ಹತ್ತನೇ ತರಗತಿ ಫಲಿತಾಂಶ: ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ: ಇಲ್ಲಿನ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರಾವ್ಯ ಮತ್ತು ತ್ರಿಶಾ ಎ ದೇವಾಡಿಗ 618 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಗಳಾಗಿದ್ದು, ಅನ್ವಿತಾ ನಾಯಕ್ 617 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಕೆ.ವಿಘೇಶ್ ಹಿಣಿ ಹಾಗೂ ಸ್ನಿಗ್ಧ ಯು ಶೆಟ್ಟಿ 613 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಪರೀಕ್ಷೆಗೆ ಹಾಜರಾದ 99 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 5 ವಿದ್ಯಾರ್ಥಿಗಳು ಶೇ. 98 ಕ್ಕಿಂತ ಅಧಿಕ ಅಂಕ ಪಡೆದಿದ್ದು, 58 ವಿದ್ಯಾರ್ಥಿಗಳು ವಿಶಿಷ್ಟ […]
ಮೇ 10 ರಂದು ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಬೆಂಗಳೂರು: ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಹಗುರದಿಂದ ಮಧ್ಯಮ ಮಳೆಯಾಗುವ ಮತ್ತು 30-40 ಕಿಮೀ/ಪ್ರತಿ ಘಂಟೆ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ 10 ರಂದು ಕರಾವಳಿಯ ಉಡುಪಿ ಮತ್ತು ದ.ಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ (64.5 ಮಿ.ಮೀ ನಿಂದ 115.5 ಮಿ.ಮೀ) ಸಂಭವಿಸುವ ಸಾಧ್ಯತೆಯಿದೆ ಎಂದು ಇಲಾಖೆ […]
ಕಲ್ಸಂಕ ರಸ್ತೆಯಲ್ಲಿ ಸ್ಕೂಟರ್ ಗೆ ಕಾರು ಢಿಕ್ಕಿ ವ್ಯಕ್ತಿ ಸಾವು
ಉಡುಪಿ, : ಸ್ಕೂಟರಿಗೆ ಕಾರೊಂದು ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಅಂಬಾಗಿಲಿನಿಂದ ಕಲ್ಸಂಕಕ್ಕೆ ಹೋಗುವ ರಸ್ತೆಯಲ್ಲಿ ದುರ್ಗಾ ಜನರಲ್ ಸ್ಟೋರ್ ಎದುರು ನಡೆದಿದೆ. ಮೃತರನ್ನು ಪುತ್ತೂರು ಗ್ರಾಮದ ಹನುಮಂತನಗರದ ನಿವಾಸಿ ರವಿಚಂದ್ರ ದೇವಾಡಿಗ (57) ಎಂದು ಗುರುತಿಸಲಾಗಿದೆ. ಇವರು ದುರ್ಗಾ ಜನರಲ್ ಸ್ಟೋರ್ ಎದುರು ತನ್ನ ಸ್ಕೂಟರ್ ನಲ್ಲಿ ಡಿವೈಡರ್ ಬಳಿ ಸೂಚನೆ ನೀಡಿ ತಿರುಗಿಸುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಇದರಿಂದ ಸ್ಕೂಟರ್ ಸಮೇತ ರಸ್ತೆಗೆ […]
ಅಬಕಾರಿ ಇಲಾಖೆ: ಮತ್ತೆ 797 ಕಡೆ ದಾಳಿ
ಮಂಗಳೂರು: ದ.ಕ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ತಡೆಗೆ ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು ಎ.26ರಿಂದ ಮೇ 7ರವರೆಗೆ ಒಟ್ಟು 797 ದಾಳಿ ನಡೆಸಿದೆ. ಈ ಅವಧಿಯಲ್ಲಿ 17 ಗಂಭೀರ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯಿದೆಯಡಿ 3 ಪ್ರಕರಣ ದಾಖಲಿಸಿಕೊಳ್ಳಲಾಗಿದೆ 66.755 ಲೀ ಐಎಂಎಲ್, 50.250 ಲೀ. ಬಿಯರ್, 22.750 ಲೀ. ಗೋವಾ ಮದ್ಯ, 200 ಲೀ. ಗೇರುಹಣ್ಣು ಕೊಳೆ, 875 ಲೀ. ಶೇಂದಿ, 8 ವಾಹನಗಳು, 600 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ
ಮತದಾನಕ್ಕೆ ಜಿಲ್ಲೆಯ ತಯಾರಿ ಪೂರ್ಣ; ಅರ್ಹರೆಲ್ಲರೂ ಮತದಾನ ಮಾಡಿ: ಜಿಲ್ಲಾಧಿಕಾರಿ
ಉಡುಪಿ: ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 10,41,915 ಮಂದಿ ಮತದಾರರಿದ್ದು, ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಜಿಲ್ಲೆಯ 1111 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಅರ್ಹರೆಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಮತದಾರರು ಚುನಾವಣಾ ಆಯೋಗ ನಮೂದಿಸಿದ ಯಾವುದಾದರೊಂದು ಗುರುತಿನ ದಾಖಲೆಯೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಬಹುದು. 5 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ ಒಟ್ಟು 25 ಸಖೀಮತಗಟ್ಟೆ, ತಲಾ 1ರಂತೆ 5 ಪಿಡಬ್ಲೂಡಿ, […]