ಜರುಗಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು. ದೇವಳದ ಆಡಳಿತ ಮೊಕೇಸರ ಪಿ ವಿ ಶೆಣೈ, ವಿಶ್ವನಾಥ ಭಟ್ , […]
ಸತತ 5 ನೇ ಬಾರಿ ಶೇ 100 ಫಲಿತಾಂಶ: ಮರುಮೌಲ್ಯಮಾಪನದಲ್ಲಿ ಶ್ರೀವೆಂಕಟರಮಣ ಕಾಲೇಜಿಗೆ ಒಟ್ಟು 13 ರ‍್ಯಾಂಕ್
ಕುಂದಾಪುರ: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ ಫತಾಂಶ ಬಂದಿದ್ದು, ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಸತತ 5 ನೇ ಬಾರಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಮರುಮೌಲ್ಯಮಾಪನದಲ್ಲಿ ವಿಜ್ಞಾನ ವಿಭಾಗದ ಪ್ರಣಮ್ಯ 590 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್, ಇಂಚರ 589 ಅಂಕ ಪಡೆಯುವ ಮೂಲಕ 8ನೇ ರ‍್ಯಾಂಕ್, ಸಂಜನಾ ಶೆಟ್ಟಿ 587 ಅಂಕಗಳನ್ನು ಪಡೆದು 10 ನೇ ರ‍್ಯಾಂಕ್ ಪಡೆದಿರುತ್ತಾಳೆ. ರಾಜ್ಯಮಟ್ಟದಲ್ಲಿ ಒಟ್ಟು 13 ರ‍್ಯಾಂಕುಗಳನ್ನು […]
ಬನ್ನಂಜೆ ಶನಿಕ್ಷೇತ್ರದಲ್ಲಿ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ
ಉಡುಪಿ: ಬನ್ನಂಜೆ ಗರಡಿ ರಸ್ತೆಯಲ್ಲಿರುವ 23 ಅಡಿ ಎತ್ತರದ ಕರ್ನಾಟಕದ ಅತೀ ದೊಡ್ಡ ಶನಿ ದೇವರ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ ಶುಕ್ರವಾರದಂದು ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವವು ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಮಾರ್ಗದರ್ಶನದಲ್ಲಿ ನಡೆಯಿತು. ಬೆಳ್ಳಿಗೆ 7.30 ಕ್ಕೆ ಸಾಮೂಹಿಕ ಪ್ರಾರ್ಥನೆ, ರಾಮ ವಿಠ್ಠಲ್ ಹಾಗೂ ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಸಗ್ರಹ ಮಖ, ಶನಿಶಾಂತಿ, ಪುರಸ್ಪರ ಜಯ ಸೂಕ್ತ ಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಕೊರಂಗ್ರಪಾಡಿ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ […]
ಮೇ. 21 ರಂದು ಕೋಡಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ
ಉಡುಪಿ: ಜಿ20 ಮೆಗಾ ಬೀಚ್ ಕ್ಲೀನ್ ಅಭಿಯಾನದಡಿ ಜಿಲ್ಲೆಯ ಕುಂದಾಪುರ ಕೋಡಿ ಬೀಚ್‌ನಲ್ಲಿ ಸ್ವಚ್ಛ ಬೀಚ್‌ಗಳು ಮತ್ತು ಮಾಲಿನ್ಯ ಮುಕ್ತ ಸಾಗರಗಳ ಪ್ರಾಮುಖ್ಯತೆ ಬಗ್ಗೆ ಸ್ಥಳೀಯ ಸಮುದಾಯಗಳನ್ನು ಸಂವೇದನಾಶೀಲಗೊಳಿಸಲು ಮೇ 21 ರಂದು ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸಾಮೂಹಿಕ ಬೀಚ್ ಸ್ವಚ್ಛತಾ ಅಭಿಯಾನ ಆಯೋಜಿಸಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರು (ಪರಿಸರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.