ವಸಂತ ವೇದ ಶಿಬಿರ: ಮೇ 14 ರಂದು ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಪಟ್ಟಾಭಿಷೇಕ ವರ್ಧಂತಿ

ಉಡುಪಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ, ಪಡುಕುತ್ಯಾರು ಇದರ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಸಂತ ವೇದ ಶಿಬಿರ 2023 ಅನ್ನು ಮೇ 6 ರಿಂದ 14 ರ ವರೆಗೆ ಶ್ರೀ ಸರಸ್ವತೀ ಸತ್ಸಂಗ ಮುಂದಿರ ಪಡುಕುತ್ಯಾರು ಇಲ್ಲಿ ಆಯೋಜಿಸಲಾಗಿದೆ. ಶಿಬಿರ ಉದ್ಘಾಟನೆಯು ಮೇ 7 ರಂದು ಜರುಗಿದ್ದು,ಸಮಾರೋಪವು ಮೇ 14 ರಂದು ಜಗದ್ಗುರುಗಳ ಪಟ್ಟಾಭಿಷೇಕ ವರ್ಧಂತಿ ಸಮಾರಂಭದೊಂದಿಗೆ ಸಂಪನ್ನವಾಗಲಿದೆ. ವಸಂತ ವೇದ […]

ದಕ್ಷಿಣ ಕನ್ನಡ, ಉಡುಪಿ ಸಂಜೆ 5 ಗಂಟೆವರೆಗೆ ಕ್ರಮವಾಗಿ 68.93% ಮತ್ತು 73.75%ರಷ್ಟು ಮತದಾನ..!!

ಉಡುಪಿ :ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ  ಸಂಜೆ 5ಗಂಟೆವರೆಗೆ ಕ್ರಮವಾಗಿ 68.93% ಮತ್ತು 73.75%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ. ಬೈಂದೂರು – 71.83%,ಕುಂದಾಪುರ – 75.61%, ಉಡುಪಿ -71.26%, ಕಾಪು – 71.16%,ಕಾರ್ಕಳ – 75.54% ರಷ್ಟು ಮತದಾನವಾಗಿದೆ. ಬೆಳ್ತಂಗಡಿ 73.64%, ಮಂಗಳೂರು-69.5%, ಮಂಗಳೂರು ಉತ್ತರ-67.23%, ಮಂಗಳೂರು ದಕ್ಷಿಣ 59.31%, ಮೂಡುಬಿದಿರೆ-70.47%, ಬಂಟ್ವಾಳ-74.71% , ಸುಳ್ಯ 62.5% ಪುತ್ತೂರು- 74.96% ರಷ್ಟು ಮತದಾನವಾಗಿದೆ

ಉಡುಪಿ: ಮತದಾನ ಅತ್ಯಂತ ಶ್ರೇಷ್ಠ ದಾನ, ಪುತ್ತಿಗೆ ಶ್ರೀ..!!

ಉಡುಪಿ : ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಮತದಾನ. ನಮ್ಮ ದೇಶದ ರಕ್ಷಣೆಗೆ ಇರತಕ್ಕ ಜವಾಬ್ಧಾರಿಯನ್ನು ನಿರ್ವಹಿಸತಕ್ಕಂತಹ ಈ ಒಂದು ದಾನ ಅತ್ಯಂತ ಶ್ರೇಷ್ಠವಾದದ್ದು ಎಂದು ಉಡುಪಿ ಶ್ರೀಕೃಷ್ಣ ಮಠದ ಭಾವಿ ಪರ್ಯಾಯ ಮಠಾಧೀಶರಾದ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀಪಾದರು ಉಡುಪಿಯ ಪಣಿಯಾಡಿ ಶ್ರೀ ಅನಂತೇಶ್ವರ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿ ಮಾತನಾಡಿ, ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂಬ ಭಾವನೆ ಸರಿಯಲ್ಲ ಅದೇರೀತಿ ಯಾರೂ ಒಳ್ಳೆಯವರಿಲ್ಲ ಅದರಿಂದ ನಾವು ಓಟು […]