ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್ ಗೆಲುವು
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಣಿಕೆ ಪೂರ್ಣಗೊಂಡ ಸುಳ್ಯ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ ಕಾಮತ್ ಅವರು ಗೆಲುವು ಸಾಧಿಸಿದ್ದಾರೆ.
128 ಕ್ಷೇತ್ರಗಳಲ್ಲಿ ಮುನ್ನಡೆಯೊಂದಿಗೆ ಬಹುಮತದತ್ತ ಕಾಂಗ್ರೆಸ್ ; ಚಳ್ಳಕೆರೆಯಲ್ಲಿ ಗೆಲುವು ದಾಖಲು
ಬೆಂಗಳೂರು: ಬಹು ಸುತ್ತಿನ ಇವಿಎಂ ಎಣಿಕೆಯ ನಂತರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತದತ್ತ ಮುನ್ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚಿಸುವುದು ಬಹುತೇಕ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 68 ರಲ್ಲಿ, ಜೆ.ಡಿ.ಎಸ್ 22 ಅನ್ಯರು 6 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅದಾಗಲೇ ಗೆಲುವು ಸಾಧಿಸಿದೆ.
ಬೆಳ್ತಂಗಡಿಯಲ್ಲಿ ಮತ್ತೆ ಅರಳಿದ ಕಮಲ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಗೆಲುವು..
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಮತ್ತೆ ಕಮಲ ಅರಳಿದ್ದು, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆಲವಾಗಿದೆ. ಬಿಜೆಪಿಯ ಹರೀಶ್ ಪೂಂಜಾರಿಗೆ 74896 ಮತಗಳು, ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್‌ಗೆ 61734 ಮತಗಳು ಲಭಿಸಿದ್ದು, 13162 ಅಂತರದಿಂದ ಹರೀಶ್ ಪೂಂಜಾ ಜಯವನ್ನು ಸಾಧಿಸಿದ್ದಾರೆ
ಆರಂಭಿಕ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್; ಮೊದಲನೆ ಹಂತದಲ್ಲಿ 116 ಸೀಟುಗಳಲ್ಲಿ ಮುನ್ನಡೆ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲನೆ ಹಂತದ ಎಣಿಕೆಯಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, 116 ಸೀಟುಗಳಲ್ಲಿ ಮುನ್ನಡೆ ಕಾಯುಕೊಂಡಿದೆ. ಅಂಚೆ ಮತದಾನದ ಎಣಿಕೆ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಮುನ್ನುಗುತ್ತಿದೆ. ಭಾರತೀಯ ಪಕ್ಷ 83 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಜೆ.ಡಿ.ಎಸ್ 20 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಇತರ 01 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ ಶ್ರೀರಾಮುಲು, ಸುಧಾಕರ್, ರಮೇಶ್ ಜಾರಕಿಹೊಳಿ, ಕುಮಾರಸ್ವಾಮಿ, ಬಿ.ಸಿ.ಪಾಟೀಲ್, ಸಿ.ಟಿ.ರವಿ, ಕಾರಜೋಳ, ಸೋಮಣ್ಣ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.
ಸಿ.ಬಿ.ಎಸ್.ಸಿ ಫಲಿತಾಂಶ: ಜಿಎಮ್ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ
ಬ್ರಹ್ಮಾವರ: 2022-23 ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 10 ನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಬ್ರಹ್ಮಾವರದ ಜಿಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಿಂದ ಒಟ್ಟು 218 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅತ್ಯುತ್ತಮ ಫಲಿತಾಂಶದೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತಿವರ್ಶದಂತೆ ವಿದ್ಯಾರ್ಥಿಗಳು ಈ ಬಾರಿಯೂ ಶೇ.100 ಫಲಿತಾಂಶ ಪಡೆದುಕೊಂಡಿರುತ್ತಾರೆ. ಶಾಲೆಯ ಈ ಶೈಕ್ಷಣಿಕ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪ್ರಾಂಶುಪಾಲರು, ಶೈಕ್ಷಣಿಕ ನಿರ್ದೇಶಕರು ವಿದ್ಯಾರ್ಥಿಗಳನ್ನು, […]