ಮಧ್ಯಪ್ರದೇಶ: ಸೇತುವೆಯಿಂದ ಕೆಳಗುರುಳಿದ ಬಸ್: ಕನಿಷ್ಠ 15 ಜನರ ಸಾವು

ಭೋಪಾಲ: ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಮಂಗಳವಾರ ಬಸ್ ಸೇತುವೆಯಿಂದ ಬಿದ್ದು ಕನಿಷ್ಠ 15 ಜನರು ಸಾವನ್ನಪ್ಪಿದ್ದರೆ, ಸುಮಾರು 25 ಜನರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇಂದೋರ್‌ಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಸ್ಕಿಡ್ ಆಗಿ ಕೆಳಕ್ಕೆ ಬಿದ್ದಿದೆ. ಜಿಲ್ಲಾಧಿಕಾರಿ ಶಿವರಾಜ್ ಸಿಂಗ್ ವರ್ಮಾ ಅಪಘಾತ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮಧ್ಯಪ್ರದೇಶ ಸರ್ಕಾರವು ಮೃತರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ತೀವ್ರವಾಗಿ ಗಾಯಗೊಂಡವರಿಗೆ […]

ಕರಾವಳಿ ಅಲೆ ಸಂಜೆ ದೈನಿಕ ಮಾನಹಾನಿ ಪ್ರಕರಣ: ಆರೋಪಿಗಳ ಶಿಕ್ಷೆ ಎತ್ತಿಹಿಡಿದ ಮಂಗಳೂರು ನ್ಯಾಯಾಲಯ

ಮಂಗಳೂರು: ಕರಾವಳಿ ಅಲೆ ಎಂಬ ಕನ್ನಡ ಸಂಜೆ ದೈನಿಕದ ಸಂಪಾದಕರ ಬಗ್ಗೆ ನಿಂದನೆ ಮಾಡಿದ ಆರೋಪದ ಮೇಲೆ ಮಂಗಳೂರಿನ ಸೆಷನ್ಸ್ ನ್ಯಾಯಾಲಯವು ಮತ್ತೊಂದು ಕನ್ನಡ ಸಂಜೆ ದೈನಿಕ ಕರಾವಳಿ ಮಾರುತದ ಸಂಪಾದಕ ಸುದೇಶ್ ಕುಮಾರ್ ಮತ್ತು ಮಾಲೀಕ ಗಂಗಾಧರ ಪಿಲಿಯೂರ್ ಇಬ್ಬರ ಶಿಕ್ಷೆಯನ್ನೂ ಎತ್ತಿ ಹಿಡಿದಿದೆ ಎಂದು ಬಾರ್ ಎಂಡ್ ಬೆಂಚ್ ವರದಿ ಮಾಡಿದೆ. ಕರಾವಳಿ ಅಲೆ ದೈನಿಕದ ಸಂಪಾದಕ ಬಿ ವಿ ಸೀತಾರಾಮ್‌ ಅವರನ್ನು ನಿಂದಿಸಿ ತಮ್ಮ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಕರಾವಳಿ ಮಾರುತದ ಸಂಪಾದಕ […]

ದಿ ಕೇರಳ ಸ್ಟೋರಿ: ಬಂಗಾಳದಲ್ಲಿ ನಿಷೇಧ; ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಆದಿತ್ಯನಾಥ್ ಅವರ ಘೋಷಣೆ ಹೊರಬಿದ್ದಿದೆ. ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪರದೆಗಳಿಂದ ಚಲನಚಿತ್ರವನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮಮತಾ ಬ್ಯಾನರ್ಜಿ ನಿರ್ದೇಶನ ನೀಡಿದ್ದಾರೆ. “ಬಂಗಾಳದಲ್ಲಿ ಶಾಂತಿ […]