ಸಿಇಟಿ ಪರೀಕ್ಷೆ ಆರಂಭ; ಜಿಲ್ಲೆಯಲ್ಲಿ ಸಕಲ ಸಿದ್ದತೆ ಪೂರ್ಣ: ಜಿ.ಪಂ ಸಿಇಒ
ಉಡುಪಿ: ರಾಜ್ಯದಾದ್ಯಂತ ಸಿಇಟಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು ಮೇ 20 ಮತ್ತು 21 ರಂದು ನಡೆಯಲಿರುವ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಉಡುಪಿಯಲ್ಲಿ 6, ಕಾರ್ಕಳದಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಬ್ರಹ್ಮಾವರದಲ್ಲಿ 2 ಸೇರಿದಂತೆ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 5712 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಸಿಇಟಿ ಪರೀಕ್ಷೆ ಕುರಿತು ಪ್ರಶ್ನೆಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಸೂಕ್ತ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದೆ. ಖಜಾನೆಯಲ್ಲಿ ಸಿಸಿಟಿವಿ ವ್ಯವಸ್ಥೆ ಅಳವಡಿಸುವಂತೆ ಹಾಗೂ […]
ದಕ್ಷಿಣ ಪೆಸಿಫಿಕ್ ಸಮುದ್ರದಲ್ಲಿ 7.8 ತೀವ್ರತೆಯ ಭೂಕಂಪ: ಹತ್ತಿರದ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ
ಶುಕ್ರವಾರ ದಕ್ಷಿಣ ಪೆಸಿಫಿಕ್‌ನ ಲಾಯಲ್ಟಿ ದ್ವೀಪಗಳ ಆಗ್ನೇಯ ಭಾಗದಲ್ಲಿ ಪೂರ್ವಾಭಾವಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ವನವಾಟು, ಫಿಜಿ ಮತ್ತು ಕಿರಿಬಾಟಿ ಸೇರಿದಂತೆ ಹತ್ತಿರದ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರವು ಫಿಜಿ, ವನವಾಟು ಮತ್ತು ನ್ಯೂ ಕ್ಯಾಲೆಡೋನಿಯಾದ ನಡುವೆ ಇರುವ ಭೂಕಂಪದ ಕೇಂದ್ರದಿಂದ 1,000 ಕಿಲೋಮೀಟರ್ (621 ಮೈಲುಗಳು) ಒಳಗೆ ಇರುವ ಕರಾವಳಿಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಭೂಕಂಪವು 38 ಕಿಲೋಮೀಟರ್ […]
ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರದಂದೇ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ?
ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದ್ದು, ನಾಳೆ (ಮೇ 20) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಸಿಎಂ ಆಯ್ಕೆ ಸರ್ಕಸ್ ಬಳಿಕ ಕೈ ಪಾಳಯದಲ್ಲಿ ಸಚಿವ ಸಂಪುಟ ಕಸರತ್ತು ಶುರುವಾಗಿದ್ದು, ಹಲವು ಶಾಸಕರು ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ಜಿಲ್ಲೆ, ತಮ್ಮ ಜಾತಿಗೆ ಹೆಚ್ಚು ಸಚಿವ […]
ಉಡುಪಿ ಅಧಿಕೃತ ಡೀಲರ್ National Equipment ನಲ್ಲಿದೆ ಅಂತರಾಷ್ಟ್ರೀಯ ಗುಣಮಟ್ಟದ ವಾಣಿಜ್ಯ ಶೈತ್ಯೀಕರಣ ಉಪಕರಣಗಳು
2009 ರಲ್ಲಿ ಪ್ರಾರಂಭವಾದ ವಾಣಿಜ್ಯ ಶೈತ್ಯೀಕರಣ ಉಪಕರಣ ಸಂಸ್ಥೆಯಾದ Elanpro 2021 ರಿಂದಲೇ 510 ಚಾನಲ್ ಪಾಲುದಾರರ ಮೂಲಕ ಬಲವಾದ ವಿತರಣಾ ಜಾಲವನ್ನು ಹೊಂದಿದೆ. ಬಾರ್, ಮೆಡಿಕಲ್, ರಿಟೇಲ್, ಪ್ರೊಫೆಷನಲ್ ಕಿಚನ್, ಶೋಕೇಸ್ ಡಿಸ್ಪ್ಲೇ, ಬೆವೆರೇಜ್ ಡಿಸ್ಪೆನ್ಸರ್ ಮುಂತಾದ ರೆಫ್ರಿಜೆರೇಷನ್ ಸೌಲಭ್ಯಗಳನ್ನು Elanpro ಗ್ರಾಹಕರಿಗಾಗಿ ನೀಡುತ್ತಾ ಬಂದಿದೆ. ಯಶಸ್ವಿ ಸ್ವಾಮ್ಯದ ಬ್ರ್ಯಾಂಡ್ ಗುಣಮಟ್ಟದ ವಾಣಿಜ್ಯ ಶೈತ್ಯೀಕರಣ ಮತ್ತು ಪಾನೀಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಉಡುಪಿ ನಗರದಲ್ಲಿ National Equipment ವಿತರಕರು ಉಪಕರಣಗಳ ವಿತರಣೆಯನ್ನು ಕೈಗೊಳ್ಳುತ್ತಿದ್ದಾರೆ.
ಮೇ. 28 ರಂದು ನೂತನ ಸಂಸತ್ ಭವನ ಉದ್ಘಾಟನೆ ನಡೆಸಲಿರುವ ಪ್ರಧಾನಿ ಮೋದಿ
ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಗೆ ದಿನಗಣನೆ ನಡೆಯುತ್ತಿದ್ದು, ಬಹುತೇಕ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮ ವರದಿಯಾಗಿದೆ. ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ ಎನ್ನಲಾಗಿದೆ. ನಾಲ್ಕು ಅಂತಸ್ತಿನ ಸಂಸತ್ ಭವನದಲ್ಲಿ 1,224 ಸಂಸತ್ ಸದಸ್ಯರಿಗೆ ಆಸನ ವ್ಯವಸ್ಥೆ ಇದ್ದು, ಅತ್ಯಾಧುನಿಕ ಸವಲತ್ತು ಮತ್ತು ಸುರಕ್ಷತೆಯನ್ನು ಒಳಗೊಂಡಿದೆ. ಲೋಕಸಭೆ […]