ಕಾರಿನಲ್ಲಿ ಬಂದಾತನಿಂದ ಮೊಬೈಲ್ ಕಳವು
ಉಡುಪಿ: ಅಂಗಡಿಯಲ್ಲಿಟ್ಟಿದ್ದ ಮೊಬೈಲ್ ಕಳವಾದ ಘಟನೆ ನಡೆದಿದೆ. ಪ್ರದೀಪ್ ಸ್ಯಾಮುವೆಲ್ ಸದಾನಂದ ಅವರು ತಮ್ಮ ಮೊಬೈಲನ್ನು ರಿಪೇರಿ ಮಾಡುವ ಸಲುವಾಗಿ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಅಂಗಡಿಗೆ ಬಂದಿದ್ದರು. ಅಂಗಡಿಯ ಕೌಂಟರ್‌ನಲ್ಲಿ ಮೊಬೈಲ್ ಇಟ್ಟು, ಇನ್ನೊಂದು ಮೊಬೈಲ್‌ಗೆ ಬಂದ ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗ, ಇನ್ನೊವಾ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಓರ್ವ ಅಂಗಡಿಯ ಕೌಂಟರ್ ಮೇಲಿಟ್ಟಿದ್ದ ಮೊಬೈಲ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾನೆ. ಕಳವಾದ ಮೊಬೈಲ್‌ನ ಅಂದಾಜು […]
ಮೇ.6 ರವರೆಗೂ ರಾಜ್ಯದ ವಿವಿಧೆಡೆ ‘ಮಳೆ’ ಸಾಧ್ಯತೆ..!!
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆ ರಾಜ್ಯದ ಹಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್, ಯಾದಗಿರಿ […]
ಮಾಹೆ ವಿ.ವಿ.ಯಿಂದ ಯಕ್ಷಗಾನ ಕಲಾರಂಗಕ್ಕೆ 50 ಲ.ರೂ. ಕೊಡುಗೆ
ಉಡುಪಿ: ಯಕ್ಷಗಾನ ಪ್ರದರ್ಶನ, ಕಲೆ, ಕಲಾವಿದರ ಕ್ಷೇಮ ಚಿಂತನೆ, ಕಲಿಕೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಮಾರ್ಗದರ್ಶನ, ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಯಕ್ಷಗಾನ ಕಲಾರಂಗಕ್ಕೆ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಹೆ ವಿಶ್ವವಿದ್ಯಾನಿಲಯವು 50 ಲಕ್ಷ ರೂ.ನೆರವನ್ನು ಮಾಹೆ ವಿ.ವಿ.ಯ ಆಡಳಿತ ಸೌಧದಲ್ಲಿ ಗುರುವಾರ ವಿತರಿಸಿದೆ. ಬೆಂಗಳೂರು ಎಂಇಎಂಜಿ ಅಧ್ಯಕ್ಷ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಡಾ| ರಂಜನ್ ಆರ್. ಪೈ ಅವರು ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅವರಿಗೆ […]
ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 3 ನೇ ತಂಡದ ತರಬೇತಿ ಕಾರ್ಯಕ್ರಮದ ಉದ್ಘಾಟನೆ
ಉಡುಪಿ: ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 3 ನೇ ತಂಡದ ತರಬೇತಿಯ ಉದ್ಘಾಟನಾ ಸಮಾರಂಭ ಏ.17 ರಂದು ಬೆಳಿಗ್ಗೆ ಸಿಎಸ್‌ಪಿ ಕೇಂದ್ರ ಕಛೇರಿ ಮಲ್ಪೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಂದ್ರಿಯ ಕೈಗಾರಿಕಾ ಭದ್ರತಾ ದಳದ ಡೆಪ್ಯುಟಿ ಕಮಾಡೆಂಟ್ ಅಶುತೋಷ್ ಗೌರ್ ಮಾತನಾಡಿ, ಯಾವುದೇ ಉದ್ಯೋಗದಲ್ಲಿ ತರಬೇತಿಯು ಅತೀ ಅಗತ್ಯ. ತರಬೇತಿಯಲ್ಲಿ ಇಲಾಖೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಹಕಾರವಾಗುತ್ತದೆ. ಈ ಬಗ್ಗೆ ಸಿಐಎಸ್‌ಎಫ್ ವತಿಯಿಂದ ತರಬೇತಿಗೆ ಸಹಕಾರ ನೀಡಲಾಗುವುದು ಎಂದರು. ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು […]
ಉಡುಪಿ: ಮೇ 9 ಮತ್ತು10 ರಂದು ಕೆ. ಎಸ್.ಆರ್.ಟಿ. ಸಿ ಬಸ್ ಸಂಚಾರದಲ್ಲಿ ವ್ಯತ್ಯಯ
ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಚುನಾವಣೆ ನಡೆಯಲಿರುವುದರಿಂದ ಮೇ 9 ಹಾಗೂ 10 ರಂದು ಚುನಾವಣಾ ಕರ್ತವ್ಯದ ಸಾಂದರ್ಭಿಕ ಒಪ್ಪಂದದ ಮೇರೆಗೆ ಬಸ್ಸುಗಳನ್ನು ನಿಯೋಜನೆ ಮಾಡಲಾಗುತ್ತಿದ್ದು, ರಾಜ್ಯ ಸಾರಿಗೆ ಬಸ್ ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕ ಪ್ರಯಾಣಿಕರು ಕ.ರಾ.ರ.ಸಾ ನಿಗಮದೊಂದಿಗೆ ಸಹಕರಿಸುವಂತೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.