ಉತ್ತರ ಪ್ರದೇಶ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ
ಲಕ್ನೋ: ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆ (ಯುಎಲ್‌ಬಿ) ಚುನಾವಣೆಯು ಇಂದು 17 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಮೇಯರ್‌ಗಳು ಮತ್ತು ಕಾರ್ಪೊರೇಟರ್‌ಗಳು ಮತ್ತು ನಗರಪಾಲಿಕೆ ಪರಿಷತ್‌ಗಳು ಮತ್ತು ನಗರ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಸದಸ್ಯರ ಫಲಿತಾಂಶಗಳ ಘೋಷಣೆಯೊಂದಿಗೆ ಕೊನೆಗೊಳ್ಳಲಿದೆ. ಉತ್ತರ ಪ್ರದೇಶದ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದತ್ತ ಮುನ್ನುಗ್ಗುತ್ತಿದ್ದು 17 ಕಾರ್ಪೊರೇಷನ್ ಸ್ಥಾನಗಳಲ್ಲಿ 16 ರಲ್ಲಿ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯ ಅಭಿವೃದ್ದಿ ಕಾರ್ಯಗಳು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಜನರು ಒಪ್ಪಿಗೆಯ […]
ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಭರ್ಜರಿ ಜಯ
ಕಾರ್ಕಳ: ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಭರ್ಜರಿ ಜಯವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಸೋಲು ಅನುಭವಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಜಯಬೇರಿ..
ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರು ಭರ್ಜರಿ ಜಯಬೇರಿ ಬಾರಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಕೆಯ ಅಂತ್ಯದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರು 52,255 ಮತಗಳನ್ನು ಪಡೆದುಕೊಂಡು ಗೆಲುವನ್ನು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ 51,999 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು, 31,304 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಗೆಲುವು
ಮೂಡುಬಿದಿರೆ: ಕರ್ನಾಟಕ ವಿಧಾನಸಭಾ ಚುನಾವಣಾಯ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಮಿಥುನ್ ರೈ ಸೋಲು ಅನುಭವಿಸಿದ್ದಾರೆ.
ಉಡುಪಿ-ಕಾರ್ಕಳದಲ್ಲಿ ಮತ್ತೊಮ್ಮೆ ಅರಳಿದ ಕಮಲ; ಸುನಿಲ್ ಕುಮಾರ್- ಯಶ್ ಪಾಲ್ ಸುವರ್ಣ ಗೆ ಒಲಿದ ವಿಜಯ
ಉಡುಪಿ: ಬಿಜೆಪಿ- ಕಾಂಗ್ರೆಸ್ ನಡುವೆ ನೇರಹಣಾಹಣಿಯ ಉಡುಪಿ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ಫಲಿತಾಂಶ ಉಡುಪಿ ಪ್ರಸಾದ್ ಕಾಂಚನ್- ಕಾಂಗ್ರೆಸ್: 52930 ಯಶಪಾಲ್ ಎ ಸುವರ್ಣ- ಬಿಜೆಪಿ: 77386 ಕಾರ್ಕಳ ಉದಯ ಕುಮಾರ್ ಶೆಟ್ಟಿ- ಕಾಂಗ್ರೆಸ್: 71615 ವಿ ಸುನಿಲ್ ಕುಮಾರ್- ಬಿಜೆಪಿ: 76019