ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರ ಸಭೆ..!!
ಕಾರ್ಕಳ: ನೈಜ ಹಿಂದುತ್ವದ ಮೂಲಕ ಹಿಂದು ಕಾರ್ಯಕರ್ತರಿಗೆ ಧ್ವನಿಯಾಗುವ ನಾಯಕ , ಪ್ರಮಾಣಿಕತೆ ಸಾಕ್ಷಿಯಾಗಿರುವ ಪ್ರಮೋದ್ ಮುತಾಲಿಕ್ ಅವರನ್ನು ಗೆಲ್ಲಿಸುವಂತೆ ಖ್ಯಾತ ವಾಗ್ಮಿ ವಿಖ್ಯಾತ ರಾವ್ ಹೇಳಿದರು .ಅವರು ಕಾರ್ಕಳ ತಾಲೂಕಿನ ಹೊಸ್ಮಾರ್ ನಲ್ಲಿ ನಡೆದ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ ವತಿಯಿಂದ ನಡೆದ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಸುನೀಲ್ ಕುಮಾರ್ ಪಕ್ಷ ವಿರೋಧಿಗಳ ಬಳಿ ಕಾಲು ಹಿಡಿಯುವ ಬದಲು ನೀವು ಅಧಿಕಾರಕ್ಕೆ ಬರಲುಕಾರಣವಾದ ಸುಚೇತ ಕೊಲೆ ನ್ಯಾಯ ಕೊಡಿಸಿದ್ದಾರೆ ಸಾಕಿತ್ತು,ನೊಂದ […]
ಉಡುಪಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ , ಅಂಗವಿಕಲರ ಮತದಾನಕ್ಕೆ ಉತ್ತಮ ಸ್ಪಂದನೆ..!!
ಉಡುಪಿ: ಜಿಲ್ಲಾದ್ಯಂತ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಮತದಾನ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಒಟ್ಟು ಶೇ.97 ಮಂದಿ ಮತಚಲಾಯಿಸಿದ್ದಾರೆ. ಬೈಂದೂರು, ಕುಂದಾಪುರ ಹಾಗೂ ಕಾರ್ಕಳದಲ್ಲಿ ಶೇ.98 ಮತದಾನವಾದರೆ ಉಡುಪಿ ಹಾಗೂ ಕಾಪುವಿನಲ್ಲಿ ಶೇ.97 ಮತದಾನವಾಗಿದೆ. ಬೈಂದೂರಿನಲ್ಲಿ 1209 ಮತದಾರರ ಪೈಕಿ 1179, ಕುಂದಾಪುರದಲ್ಲಿ 991 ಮಂದಿಯ ಪೈಕಿ 968, ಉಡುಪಿಯಲ್ಲಿ 902 ಮಂದಿಯ ಪೈಕಿ 874, ಕಾಪುವಿನಲ್ಲಿ 606 ಮಂದಿಯ ಪೈಕಿ 588, ಕಾರ್ಕಳದಲ್ಲಿ 1108 ಮಂದಿಯ ಪೈಕಿ 1083 ಸಹಿತ ಒಟ್ಟು 4816 ಮಂದಿ […]
ಹತ್ತನೇ ತರಗತಿ ಫಲಿತಾಂಶ: ಚಿತ್ರದುರ್ಗ ರಾಜ್ಯದಲ್ಲೇ ಪ್ರಥಮ; 18- 19 ಸ್ಥಾನಕ್ಕೆ ತೃಪ್ತಿ ಪಟ್ಟ ಉಡುಪಿ-ದ.ಕ
ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಫಲಿತಾಂಶವನ್ನು kseab.karnataka.gov.in ಅಥವಾ karresults.nic.inನಲ್ಲಿ ಪರೀಕ್ಷಿಸಬಹುದು. ಪರೀಕ್ಷೆ ಬರೆದವರು: 8,35,102 ಪಾಸ್: 7,00,619 ತೇರ್ಗಡೆ ಪ್ರಮಾಣ: ಶೇ.83.89. ಚಿತ್ರದುರ್ಗ 96.80% ನೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಮತ್ತು 96.74% ನೊಂದಿಗೆ ಮಂಡ್ಯ ಮತ್ತು 96.68% ನೊಂದಿಗೆ ಹಾಸನ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ ಶೇ.89.48 ಮತ್ತು ಶೇ.89.47ರಷ್ಟು ಉತ್ತೀರ್ಣರಾಗುವ ಮೂಲಕ ರಾಜ್ಯದಲ್ಲಿ […]
ಕಾರ್ಕಳ ಮಂಡ್ಕೂರಿನಲ್ಲಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮತಯಾಚನೆ: ಕ್ಷೇತ್ರದ ಅಭಿವೃದ್ಧಿಗೆ ಜೊತೆಯಾಗುವಂತೆ ವಿನಂತಿ
ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಚುನಾವಣಾ ಪ್ರಚಾರ ನಡೆಸಿದರು.ಮುಂಡ್ಕೂರು, ಬೆಳ್ಮಣ್, ಸಚ್ಚರಿಪೇಟೆಯ ಭಾಗದ ಮನೆ ಮನೆಗೂ ತೆರಳಿ ಕಾರ್ಕಳದ ಅಭಿವೃದ್ಧಿಗೆ ತನ್ನ ಕನಸುಗಳೇನು ಎಂಬುದನ್ನು ಜನತೆಗೆ ಮನವರಿಕೆ ಮಾಡಿ, ಕಾರ್ಕಳದಲ್ಲಿ ಈ ಸಲ ಮತ ನೀಡಿ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಜೊತೆಯಾಗುವಂತೆ ಕೇಳಿಕೊಂಡರು.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಮೋಕಾ: ಮೇ 12ರ ವರೆಗೆ ಪೂರ್ವ ಕರಾವಳಿಯಲ್ಲಿ ಮಳೆ ಸಾಧ್ಯತೆ
ನವದೆಹಲಿ: ಭಾರತೀಯ ಹವಾಮಾನ ಇಲಾಖೆಯು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಅಭಿವೃದ್ಧಿ ಹೊಂದುತ್ತಿದ್ದು ಚಂಡಮಾರುತ ಮೋಕಾದ ಬಗ್ಗೆ ಸೂಚನೆ ನೀಡಿದ್ದು ಇದು ಮೇ 8 ರಿಂದ ಮೇ 12 ರವರೆಗೆ ದಕ್ಷಿಣ ಭಾರತದ ಹಲವೆಡೆ ಮುಂದಿನ ಕೆಲವು ದಿನಗಳವರೆಗೆ ಮಳೆಗೆ ಕಾರಣವಾಗಬಹುದು ಎಂದು ಹೇಳಿದೆ. ಹವಾಮಾನ ಸ್ಥಿತಿಯು ಮೇ 9 ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವನ್ನು ರೂಪಿಸುವ ಸಾಧ್ಯತೆಯಿದೆ ಮತ್ತು ನಂತರ ಚಂಡಮಾರುತವಾಗಿತೀವ್ರಗೊಳ್ಳುತ್ತದೆ ಎಂದು ಅದು ಹೇಳಿದೆ. ಯೆಮೆನ್‌ನಲ್ಲಿರುವ ಮೋಕಾ ಅಥವಾ […]