ಮಂಗಳೂರು: ಸಾಂಗವಾಗಿ ನಡೆದ ನೀಟ್‌ ಪರೀಕ್ಷೆ..!!

ಮಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರವಿವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ದಕ್ಷಿಣ ಕನ್ನಡ ಜಿಲ್ಲೆಯ 17 ಕೇಂದ್ರಗಳಲ್ಲಿ ಸಾಂಗವಾಗಿ ನಡೆಯಿತು. ಮಧ್ಯಾಹ್ನದ ಅನಂತರ ಪರೀಕ್ಷೆ ಆರಂಭವಾದರೂ ಬೆಳಗ್ಗಿನಿಂದಲೇ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಿ, ಕೊನೆಯ ಹಂತದ ತಯಾರಿಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ದ.ಕ. ಜಿಲ್ಲೆಯಲ್ಲಿ 8,291 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಹೊಂದಿದ್ದರು. ಪುತ್ತೂರು, ಮೂಡುಬಿದಿರೆ ಸೇರಿ ವಿವಿಧ ಭಾಗದಿಂದ ವಿದ್ಯಾರ್ಥಿಗಳು ಪೋಷಕರ ಜತೆ ಆಗಮಿಸಿ ಪರೀಕ್ಷೆಯಲ್ಲಿ […]

ಕೇರಳದಲ್ಲಿ ದೋಣಿ ಮುಳುಗಡೆ; ಮಕ್ಕಳು ಸೇರಿ 21 ಮಂದಿ ಸಾವು..

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಭಾನುವಾರ ಸಂಜೆ ಸುಮಾರು 30 ಪ್ರಯಾಣಿಕರಿದ್ದ ಹೌಸ್ ಬೋಟ್ ಪಲ್ಟಿಯಾಗಿ ಮುಳುಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನೂರ್ ಕರಾವಳಿ ಬಳಿ ಪ್ರವಾಸಿ ದೋಣಿ ಮಗುಚಿ ಬಿದ್ದಿದೆ. ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ದೋಣಿಯಲ್ಲಿದ್ದವರೆಲ್ಲರೂ ಪ್ರವಾಸಿಗರಾಗಿದ್ದಾರೆ. ಇದುವರೆಗೆ ನಾವು 21 […]

ಉಡುಪಿ ನಗರದಲ್ಲಿ ಪಥ ಸಂಚಲನ..!!

ಉಡುಪಿ: ಭಯಮುಕ್ತ ಚುನಾವಣೆ ಹಾಗೂ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಪೊಲೀಸ್‌ ಇಲಾಖೆ ವತಿಯಿಂದ ರವಿವಾರ ಉಡುಪಿ ನಗರದಲ್ಲಿ ಪಥ ಸಂಚಲನ ನಡೆಸಲಾಯಿತು. ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ನೇತೃತ್ವದಲ್ಲಿ ಬನ್ನಂಜೆ ನಾರಾಯಣ ಗುರು ಸಭಾ ಭವನದಿಂದ ಆರಂಭ ಗೊಂಡ ಪಥ ಸಂಚಲನ ಸಿಟಿ ಬಸ್‌ ನಿಲ್ದಾಣ, ಸರ್ವಿಸ್‌ ನಿಲ್ದಾಣ, ಕೆ.ಎಂ.ಮಾರ್ಗದ ಮೂಲಕ ಸಾಗಿ ಶೋಕಾ ಮಾತಾ ಚರ್ಚ್‌ ಎದುರು ಸಮಾಪನಗೊಂಡಿತು. ಪಥಸಂಚಲನದಲ್ಲಿ ಸಶಸ್ತ್ರ ಪಡೆ, ಅರೆಸೇನಾ ಪಡೆ, ತಮಿಳುನಾಡು, ಮಹಾರಾಷ್ಟ್ರ ಹಾಗೂ […]

ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ ಸಮಾರಂಭದಲ್ಲಿ ಇತಿಹಾಸ ನಿರ್ಮಿಸಿದ ರಿಷಿ ಸುನಕ್: ವಾಚನಗೋಷ್ಠಿ ನಡೆಸಿದ ಮೊದಲ ಭಾರತೀಯ ಮೂಲದ ಪ್ರಧಾನಿ

ಲಂಡನ್‌: ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಅವರ ಪಟ್ಟಾಭಿಷೇಕ ಸಮಾರಂಭದಲ್ಲಿ ವಾಚನಗೋಷ್ಠಿಯನ್ನು ನಡೆಸಿದ ಮೊದಲ ಭಾರತೀಯ ಮೂಲದ ಬ್ರಿಟಿಷ್ ಪ್ರಧಾನಿಯಾಗಿ ರಿಷಿ ಸುನಕ್ ಶನಿವಾರ ಇತಿಹಾಸ ನಿರ್ಮಿಸಿದ್ದಾರೆ. ಯುಕೆ ಪ್ರಧಾನ ಮಂತ್ರಿಗಳು ರಾಜ್ಯ ಸಂದರ್ಭಗಳಲ್ಲಿ ವಾಚನಗೋಷ್ಠಿಯನ್ನು ನೀಡುವ ಇತ್ತೀಚಿನ ಸಂಪ್ರದಾಯಕ್ಕೆ ಅನುಗುಣವಾಗಿ 42 ವರ್ಷದ ರಿಷಿ ಸುನಕ್ ಇತರರಿಗೆ ಸೇವೆಯ ವಿಷಯವನ್ನು ಪ್ರತಿಬಿಂಬಿಸುವ ಹೊಸ ಒಡಂಬಡಿಕೆಯ Epistle to the Colossians ಅನ್ನು ಓದಿದರು. UK Prime Minister Rishi […]

ವಾಟ್ಸಾಪ್ ನಲ್ಲಿ ಅಜ್ಞಾತ ಅಂತಾರಾಷ್ಟ್ರೀಯ ಕರೆಗಳನ್ನು ಸ್ವೀಕರಿಸುವ ಮುನ್ನ ಜಾಗರೂಕರಾಗಿರಿ

ನವದೆಹಲಿ: ಬೆಳಗ್ಗಿನ ಜಾವದಿಂದ ರಾತ್ರಿವರೆಗೆ ಅಂಗೈಯಲ್ಲೇ ನಲಿದಾದುವ ವಾಟ್ಸಾಪ್ ಬಗ್ಗೆ ಹೊಸ ಹಗರಣವೊಂದು ವರದಿಯಾಗಿದೆ. ಇತ್ತೀಚೆಗೆ ಅಚಾನಕ್ ಆಗಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು, ಈ ಕರೆಗಳು ಇಥಿಯೋಪಿಯಾ (+251), ಮಲೇಷ್ಯಾ (+60), ಇಂಡೋನೇಷ್ಯಾ (+62), ಕೀನ್ಯಾ (+254), ವಿಯೆಟ್ನಾಂ (+84) ಮತ್ತು ಇತರ ದೇಶಗಳಿಂದ ಬರುತ್ತಿವೆ. ಆದಾಗ್ಯೂ, ಈ ಕರೆಗಳು ಬೇರೆ ದೇಶದ ಕೋಡ್‌ನಿಂದ ಪ್ರಾರಂಭವಾಗುವುದರಿಂದ ಕರೆಯ ಮೂಲವು ವಾಸ್ತವವಾಗಿ ಆ ದೇಶವೇ ಆಗಿದೆ ಎಂದು ಅರ್ಥವಲ್ಲ. ವಾಟ್ಸಾಪ್ ಕರೆಗಳು ಇಂಟರ್ನೆಟ್ ಮೂಲಕ ರವಾನೆಯಾಗುತ್ತವೆ. ಮಾಧ್ಯಮ […]