ಟ್ವಿಟರ್ ನಲ್ಲಿ ಆಕ್ಟಿವ್ ಆದ ಶಾಸಕ ಯಶ್ ಪಾಲ್ ಸುವರ್ಣ: ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ; ಸಾರ್ವಜನಿಕರಿಂದ ಅಭಿನಂದನೆ
ಉಡುಪಿ: ಮೇ.13 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಭಾರೀ ಬಹುಮತದಿಂದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಗೆದ್ದು ಬೀಗಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬೀಗಿದ ಕೆಲವೇ ದಿನಗಳಲ್ಲಿ ಯಶ್ ಪಾಲ್ ಸುವರ್ಣ ಸಾರ್ವಜನಿಕರ ಮನಗೆಲ್ಲುವಂತಹ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಉಡುಪಿ ನಗರಸಭೆಗೆ ಭೇಟಿ ನೀಡಿ ಕುಡಿಯುವ ನೀರಿನ ಸಮರ್ಪಕ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ವೀಣಾ ಪೈ ಎನ್ನುವ […]
ಪರ್ಯಾಯ ಅಕ್ಕಿ ಮುಹೂರ್ತ ಪೂರ್ವ ಭಾವಿ ಚಿಂತನಾ ಸಭೆ
ಮುಂಬರುವ ಉಡುಪಿಯ ಶ್ರೀಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಲಿರುವ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರ ಆದೇಶದಂತೆ ಮೇ 17 ರಂದು ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಚಿಂತನಾ ಸಭೆಯು ಸ್ಥಳೀಯ ವಿವಿಧ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹವ್ಯಕ ಸಭಾ, ಬಿಲ್ಲವ ಸಮಾಜ, ಮೊಗವೀರ ಸಮಾಜ, ವಿಶ್ವಕರ್ಮ ಸಮಾಜ, ಕುಲಾಲ ಸಂಘ ಜೋಗಿ ಸಮಾಜ, ತುಳು ಕೂಟ ,ಜಿ.ಎಸ್.ಬಿ ಸಮಾಜಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ದೌರ್ಜನ್ಯ ಪ್ರಕರಣ: ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್‌ಐ, ಪೇದೆ ಅಮಾನತು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಶ್ರೀನಾಥ್ ರೆಡ್ಡಿ ಮತ್ತು ಅದೇ ಠಾಣೆಯ ಪೊಲೀಸ್ ಪೇದೆ ಹರ್ಷಿತ್ನನ್ನು ಅಮಾನತುಗೊಳಿಸಲಾಗಿದೆ. ಫಿರ್ಯಾದಿ ಅವಿನಾಶ್ ತಂದೆ ವೇಣುನಾಥ ನರಿಮೋಗ್ರು ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆ Cr […]
ಮಂಗಳೂರು: ಮೇ-19 ರಂದು ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ
ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ ನಲ್ಲಿರುವ ದ ಓಶನ್ ಪರ್ಲ್ ಹೋಟೆಲ್ ನಲ್ಲಿ ಮೇ.19 ರಂದು ಸಂಜೆ 7 ಗಂಟೆಗೆ ಬಿರ್ಲಾ ಶಕ್ತಿ ಸಿಮೆಂಟ್ ಕಾಂಕ್ರೀಟ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ.20 ರಿಂದ 25: ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
ಹಿರಿಯಡಕ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 20 ರಿಂದ 25ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಇಂದು ಸಂಜೆ ಗಂಟೆ 3.30 ರಿಂದ ಗುಡ್ಡೆಯಂಗಡಿ, ಪುಪಾಡಿಕಲ್ಲು, ಜೋಡುಕಟ್ಟೆ ಮಾರ್ಗವಾಗಿ ಬೃಹತ್ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.