ಶಾಸಕರ ಆಪ್ತರ ಖಾತೆಗೆ ಕಮಿಷನ್- ಸುಳ್ಳು ಎಂದಾದರೆ ಪ್ರಮಾಣ ಮಾಡಲಿ: ಶುಭದರಾವ್ ಸವಾಲು..!!

ಕಾರ್ಕಳ: ಶಾಸಕ ಸುನೀಲ್ ಕುಮಾರ್ ಆಪ್ತರ ಖಾತೆಗೆ ಕಮಿಷನ್ ಸಂದಾಯವಾಗುತ್ತಿದೆ ಇದು ಸುಳ್ಳು ಎಂದು ಪ್ರಮಾಣ ಮಾಡುವ ದೈರ್ಯ ಶಾಸಕರಿಗೆ ಇದೆಯೇ ಎಂದು ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್ ಸವಾಲು ಹಾಕಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( ಕೆ.ಪಿ.ಟಿ.ಸಿ.ಎಲ್) ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಾಹನವನ್ನು ನಿಗಮದ ವತಿಯಿಂದ ನೀಡುತ್ತಿದ್ದು ಬಡ ವಾಹನದ ಮಾಲಕರು ಎಗ್ರಿಮೆಂಟ್ ಮೂಲಕ ಮಾಸಿಕ 32 ರಿಂದ ‌35 ಸಾವಿರ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ‌ಪಡೆಯುತ್ತಿದ್ದರು. ಸುನೀಲ್ ಕುಮಾರ್ ಇಂದನ […]

ಗುಂಡಿಬೈಲು: ಮನೆ-ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಿದ ಪ್ರಸಾದ್ ರಾಜ್ ಕಾಂಚನ್         

ಉಡುಪಿ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಇಂದು ಗುಂಡಿಬೈಲು ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಪ್ರಯುಕ್ತ ಮನೆ-ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದರು. ಗುಂಡಿಬೈಲು ವ್ಯಾಪ್ತಿಯ ನಾಗರಿಕರೋರ್ವರು ಮಾತನಾಡಿ, ಇಂದು ಪ್ರಾಮಾಣಿಕ, ಸಜ್ಜನ ವ್ಯಕ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆರಿಸಲಾಗಿದೆ. ಬಿಜೆಪಿಯ ಬೆಲೆ ಏರಿಕೆ, ಲಂಚ, ಮಂಚ ಮುಂತಾದ ಹಗರಣಗಳು ಬಯಲಿಗೆ ಬಂದು ಬಿಜೆಪಿ ಸುಳ್ಳಿನ ಪಕ್ಷ ಎಂಬುವುದು ಜನರಿಗೆ ಗೊತ್ತಾಗಿದೆ. ಇನ್ನು ಬಿಜೆಪಿ ಅಧಿಕಾರಕ್ಕೆ ಬರಲೇ ಬಾರದು ಎಂದು ಜನರು […]

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಭರ್ಜರಿ ರೋಡ್ ಶೋ: ಅಭಿವೃದ್ದಿ ಆಡಳಿತವೇ ಶ್ರೀ ರಕ್ಷೆ ಎಂದ ನಾಯಕರು

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರ ಪರವಾಗಿ ಬಿಜೆಪಿ ನಾಯಕರು ಮಲ್ಪೆಯ ಏಳೂರು ಮೊಗವೀರ ಸಭಾಭವನದ ಬಳಿಯಿಂದ ವಂಡಭಾಂಡೇಶ್ವರದ ಬಲರಾಮ ದೇವಸ್ಥಾನದ ವರೆಗೆ ಪಾದಯಾತ್ರೆಯ ಮೂಲಕ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಮಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು ಚುನಾವಣೆ ಸಂದರ್ಭದಲ್ಲಿ ಸೀಟನ್ನು ಪಡೆದುಕೊಂಡು ಬಂದು ನಿಮ್ಮ ಸೇವೆ ಮಾಡುವುದಾಗಿ ಹೇಳುವ ಇತರ ಪಕ್ಷದ ಅಭ್ಯರ್ಥಿಗಳಂತೆ ನಾನಲ್ಲ. ನನ್ನ […]

ಮೇ-7 ರಂದು ‘ಹೆವೆನ್ಲಿ ಸ್ಕೂಪ್’ ಐಸ್ ಕ್ರೀಂ ಪಾರ್ಲರ್ ಉದ್ಘಾಟನೆ

ಉಡುಪಿ: ಇಲ್ಲಿನ ಶಾಂತಿ ನಗರದ ಆಶಾ ನಿಲಯ ರಸ್ತೆಯಲ್ಲಿರುವ ಅನಂತ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಹೊಸದಾಗಿ ಪ್ರಾರಂಭವಾದ ‘ಹೆವೆನ್ಲಿ ಸ್ಕೂಪ್’ ಐಸ್ ಕ್ರೀಂ ಪಾರ್ಲರ್ ನ ಉದ್ಘಾಟನಾ ಸಮಾರಂಭವು ಮೇ. 7 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ಬೆಳ್ತಂಗಡಿ: ಕಮಲ ಪಡೆ ಸೇರಿದ ಕೈ ಪ್ರಮುಖರು

ಬೆಳ್ತಂಗಡಿ: ಇಲ್ಲಿನ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮೇ 5 ರಂದು ಕಮಲ ಪಡೆ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ರಾಜೇಶ್ ರಾವ್ ಅಳದಂಗಡಿ, ಕೃಷ್ಣ ಮೂಲ್ಯ ಸೋನಂದೂರು, ದಿನೇಶ್ ಮೂಲ್ಯ ಸೋನಂದೂರು, ದೇಜಪ್ಪ ಮೂಲ್ಯ ಸೋನಂದೂರು, ಸತೀಶ್ ಅಳದಂಗಡಿ, ಪ್ರಶಾಂತ್ ರಾವ್ ಅಳದಂಗಡಿ, ಹರೀಶ ಅಳದಂಗಡಿ, ಚಂದ್ರಶೇಖರ ಪೂಜಾರಿ ಕುತ್ಯಾಡಿ, ಆನಂದ ಪೂಜಾರಿ ಬಳಂಜ, ಚಂದು ಮೂಲ್ಯ ಶಿರ್ಲಾಲು, ಕುಟ್ಟಿ ಶೆಟ್ಟಿ ಅಳದಂಗಡಿ, ಮಾಲಿಂಗ ಸೂಳಬೆಟ್ಟು, ಚಂದು ನಾಯ್ಕ ಶಿರ್ಲಾಲು ಬಿಜೆಪಿಗೆ ಸೇರಿದರು.