‘ಮತದಾನ’-ಪತ್ರಿಕಾ ಛಾಯಾಗ್ರಾಹಕರಿಗಾಗಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ-2023 ರ ಮತದಾನದ ಹಬ್ಬವನ್ನು ಸ್ಮರಣೀಯವಾಗಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಪತ್ರಿಕಾ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವಿಷಯ: ಮತದಾನ ಅರ್ಹತೆ: ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರು ಬಹುಮಾನ: ಪ್ರಥಮ: 25,000/- ದ್ವಿತೀಯ: 15,000/- ತೃತೀಯ: 10,000/- ಸಮಾಧಾನಕರ: 6,000/- ವಿಶೇಷ: 5000/- ಛಾಯಾಚಿತ್ರಗಳನ್ನು ಸಲ್ಲಿಸಲು ಕೊನೆ ದಿನ: 20-05-2023, ಶನಿವಾರ ಸಂಜೆ 5 ಗಂಟೆ ವಿಳಾಸ: [email protected]
ವಿಧಾನಸಭಾ ಚುನಾವಣೆ: ಶೇಕಡಾವಾರು ಮತದಾನದಲ್ಲಿ ದಾಖಲೆ ಸೃಷ್ಟಿ; ಇದೇ ಮೊದಲ ಬಾರಿಗೆ 73.19% ಮತದಾನ
ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಗೆ ಸಾರ್ವಕಾಲಿಕ ಗರಿಷ್ಠ 73.19% ಮತದಾನವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 85.56% ಮತದಾನವಾಗಿದೆ. ಬೆಂಗಳೂರಿನ ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ 52.33% ದೊಂದಿಗೆ ಅತಿ ಕಡಿಮೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದಾಗ್ಯೂ, ಇದು ತಾತ್ಕಾಲಿಕ ಅಂಕಿ ಅಂಶವಾಗಿದ್ದು, ಇದು ಅಂಚೆ ಮತದಾನವನ್ನು ಒಳಗೊಂಡಿಲ್ಲ ಎಂದು ಆಯೋಗ ತಿಳಿಸಿದೆ. 1957 ರ ಬಳಿಕ ಈ ಬಾರಿ ನಡೆದಿರುವ ಚುನಾವಣೆಯಲ್ಲಿ ಅತ್ಯಧಿಕ ಮತದಾನ ನಡೆದಿದೆ ಎನ್ನಲಾಗಿದೆ. ಈ ವರ್ಷ […]
ಮಂಗಳೂರು: ಸೆಪ್ಟೆಂಬರ್ ನಿಂದ ಸಿಗಲಿದೆ ನಾಲ್ಕು ಜೋಡಿ ರೈಲುಗಳಿಗೆ ಎಸಿ 3-ಟೈರ್ ಎಕಾನಮಿ ಕ್ಲಾಸ್ ಕೋಚ್
ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ನಾಲ್ಕು ಜೋಡಿ ರೈಲುಗಳಿಗೆ ಒಂದು ಸ್ಲೀಪರ್ ಕ್ಲಾಸ್ ಕೋಚ್ ಬದಲಿಗೆ ಎಸಿ 3-ಟೈರ್ ಎಕಾನಮಿ ಕ್ಲಾಸ್ ಕೋಚ್ ಸಿಗಲಿದೆ. ಈ ರೈಲುಗಳ ಪರಿಷ್ಕೃತ ಸಂಯೋಜನೆಯು ಒಂದು ಎಸಿ ಫಸ್ಟ್ ಕ್ಲಾಸ್-ಕಮ್ 2-ಟೈರ್ ಎಸಿ, ಒಂದು 2-ಟೈರ್ ಎಸಿ, ಐದು 3-ಟೈರ್ ಎಸಿ, ಒಂಬತ್ತು ಸ್ಲೀಪರ್ ಕ್ಲಾಸ್, ಐದು ಸಾಮಾನ್ಯ ಎರಡನೇ ದರ್ಜೆ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಹೊಂದಿರುತ್ತದೆ. ರೈಲು ಸಂಖ್ಯೆ 16603/16604 ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ […]
ಕಾಪು: ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಉರುಳಿದ ಮರ; ಇಬ್ಬರು ಪ್ರಯಾಣಿಕರ ಸಾವು
ಕಾಪು: ನಿನ್ನೆ ಸಂಜೆ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರಿಬ್ಬರು ಸಾವನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು – ಶಿರ್ವ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ವೇಳೆ ಈ ಅವಘಡ ಸಂಭವಿಸಿದೆ. ಪಾದೂರು ಕೂರಾಲು ರೈಸ್ ಮಿಲ್ ಬಳಿಯ ನಿವಾಸಿ 45 ವರ್ಷದ ಪುಷ್ಪಾ ಕುಲಾಲ್ ಮತ್ತು ಕಳತ್ತೂರು ನಿವಾಸಿ 48ವರ್ಷದ ಕೃಷ್ಣ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಿಕ್ಷಾ ಚಾಲಕ […]
CBSE 12 ನೇ ತರಗತಿಯ ಫಲಿತಾಂಶ ಪ್ರಕಟ: 99.91% ನೊಂದಿಗೆ ತಿರುವನಂತಪುರ ಪ್ರಥಮ; ಬೆಂಗಳೂರು ದ್ವಿತೀಯ
ನವದೆಹಲಿ: CBSE 12 ನೇ ತರಗತಿಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ https://cbseresults.nic.in/ ನಲ್ಲಿ ಪ್ರಕಟಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಪ್ರಕಟಿಸಿದೆ. ಈ ವರ್ಷ ಫೆಬ್ರವರಿ 15 ರಿಂದ ಏಪ್ರಿಲ್ 5 ರವರೆಗೆ ನಡೆದ ಪರೀಕ್ಷೆಗೆ ಸುಮಾರು 16.9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಸದ್ಯಕ್ಕೆ, CBSE 12 ನೇ ತರಗತಿ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದ್ದು, ಮಾಹಿತಿಯ ಪ್ರಕಾರ 10 ನೇ ತರಗತಿಯ ಫಲಿತಾಂಶವೂ […]