ಬಜರಂಗದಳ ಹಿಂದೂ ಸಮಾಜ, ದೇಶದ ಹಿತ ಕಾಯುವ ಸಂಘಟನೆ
ಕಾರ್ಕಳ: ಬಜರಂಗದಳವನ್ನು ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ನಾವು ಪಿಎಫ್‌ಐ ನಿಷೇಧ ಮಾಡಿದ್ದೇವೆಂಬ ಸಂಕಟ ಹಾಗೂ ದ್ವೇಷವನ್ನು ಬಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ.ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ಸಿನ ಬಜರಂಗ ದಳ ನಿಷೇಧ ಭರವಸೆ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಡಿಕೆಶಿ ಮತ್ತು ಸಿದ್ದರಾಮಯ್ಯನವರೇ ನಾವು ಪಿಎಫ್‌ಐ ನಿಷೇಧಿಸಿದ ಸಂಕಟ […]
ಮೇ-3 ಮಂಗಳೂರಿಗೆ ಪ್ರಧಾನಿ ಮೋದಿ: ವಾಹನ ಸಂಚಾರದಲ್ಲಿ ಬದಲಾವಣೆ
ಮಂಗಳೂರು: ಮೇ 3ರಂದು ಮುಲ್ಕಿಯ ಕೊಲ್ನಾಡು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನವ ಕರ್ನಾಟಕ ಸಂಕಲ್ಪ ಸಮಾವೇಶ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮೇ 3 ರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಬೆಳಗ್ಗೆ ಸುಮಾರು 10.30ರ ಬಳಿಕ ಪ್ರಧಾನಿ ಮೋದಿ ಕೊಲ್ನಾಡು ಹೆಲಿಪ್ಯಾಡ್‌ನಿಂದ ಕಾರ್ಯಕ್ರದ ಸ್ಥಳಕ್ಕೆ […]
ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹಿರಿಯಡಕದ ಸಾರ್ವಜನಿಕ ಸಭೆಯಲ್ಲಿ ಭಾಗಿ
ಹಿರಿಯಡಕ: ಕಾಪು ವಿಧಾನಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಹಿರಿಯಡ್ಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶ್ರೀ ಹರಿಕೃಷ್ಣ ಬಂಟ್ವಾಳ್ ಮತದಾರರಲ್ಲಿ ಮತಯಾಚಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಶ್ರೀ ಲಾಲಾಜಿ ಮೆಂಡನ್, ಕಾಪು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ನಾಯಕ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಳ್ಳಿ ಮತ್ತು ಕಲ್ಯಾ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದ ಸಚಿವ ಸುನಿಲ್ ಕುಮಾರ್
ಕಾರ್ಕಳ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಪಳ್ಳಿ ಮತ್ತು ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಇಂದು ಭೇಟಿ ಮಾಡಿದರು. ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿದರ ಮೂಲಕ ಕಾರ್ಕಳವನ್ನು ಅಭಿವೃದ್ಧಿಗೊಳಿಸುವಂತೆ ಕೋರಿದರು.
ಸಾರ್ವಕಾಲಿಕ ಗರಿಷ್ಠ ಜಿಎಸ್‌ಟಿ ಸಂಗ್ರಹಣೆ: ಶೇ 12 ರಷ್ಟು ಏರಿಕೆ; 1.87 ಲಕ್ಷ ಕೋಟಿ ರೂ ಸಂಗ್ರಹಣೆ
ನವದೆಹಲಿ: ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಏಪ್ರಿಲ್‌ನಲ್ಲಿ ಶೇ 12 ರಷ್ಟು ಏರಿಕೆಯಾಗಿ 1.87 ಲಕ್ಷ ಕೋಟಿ ರೂ ಸಂಗ್ರಹಣೆಯಾಗಿದೆ. ಜುಲೈ 2017 ರಲ್ಲಿ ಜಿಎಸ್‌ಟಿ ಅನ್ನು ಬಿಡುಗಡೆ ಮಾಡಿದ ನಂತರ ಇದು ಅತ್ಯಧಿಕ ಮಾಸಿಕ ಮಾಪ್-ಅಪ್ ಆಗಿದೆ. 20 ಏಪ್ರಿಲ್ 2023 ರಂದು 9.8 ಲಕ್ಷ ವಹಿವಾಟುಗಳ ಮೂಲಕ ಒಂದೇ ದಿನದಲ್ಲಿ ಸಂಗ್ರಹಿಸಲಾದ ಅತಿ ಹೆಚ್ಚು ತೆರಿಗೆ 68,228 ಕೋಟಿ ರೂಪಾಯಿ. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, 1,87,035 ಕೋಟಿಗಳ […]