ಉಡುಪಿ: ಮೇ 2 ರಿಂದ 5 ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಮೇ 2 ರಿಂದ 5 ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 220/110/11 ಕೆ.ವಿ ಕೇಮಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್ ಸಸ್ಲೈ 110/11 ಕೆ.ವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಪದವು ಫೀಡರ್ ಹಾಗೂ 110/11 ಕೆ.ವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 […]

ಔರಾ ಕೆಫೆ&ಕೇಕ್ ಶಾಪ್ ಶುಭಾರಂಭ

ಉಡುಪಿ: ನಗರದ ಹೊಸ ಬಸ್ ನಿಲ್ದಾಣದ ಬಳಿಯ ಜಿ.ಬಿ. ಪಂತ್ ರಸ್ತೆಯಲ್ಲಿರುವ ಗ್ರಾಸ್ ಲಾಂಡ್ ಕಾಂಪ್ಲೆಕ್ಸ್ ನಲ್ಲಿ ಔರಾ ಕೆಫೆ ಶಾಪ್ ಭಾನುವಾರಂದು ಶುಭಾರಂಭಗೊಂಡಿತು. ಸೇಂಟ್ ಆಂಟೋನಿ ಆರ್ಥೊಡಾಕ್ಸ್ ಚರ್ಚ್ ಕೊಳಲಗಿರಿ ಇದರ ಧರ್ಮಗುರು ಫಾ.ಡೇವಿಡ್ ಕ್ರಾಸ್ತಾ ಬೇಕರಿಯನ್ನು ಉದ್ಘಾಟಿಸಿದರು. ಬೇಕರಿ ಮಾಲೀಕರಾದ ನಿಶಾನ್ ಡಿಸೋಜಾ ಮತ್ತು ನೆಯಾನ್ ಡಿಸೋಜಾ ಉಪಸ್ಥಿತರಿದ್ದರು. ಔರಾ ಕೆಫೆ ಶಾಪ್ ನಲ್ಲಿ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್, ಬೇಕರಿ ಉತ್ಪನ್ನಗಳು, ಚಾಕೋಲೇಟ್ ಗಳು ಹಾಗೂ ಪೆಸ್ಟ್ರಿಗಳು ದೊರೆಯುತ್ತವೆ.